ಮೆಲ್ಬೋರ್ನ್(ಆಸ್ಟ್ರೇಲಿಯಾ): 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಮುಂದಿನ ಎರಡು ವಾರಗಳಲ್ಲಿ ಎಲ್ಲ ತಂಡಗಳು ಯುಎಇಗೆ ಪ್ರಯಾಣ ಬೆಳೆಸಲಿವೆ. ಆದರೆ, ಈ ಟೂರ್ನಿಯಲ್ಲಿ ಬಹುತೇಕ ವಿದೇಶಿ ಪ್ಲೇಯರ್ಸ್ ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಟೂರ್ನಿಯಲ್ಲಿ ಆಡುವ ಅನುಮಾನ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ IPL ಟೂರ್ನಿಯಲ್ಲಿ ಭಾಗಿಯಾಗುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಶುರುವಾಯ್ತು IPL ಹವಾ.. ಮುಂದಿನ ವಾರಾಂತ್ಯಕ್ಕೆ ಸಿಎಸ್ಕೆ ಯುಎಇಗೆ ಪ್ರಯಾಣ
ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಖಚಿತವಾಗಿ ಹೇಳಿಲ್ಲವಾದರೂ, ಯುಎಇಗೆ ತೆರಳಿ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಕಠಿಣ ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಐಪಿಎಲ್ ಆಡಲು ವಿದೇಶಕ್ಕೆ ತೆರಳುವುದು ಅನುಮಾನ. ನನ್ನ ಸಂಗಾತಿ ಪ್ರಗ್ನೆಂಟ್ ಇದ್ದು, ಐಪಿಎಲ್ ಸಂದರ್ಭದಲ್ಲೇ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಅಲ್ಲಿಂದ ವಾಪಸ್ ಬರಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದಿದ್ದಾರೆ.
ಯುಎಇನಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಒಟ್ಟು 27 ದಿನಗಳ ಕಾಲ ಟೂರ್ನಿ ನಡೆಯಲಿದೆ, 13 ಪಂದ್ಯಗಳು ದುಬೈನಲ್ಲಿ, 10 ಶಾರ್ಜಾ ಹಾಗೂ 8 ಪಂದ್ಯ ಅಬುಧಾಬಿಯಲ್ಲಿ ಆಯೋಜನೆಗೊಂಡಿವೆ. ಸೆಪ್ಟೆಂಬರ್ 19ರಂದು ಮುಂಬೈ-ಸಿಎಸ್ಕೆ ಮುಖಾಮುಖಿಯಾಗಲಿವೆ.