ಏಷ್ಯಾಕಪ್ ಟೂರ್ನಿಯಲ್ಲಿ ಕೆಎಲ್ ರಾಹುಲ್ರ ನಿಧಾನಗತಿಯ ಬ್ಯಾಟಿಂಗ್ ಈಗ ಚರ್ಚಾ ವಿಷಯವಾಗಿದೆ. ರಾಹುಲ್ ರನ್ ಗಳಿಸಲು ಪರದಾಡಿದ್ದಲ್ಲದೇನು ನಿಧಾನಗತಿಯಾಗಿ ಬ್ಯಾಟ್ ಬೀಸಿದ್ದನ್ನು ಹಲವರು ಟೀಕಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್, ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರಯತ್ನ ಹಾಕಿದ್ದೇನೆ. ಪ್ರತಿ ಸಲವೂ 200 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಲು ಆಗಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಟಿ-20 ಹೊಡಿ ಬಡಿ ಆಟವಾದ ಕಾರಣ ನಿಧಾನಗತಿ ಬ್ಯಾಟಿಂಗ್ನಿಂದ ತಂಡ ಸೋಲುವ ಸಂಭವ ಹೆಚ್ಚಿಸುತ್ತದೆ. ಹೀಗಾಗಿ ಆಟಗಾರ ಕಡಿಮೆ ಬಾಲ್ನಲ್ಲಿ ಹೆಚ್ಚು ರನ್ ಗಳಿಸಲು ಯುತ್ನಿಸಬೇಕು. ಏಷ್ಯಾಕಪ್ನಲ್ಲಿ ಇದರಲ್ಲಿ ರಾಹುಲ್ ಕೊಂಚ ಎಡವಿದ್ದರು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತಂದಿತ್ತು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬದಲಾಗಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಇಳಿದು ಮಿಂಚಿನ ಶತಕ ಸಿಡಿಸಿದ ಬಳಿಕ ಅವರನ್ನೇ ಆರಂಭಿಕನಾಗಿ ಇಳಿಸುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿದ್ದವು. ಕೆ ಎಲ್ ರಾಹುಲ್ರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಮುಂಬರುವ ಟಿ-20 ವಿಶ್ವಕಪ್ನಲ್ಲಿ ರೋಹಿತ್ ಮತ್ತು ವಿರಾಟ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದಾರಾ ಎಂಬ ಗೊಂದಲವೂ ಮೂಡಿತ್ತು.
ಇದಕ್ಕೆ ನಾಯಕ ರೋಹಿತ್ ಸ್ಪಷ್ಟನೆ ನೀಡಿ, ನನ್ನ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ 3ನೇ ಕ್ರಮಾಂಕದಲ್ಲೇ ಆಡ್ತಾರೆ ಅಂದಿದ್ದರು. ರಾಹುಲ್ ನಿಧಾನವಾಗಿ ಆಡುತ್ತಿರುವುದು ವಿಕೆಟ್ ತಂಡ ವಿಕೆಟ್ ಕಾಪಾಡಿಕೊಳ್ಳುವ ಯೋಜನೆ ಎಂದು ಹೇಳಿದಾಗ್ಯೂ, ಚುಟಕು ಕ್ರಿಕೆಟ್ನಲ್ಲಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಇನ್ನೊಂದು ವಾದವಾಗಿತ್ತು.
ರಾಹುಲ್ ಜೊತೆಗೆ ಇನಿಂಗ್ಸ್ ಆರಂಭ: ಇದಕ್ಕಾಗಿ ರಾಹುಲ್ರ ಕ್ರಮಾಂಕವನ್ನು ಬದಲಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಎಲ್ಲ ಪ್ರಶ್ನೆಗಳಿಗೆ ರಾಹುಲ್ ಉತ್ತರ ನೀಡಿದ್ದು, ತಂಡವನ್ನು ಗೆಲ್ಲಿಸುವುದೇ ಪ್ರತಿ ಆಟಗಾರನ ಗುರಿಯಾಗಿರುತ್ತದೆ. ಬ್ಯಾಟರ್ಗಳು ಒಬ್ಬರಿಗೊಬ್ಬರು ಭಿನ್ನ ಸ್ಟ್ರೈಕ್ರೇಟ್ ಹೊಂದಿರುತ್ತಾರೆ. ಯಾರಿಗೂ ಹೋಲಿಕೆ ಮಾಡಬಾರದು ಎಂದಿದ್ದರು.
ಪ್ರತಿ ಬಾರಿ 200 ರ ಸರಾಸರಿಯಲ್ಲಿ ಆಡಲಾಗದು: "ಇಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೆಣಗಾಡುತ್ತಿರುತ್ತಾರೆ. ಎಲ್ಲರಿಗೂ ತಂಡದಲ್ಲಿ ನಿರ್ದಿಷ್ಟ ಪಾತ್ರವಿರುತ್ತದೆ. ಸ್ಟ್ರೈಕ್ ರೇಟ್ ಆಧಾರದ ಮೇಲೆ ಆಟವನ್ನು ನಿರ್ಧರಿಸಲಾಗದು. ಪ್ರತಿ ಬಾರಿ 200 ರ ಸ್ಟ್ರೈಕ್ರೇಟ್ನಲ್ಲಿ ಯಾವ ಆಟಗಾರ ಆಡಲಾರ. ಕೆಲವೊಮ್ಮೆ ಪರಿಸ್ಥಿತಿ ನೋಡಿ 120ರ ರನ್ ದರದಲ್ಲೂ ಆಟವಾಡಬೇಕು" ಎಂದು ಉತ್ತರಿಸಿದ್ದರು.
ಜಿಂಬಾಬ್ವೆ ಸರಣಿಗೂ ಮೊದಲು ತೊಡೆಸಂದು ಗಾಯಕ್ಕೆ ತುತ್ತಾದ ರಾಹುಲ್, ಚಿಕಿತ್ಸೆ ಪಡೆದ ಬಳಿಕ ತಿಂಗಳುಗಳ ಕ್ರಿಕೆಟ್ನಿಂದ ದೂರವಿದ್ದರು. ಬಳಿಕ ಅವರು ಏಷ್ಯಾಕಪ್ನಲ್ಲಿ ಆಡಿ, 120 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು. ಕೆಲ ಪಂದ್ಯಗಳಲ್ಲಿ ವಿಫಲವಾಗಿದ್ದಕ್ಕೆ ಅಭಿಮಾನಿಗಳು ಬೇಸರಿಸಿದ್ದರು.
ಕಠಿಣ ಪರಿಶ್ರಮ ಸಾಗಿದೆ: ನಾನು ತಂಡಕ್ಕಾಗಿ ನೂರರಷ್ಟು ಶ್ರಮ ಹಾಕುತ್ತಿದ್ದೇನೆ. ತಂಡ ನನ್ನಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಅದನ್ನು ಪೂರೈಸಲು ನಾನು ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಆಟದಲ್ಲಿ ಸ್ವಲ್ಪ ವ್ಯತ್ಯಾಸವಾಗುವುದು ಸಹಜ ಎಂದಿದ್ದಾರೆ.
ಓದಿ: ಲಾಲಾರಸದ ಬಳಕೆ ನಿಷೇಧ: ವಿಶ್ವ ಕ್ರಿಕೆಟ್‌ಗೆ ಮಹತ್ವದ ಬದಲಾವಣೆ ತಂದ ಐಸಿಸಿ