ದುಬೈ: ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 10,000 ರನ್ ಪೂರೈಸಿದ್ದಾರೆ. ಈ ಮುಖೇನ ವಿಶಿಷ್ಟ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 13 ರನ್ಗಳಿಸುತ್ತಿದ್ದಂತೆ ಕೊಹ್ಲಿ ಈ ಮೈಲುಗಲ್ಲನ್ನು ಸ್ಥಾಪಿಸಿದರು. ಕೊಹ್ಲಿ ತಮ್ಮ 299ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದು ದೇಶದ ಮೊದಲ ಭಾರತೀಯ ಹಾಗೂ ವಿಶ್ವದ 6ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
-
6️⃣ Pulled away for a maximum and Virat Kohli reaches 1️⃣0️⃣0️⃣0️⃣0️⃣ runs in T20s. 🤩🤩🤩
— Royal Challengers Bangalore (@RCBTweets) September 26, 2021 " class="align-text-top noRightClick twitterSection" data="
Mr. Milestone. 😎#PlayBold #WeAreChallengers #ನಮ್ಮRCB #IPL2021 #RCBvMI
">6️⃣ Pulled away for a maximum and Virat Kohli reaches 1️⃣0️⃣0️⃣0️⃣0️⃣ runs in T20s. 🤩🤩🤩
— Royal Challengers Bangalore (@RCBTweets) September 26, 2021
Mr. Milestone. 😎#PlayBold #WeAreChallengers #ನಮ್ಮRCB #IPL2021 #RCBvMI6️⃣ Pulled away for a maximum and Virat Kohli reaches 1️⃣0️⃣0️⃣0️⃣0️⃣ runs in T20s. 🤩🤩🤩
— Royal Challengers Bangalore (@RCBTweets) September 26, 2021
Mr. Milestone. 😎#PlayBold #WeAreChallengers #ನಮ್ಮRCB #IPL2021 #RCBvMI
ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ಗೇಲ್ (14,275), ಕೀರನ್ ಪೊಲಾರ್ಡ್(11,195), ಪಾಕಿಸ್ತಾನದ ಶೋಯಬ್ ಮಲಿಕ್(10,808), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಟಿ20 ಮಾದರಿಯಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.
ಮೂರು ಮಾದರಿಯಲ್ಲೂ 10 ಸಾವಿರ ರನ್ ಬಾರಿಸಿದ 2ನೇ ಬ್ಯಾಟರ್
ರನ್ ಮಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ನ ಮೂರು ಮಾದರಿಯ ಕ್ರಿಕೆಟ್ನಲ್ಲಿ 10 ಸಾವಿರ ರನ್ ಸಿಡಿಸಿ ವಿಶ್ವದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಅವರು ಟಿ20ಯಲ್ಲಿ10,000*, ಲಿಸ್ಟ್ ಎನಲ್ಲಿ(50 ಓವರ್) 13,611 ರನ್ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ 10,014 ರನ್ಗಳಿಸಿದ್ದಾರೆ. ಇವರಿಗಿಂತ ಮೊದಲು ಕ್ರಿಸ್ ಗೇಲ್ ಮಾತ್ರ ಈ ದಾಖಲೆ ಮಾಡಿದ್ದರು. ಗೇಲ್ ಪ್ರಥಮ ದರ್ಜೆಯಲ್ಲಿ 13,226, ಲಿಸ್ಟ್ ಎನಲ್ಲಿ 13,189 ಮತ್ತು ಟಿ20 ಯಲ್ಲಿ 14, 275 ರನ್ ಬಾರಿಸಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್