ETV Bharat / sports

ಕೆ ಎಲ್​ ರಾಹುಲ್​ ಕಳಪೆ ಪ್ರದರ್ಶನ: ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡುವ ಸಾಧ್ಯತೆ - india vs australia

ಭಾರತ ಕ್ರಿಕೆಟ್​ ತಂಡದ ಹಂಗಾಮಿ ನಾಯಕನ ಕಳಪೆ ಪ್ರದರ್ಶನ ಹಿನ್ನೆಲೆ - ಮುಂದಿನ ಸರಣಿಯಿಂದ ಹೊರಗುಳಿಯುವ ಸಾದ್ಯತೆ - ಕುಲ್ದೀಪ್​​ ​ಯಾದವ್​ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಟೀಕೆಗಳ ಸುರಿಮಳೆ.

kl-rahul-may-be-drop-in-next-series-against-srilanka-or-australia
ಕೆಎಲ್​ ರಾಹುಲ್​ ಕಳಪೆ ಪ್ರದರ್ಶನ: ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡುವ ಸಾದ್ಯತೆ
author img

By

Published : Dec 26, 2022, 5:25 PM IST

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಬೆನ್ನಲ್ಲೇ ಭಾರತ ತಂಡದ ಹಂಗಾಮಿ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ವ್ಯಾಪಕವಾಗಿ ಚರ್ಚೆ ಆರಂಭವಾಗಿದೆ. ಬಾಂಗ್ಲಾದೇಶ ವಿರುದ್ಧದ 3 ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ನಿಂದ ಮ್ಯಾಜಿಕ್ ತೋರದ ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಲ್ಲಿ ಅಥವಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಆಯ್ಕೆದಾರರು ಕೆಎಲ್ ರಾಹುಲ್ ಅವರನ್ನು ಕೈಬಿಡಬಹುದು ಎಂದು ಉಹಿಸಲಾಗಿದೆ. ತಂಡದಲ್ಲಿ ಆಯ್ಕೆಯಾದ ನಂತರವು ಅವರು ಕೊನೆಯ ಹನ್ನೊಂದರ ಬಳಗದಲ್ಲಿ ಸ್ಥಾನ ಪಡಯುತ್ತಾರೋ ಇಲ್ಲವೋ ಎಂಬುದು ಕಾದು ನೋಡಬೇಕಾಗಿದೆ.

ಕೆಎಲ್ ರಾಹುಲ್ ಬಗ್ಗೆ, ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಬಾಂಗ್ಲಾದೇಶದಲ್ಲಿ ನಡೆದ ಎರಡು ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ನಂತರ ಆಸ್ಟ್ರೇಲಿಯಾ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕ ಕೆಎಲ್ ರಾಹುಲ್ ಅವರನ್ನು ಆಡುವ 11 ಆಟಗಾರರ ಸಂಭಾವ್ಯ ಪಟ್ಟಿಯಿಂದ ಕೈಬಿಡಲಾಗುವುದು ಎಂದು ನಂಬಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 22, 23, 10 ಮತ್ತು 2 ರನ್ ಗಳಿಸಲು ಸಾಧ್ಯವಾಯಿತು. ಗಮನಾರ್ಹವಾಗಿ, ಭಾರತದ ಆರಂಭಿಕ ಕೆಎಲ್​ ರಾಹುಲ್​ 2022 ರಲ್ಲಿ ನಾಲ್ಕು ಟೆಸ್ಟ್‌ಗಳಲ್ಲಿ 17.13 ಸರಾಸರಿಯಲ್ಲಿ ಕೇವಲ 137 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಈ ಸಂಗತಿಯನ್ನು ಕಾಣಬಹುದು ಎಂದು ಕ್ರಿಕೆಟ್​ ತಜ್ಞರು ಉಹಿಸಿದ್ದಾರೆ.

ಕುಲ್ದೀಪ್​​ ಯಾದವ್​ಗೆ ಕೋಕ್​: ಢಾಕಾ ಟೆಸ್ಟ್​ನಲ್ಲಿ ಮಿಂಚಿದ ಚೈನಾಮನ್ ಬೌಲರ್​ ಕುಲ್ದೀಪ್​ ಯಾದವ್ ಅವರನ್ನು ಆಡುವ ಇಲೆವೆನ್​ನಿಂದ ಕೈಬಿಡುವ ನಿರ್ಧಾರವನ್ನು ಹಂಗಾಮಿ ನಾಯಕ ಕೆಎಲ್ ರಾಹುಲ್ ಸಮರ್ಥಿಸಿಕೊಂಡಿದ್ದಾರೆ. ಪಂದ್ಯದ ಹಿಂದಿನ ದಿನ ಮತ್ತು ಬೆಳಗ್ಗೆ ಪಿಚ್ ನೋಡಿ ಪರೀಕ್ಷಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಢಾಕಾ ಪಂದ್ಯದಲ್ಲಿ ಕುಲ್ದೀಪ್​ ಯಾದವ್​ 22 ತಿಂಗಳ ನಂತರ ಟೆಸ್ಟ್ ಪುನರಾಗಮನ ಮಾಡಿದರು ಮತ್ತು ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ನಂತರವೂ ಪಂದ್ಯದಿಂದ ಹೊರಗೆ ಕುಳಿತು ಕೊಳ್ಳಬೇಕಾಯಿತು ಎಂದು ಹೇಳಿದರು.

ಆದರೆ ಶೇರ್ - ಎ - ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ, 12 ವರ್ಷಗಳ ನಂತರ ಎಡಗೈ ವೇಗದ ಬೌಲರ್ ಜಯದೇವ್ ಉನದ್ಕಟ್​ ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದು, ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು. ಕುಲ್ದೀಪ್​ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ತಂಡದ ನಾಯಕ ಮತ್ತು ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ ತೀವ್ರ ಟೀಕೆಗೆ ಒಳಗಾಗಿದ್ದರು. ಭಾರತದ ಅನುಭವಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಈ ನಿರ್ಧಾರವನ್ನು 'ಇದು ನಂಬಲಾಗದ ಸಂಗತಿ' ಎಂದು ಬಣ್ಣಿಸಿದ್ದಾರೆ.

2023ರ ಐಪಿಎಲ್‌ ಸೀಸನ್‌ನಲ್ಲಿ ಪರಿಚಯಿಸಲಾಗುವುದು ಪರಿಣಾಮ ಆಟಗಾರರ ನಿಯಮವು ಟೆಸ್ಟ್ ಪಂದ್ಯಗಳಲ್ಲಿಯೂ ಇದ್ದಲ್ಲಿ, ನಾನು ಖಂಡಿತವಾಗಿಯೂ ಕುಲದೀಪ್ ಅವರನ್ನು ಎರಡನೇ ಪಂದ್ಯದಲ್ಲಿ ಆಡಿಸುತ್ತಿದ್ದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಕುಲ್​ದೀಪ್​ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅತ್ಯತ್ತಮವಾದ ಪ್ರದರ್ಶನ ನೀಡಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರು ಆ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು, ಅಂತಹ ಪರಿಸ್ಥಿತಿಯಲ್ಲಿ, ಆಟಗಾರನನ್ನು ಹೊರಗಿಡಲು ಯಾವುದೇ ಸಮರ್ಥನೆ ಇರಲಿಲ್ಲ ಎಂದು ಮಾಜಿ ಕ್ರಿಕೆಟಿಕ ಸುನೀಲ್​ ಗವಾಸ್ಕರ್​​ ಹೇಳಿದ್ದಾರೆ.

ಸರಿಯಾದ ನಿರ್ಧಾರ: ಉತ್ತಮ ಪ್ರದರ್ಶನ ನೀಡಿದ ಆಟಗಾರನನ್ನು ಪಂದ್ಯದಿಂದ ಹೊರ ಕೂಡಿಸುವುದು ಕಠಿಣ ನಿರ್ಧಾರವಾಗಿತ್ತು. ಆದರೆ, ಪಂದ್ಯದ ಆರಂಭದ ಮೊದಲು ಪಿಚ್ ನೋಡಿ, ನಾವು ತಂಡದಲ್ಲಿ ಸಮತೋಲನವನ್ನು ಸಾಧಿಸುವುದು ಸರಿ ಎಂದು ತಿರ್ಮಾನಿಸಲಾಗಿತ್ತು.

ಆದರೆ, ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಸಮಾನ ಅವಕಾಶಗಳನ್ನು ನೀಡಲು ಬಯಸಿದ್ದೇವು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ಆ ನಿರ್ಧಾರಕ್ಕೆ ನಾನು ವಿಷಾದಿಸುವುದಿಲ್ಲ, ಇದು ಸರಿಯಾದ ನಿರ್ಧಾರ. ನೀವು ಗಮನಿಸಿದರೆ, ವೇಗದ ಬೌಲರ್‌ಗಳು ಪಂದ್ಯದಲ್ಲಿ 20 ವಿಕೆಟ್‌ ತೆಗೆದುಕೊಂಡರು , ಪಿಚ್​ ವೇಗದ ಬೌಲರ್‌ಗಳಿಗೆ ಹೆಚ್ಚು ಸಹಾಕಾರಿಯಾಗಿತ್ತು. ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಕೆಎಲ್​ ರಾಹುಲ್​ ಉತ್ತರಿಸಿದರು.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೆಸ್ಟ್‌ ಸರಣಿ ಗೆದ್ದ ಭಾರತ; 2ನೇ ಟೆಸ್ಟ್‌ನಲ್ಲಿ ಅಶ್ವಿನ್‌, ಅಯ್ಯರ್‌ ಬ್ಯಾಟಿಂಗ್‌ ಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.