ಶಾರ್ಜಾ : ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 39 ರನ್ಗಳಿಸಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ರಾಹುಲ್ ಸತತ 4ನೇ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 500ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ವಿಶೇಷ ದಾಖಲೆಗೆ ಪಾತ್ರರಾದರು.
2018ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿರುವ ಕೆ ಎಲ್ ರಾಹುಲ್ ಸತತ 4ನೇ ವರ್ಷವೂ 500 ರನ್ ಬಾರಿಸಿದ್ದಾರೆ. ಅವರು 2018ರಲ್ಲಿ 659 ರನ್, 2019ರಲ್ಲಿ 593 ರನ್, 2020ರ ಆವೃತ್ತಿಯಲ್ಲಿ 670 ಮತ್ತು ಪ್ರಸ್ತುತ ಆವೃತ್ತಿಯಲ್ಲಿ 13 ಪಂದ್ಯಗಳಲ್ಲಿ 528 ರನ್ಗಳಿಸಿ ಮುನ್ನುಗ್ಗುತ್ತಿದ್ದಾರೆ.
-
Completes 500 runs in #IPL2021 and the orange cap is 🔙 to its rightful owner! 🙌🏻#SaddaPunjab #IPL2021 #PunjabKings pic.twitter.com/aycDSlLlwd
— Punjab Kings (@PunjabKingsIPL) October 3, 2021 " class="align-text-top noRightClick twitterSection" data="
">Completes 500 runs in #IPL2021 and the orange cap is 🔙 to its rightful owner! 🙌🏻#SaddaPunjab #IPL2021 #PunjabKings pic.twitter.com/aycDSlLlwd
— Punjab Kings (@PunjabKingsIPL) October 3, 2021Completes 500 runs in #IPL2021 and the orange cap is 🔙 to its rightful owner! 🙌🏻#SaddaPunjab #IPL2021 #PunjabKings pic.twitter.com/aycDSlLlwd
— Punjab Kings (@PunjabKingsIPL) October 3, 2021
ಇನ್ನು, ರಾಹುಲ್ರನ್ನು ಹೊರೆತುಪಡಿಸಿದರೆ, ಸನ್ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ 6 ಬಾರಿ, ವಿರಾಟ್ ಕೊಹ್ಲಿ 5 ಬಾರಿ, ಶಿಖರ್ ಧವನ್ 4 ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ ಮತ್ತ ರೈನಾ ತಲಾ 2 ಬಾರಿ ಐಪಿಎಲ್ನಲ್ಲಿ 500 ಪ್ಲಸ್ ರನ್ಗಳಿಸಿದ್ದಾರೆ.
ಸತತ 4ನೇ ಬಾರಿ 500 +ರನ್ ಸಾಧನೆ ಮಾಡಿದ 2ನೇ ಬ್ಯಾಟರ್
ರಾಹುಲ್ ಸತತ 4ನೇ ಬಾರಿ 500 ಅಥವಾ ಅದಕ್ಕಿಂತ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸನ್ರೈಸರ್ಸ್ ಮಾಜಿ ನಾಯಕ ಡೇವಿಡ್ ವಾರ್ನರ್ ಅವರು 2014, 2015, 2016, 2017, 2019 ಮತ್ತು 20ರಲ್ಲಿ 500ರ ಗಡಿ ದಾಟಿದ್ದರು.
2018ರಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾರಣ ಒಂದು ವರ್ಷ ಐಪಿಎಲ್ನಿಂದಲೂ ನಿಷೇಧಕ್ಕೊಳಗಾಗಿದ್ದರು. ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಆರ್ಸಿಬಿ ಪರವಾಗಿ 2011ರಿಂದ 2013ರವರೆಗೆ ಸತತ 3 ಬಾರಿ 500ಕ್ಕೂ ಹೆಚ್ಚು ರನ್ಗಳಿಸಿದ್ದರು.
ಇದನ್ನು ಓದಿ:IPL 2021: ಪಂಜಾಬ್ ಕಿಂಗ್ಸ್ ಮಣಿಸಿ 3ನೇ ತಂಡವಾಗಿ ಪ್ಲೇ ಆಫ್ ತಲುಪಿದ RCB