ETV Bharat / sports

WTC 21 Final: ಭಾರತದ ಬೌಲಿಂಗ್‌ ಸಂಯೋಜನೆ ಸಮರ್ಥಿಸಿಕೊಂಡ ವಿರಾಟ್ ಕೊಹ್ಲಿ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಮ್ಮ ತಂಡದ ಸೋಲಿಗೆ ಬೌಲಿಂಗ್ ಸಂಯೋಜನೆ ಕಾರಣವಲ್ಲ ಎಂದಿದ್ದಾರೆ.

Kohli defends team combination after WTC final defeat
ಟೀಂ ಇಂಡಿಯಾ ಆಯ್ಕೆ
author img

By

Published : Jun 24, 2021, 7:03 AM IST

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC Final) ಫೈನಲ್‌ ಪಂದ್ಯಕ್ಕಾಗಿ ಭಾರತದ ಬೌಲಿಂಗ್ ಸಂಯೋಜನೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಭಾರತವು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಸೇರಿದಂತೆ ಮೂವರು ವೇಗಿಗಳನ್ನು ಭಾರತ ಕಣಕ್ಕಿಳಿಸಿತ್ತು.

ಬೌಲರ್​ಗಳನ್ನು ಆಯ್ಕೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಬೌಲಿಂಗ್​ನೊಂದಿಗೆ ಹೆಚ್ಚಿನ ರನ್​ ಗಳಿಸುವ ಸಲುವಾಗಿ ಈ ಆಯ್ಕೆ ನಮಗೆ ಅವಶ್ಯಕತೆ ಇತ್ತು ಎಂದು ಕೊಹ್ಲಿ ಪಂದ್ಯದ ಬಳಿಕ ವಿವರಿಸಿದರು.

ನಮಗೆ ಆಲ್‌ರೌಂಡರ್​ಗಳ ಅಗತ್ಯವಿತ್ತು. ನಾವು ಈ ರೀತಿ ಬೌಲರ್​ಗಳನ್ನು ಸಂಯೋಜನೆ ಮಾಡುವಲ್ಲಿ ಯಶಸ್ಸು ಕಂಡಿದ್ದೇವೆ. ಇದು ಉತ್ತಮ ಆಯ್ಕೆ ಎಂದು ನಾವು ನಂಬುತ್ತೇವೆ. ನಮ್ಮಲ್ಲಿ ಬ್ಯಾಟಿಂಗ್ ಡೆಪ್ತ್ ಇತ್ತು, ಪಂದ್ಯದ ಸಮಯ ಹೆಚ್ಚಿದ್ದರೆ, ಸ್ಪಿನ್ನರ್​ಗಳು ಆಟ ಮುಂದುವರೆಸುತ್ತಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟಕ್ಕೆ ಮುತ್ತಿಟ್ಟ ನ್ಯೂಜಿಲೆಂಡ್‌; ಮುಗ್ಗರಿಸಿದ ಟೀಂ ಇಂಡಿಯಾ

ನಾವು ಕೇವಲ ಮೂರು ವಿಕೆಟ್​ಗಳನ್ನು ಕಳೆದುಕೊಂಡಿದ್ದೇವೆ. ಅಡೆತಡೆಗಳಿಲ್ಲದೆ ಪಂದ್ಯ ಮುಂದುವರೆದಿದ್ದರೆ ನಮಗೆ ಹೆಚ್ಚು ರನ್ ಗಳಿಸಬಹುದಿತ್ತು. ಇವತ್ತು ಕಿವೀಸ್ ಬೌಲರ್​ಗಳನ್ನು ಅವರ ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರು. ಈ ಮೂಲಕ ನಮ್ಮನ್ನು ಸೋಲಿಸಿದರು. ನಾವು 30-40 ರನ್​ಗಳ ಅಂತರದಿಂದ ಸೋತಿದ್ದೇವೆ ಅಷ್ಟೇ ಎಂದು ಕೊಹ್ಲಿ ಸೋಲಿನ ಪರಾಮರ್ಶೆ ನಡೆಸಿದರು.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿರಾಟ್‌ ಕೊಹ್ಲಿ ಪಡೆ 139ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಕೇನ್‌ ಮಿಲಿಯಮ್ಸನ್‌ ಪಡೆ 2 ವಿಕೆಟ್‌ ಕಳೆದುಕೊಂಡು ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಕಳೆದ ಬಾರಿಯ ಏಕದಿನ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಸೋತ ಸೇಡು ತೀರಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ವಿಫಲವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.