ETV Bharat / sports

KL Rahul: ಏಷ್ಯಾ ಕಪ್​ ಸಿದ್ಧತೆಗೆ ಬೆಂಗಳೂರು ತಲುಪಿದ ಕೆಎಲ್​ ರಾಹುಲ್​.. ಮನೆ ಎಂದು ಟ್ವಿಟ್​ ಮಾಡಿದ ಲೋಕೇಶ್​ - ETV Bharath Kannada news

ಕೆಎಲ್​ ರಾಹುಲ್​ ಎನ್​ಸಿಎಯಲ್ಲಿ ಪುನರ್ವಸತಿಗಾಗಿ ಸೇರಿಕೊಂಡಿದ್ದಾರೆ. ಭಾರತದ ಮುಂದಿನ ಸರಣಿಗಳಲ್ಲಿ ಮಧ್ಯಮ ಕ್ರಮಾಂಕ ಮತ್ತು ಕೀಪರ್​ ಆಗಿ ತಂಡವನ್ನು ಸೇರಲು ರಾಹುಲ್​ ತಯಾರಿ ನಡೆಸುತ್ತಿದ್ದಾರೆ.

KL Rahul
ಕೆಎಲ್​ ರಾಹುಲ್​
author img

By

Published : Jun 14, 2023, 12:38 PM IST

ಬೆಂಗಳೂರು: ಭಾರತ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಹೊರಗುಳಿದಿದ್ದರು. ಇದೀಗ ರಾಹುಲ್ ಆರೋಗ್ಯದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ. ಬ್ರಿಟನ್‌ನಲ್ಲಿ ರಾಹುಲ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ಅವರು ಭಾರತಕ್ಕೆ ಮರಳಿದ್ದಾರೆ ಮತ್ತು ಏಷ್ಯಾ ಕಪ್ 2023 ಗಾಗಿ ತಯಾರಿ ಆರಂಭಿಸಿದ್ದಾರೆ. ಈ ವರ್ಷ ಭಾರತ ತಂಡ ಏಕದಿನ ವಿಶ್ವಕಪ್‌ನಿಂದ ಏಷ್ಯಾಕಪ್ ಆಡಬೇಕಿದೆ. ಎರಡು ದೊಡ್ಡ ಟೂರ್ನಿಗಳಿಗೂ ಮುನ್ನ ಕೆಎಲ್ ರಾಹುಲ್ ಫಿಟ್​​ ಆಗಿರುವುದು ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

ಭಾರತದ ಅನುಭವಿ ಬ್ಯಾಟರ್​ ಲೋಕೇಶ್ ರಾಹುಲ್ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಏಕದಿನ ವಿಶ್ವಕಪ್‌ಗೆ ಮೊದಲು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್‌ಗಾಗಿ ತಂಡಕ್ಕೆ ಮರಳಬಹುದಾಗಿದೆ. ಜೂನ್ 13 ಮಂಗಳವಾರದಂದು ಪುನರ್ವಸತಿಗಾಗಿ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ತಲುಪಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಗಾಯಗೊಂಡರು. ಅವರ ಗಾಯದ ಕಾರಣ, ರಾಹುಲ್ ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡದಿಂದ ಹೊರಗುಳಿದಿದ್ದರು. ಆಗ ವೈದ್ಯರು ರಾಹುಲ್​ಗೆ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದರು.

KL Rahul
ಮನೆ ಎಂದು ಟ್ವಿಟ್​ ಮಾಡಿದ ಕ್ರಿಕೆಟಿಗ

ಫಿಟ್ ಆದ ಕೆಎಲ್ ರಾಹುಲ್: ಕೆಎಲ್ ರಾಹುಲ್ ಬ್ರಿಟನ್​ನಲ್ಲಿ ಮಾಡಿಸಿಕೊಂಡ ಆಪರೇಷನ್ ಯಶಸ್ವಿಯಾಗಿದೆ. ಜೂನ್ 13 ಮಂಗಳವಾರದಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೆಲ ಚಿತ್ರಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಈ ಫೋಟೋ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯದ್ದು. ಅವರು NCA ಯಲ್ಲಿ ತಮ್ಮ ಪುನರ್ವಸತಿಯನ್ನು ಪ್ರಾರಂಭಿಸಿದ್ದಾರೆ. ಟ್ವಿಟರ್​ನಲ್ಲಿ ನಾಲ್ಕು ಫೋಟೋಗಳನ್ನು ಹಂಚಿಕೊಂಡು ಮನೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.

ಏಕದಿನ ಮಾದರಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಲ್ಲದೆ, ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ಹೊತ್ತಿರುವ ರಾಹುಲ್, ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಏಕದಿನ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ರಾಹುಲ್ 47 ಟೆಸ್ಟ್ ಪಂದ್ಯಗಳಲ್ಲಿ ಎರಡು ಸಾವಿರದ 642 ರನ್, 54 ಏಕದಿನ ಪಂದ್ಯಗಳಲ್ಲಿ ಒಂದು ಸಾವಿರದ 986 ರನ್ ಮತ್ತು 72 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2265 ರನ್ ಗಳಿಸಿದ್ದಾರೆ. ಇದರಲ್ಲಿ ಅವರ 14 ಅಂತಾರಾಷ್ಟ್ರೀಯ ಶತಕಗಳೂ ಸೇರಿವೆ.

ಆರ್​ಸಿಬಿ ಪಂದ್ಯದ ವೇಳೆ ಗಾಯ: ಮೇ 1 ರಂದು ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಎಲ್​ ರಾಹುಲ್​ ಬೌಂಡರಿ ಲೈನ್​ ಬಳಿ ಫಿಲ್ಡಿಂಗ್​ ಮಾಡುವಾಗ ಡೈವ್​ ಬಿದ್ದ ಅವರು ತೊಡೆಯ ಜಾಗಕ್ಕೆ ಗಂಭೀರ ನೋವಿಗೆ ತುತ್ತಾದರು. ನಂತರ ಸಂಪೂರ್ಣ ಐಪಿಎಲ್​ನಿಂದ ಹೊರಗುಳಿದರು. ನಂತರ ಲಕ್ನೋ ತಂಡವನ್ನು ಕೃನಾಲ್​ ಪಾಂಡ್ಯ ಮುನ್ನಡೆಸಿದ್ದರು.

ಇದನ್ನೂ ಓದಿ: India Cricket Schedule 2023: ಭಾರತ ತಂಡದ ಟಿ20, ಏಕದಿನ, ಟೆಸ್ಟ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.