ಕೋಲ್ಕತ್ತಾ: ನರೈನ್ ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ ರಿಟೈನ್ ಮಾಡಿಕೊಂಡಿರುವ ವೆಸ್ಟ್ ಇಂಡೀಸ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ಕೃತಜ್ಞತೆ ಸಲ್ಲಿಸಿದ್ದು, ತಾವೂ ಐಪಿಎಲ್ನಲ್ಲಿ ಆಡಲು ಬಯಸುವ ಏಕೈಕ ತಂಡ ಕೆಕೆಆರ್ ಎಂದಿದ್ದಾರೆ.
ಕೋಲ್ಕತ್ತಾ ನೈಟರ್ ರೈಡರ್ಸ್ ಆ್ಯಂಡ್ರೆ ರಸೆಲ್ರನ್ನು 12 ಕೋಟಿ ರೂ, ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿಗೆ ತಲಾ 8 ಕೋಟಿ ರೂ ಮತ್ತು ಸುನೀಲ್ ನರೈನ್ಗೆ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. ಸುನಿಲ್ ನರೈನ್ 2012 ಮತ್ತು 2014ರಲ್ಲಿ ಐಪಿಎಲ್ ಗೆದ್ದ ಕೆಕೆಆರ್ ಭಾಗವಾಗಿದ್ದರು.
-
A tale of a decade and more to come 💜💛
— KolkataKnightRiders (@KKRiders) December 1, 2021 " class="align-text-top noRightClick twitterSection" data="
Stay tuned to hear more from the magician #SunilNarine 🪄 #KKR #AmiKKR #GalaxyofKnights #IPLRetention #IPL pic.twitter.com/DIyYviEB4X
">A tale of a decade and more to come 💜💛
— KolkataKnightRiders (@KKRiders) December 1, 2021
Stay tuned to hear more from the magician #SunilNarine 🪄 #KKR #AmiKKR #GalaxyofKnights #IPLRetention #IPL pic.twitter.com/DIyYviEB4XA tale of a decade and more to come 💜💛
— KolkataKnightRiders (@KKRiders) December 1, 2021
Stay tuned to hear more from the magician #SunilNarine 🪄 #KKR #AmiKKR #GalaxyofKnights #IPLRetention #IPL pic.twitter.com/DIyYviEB4X
"ನಾನು ತುಂಬಾ ಉತ್ಸುಕನಾಗಿದ್ದೇನೆ, ಈ ಸಂದರ್ಭದಲ್ಲಿ ನಾನು ಐಪಿಎಲ್ ಕ್ರಿಕೆಟ್ ಆಡಲು ಬಯಸುವ ಏಕೈಕ ತಂಡ ಕೆಕೆಆರ್. ಒಂದು ವೇಳೆ ಕೆಕೆಆರ್ ಅಂತಹ ತಂಡ ವಿಶ್ವದ ಎಲ್ಲೇ ಆಡಿದರೂ ಅವರಿಗಾಗಿ ನಾನು ಆಡಲು ಸಿದ್ಧನಿದ್ದೇನೆ. ಅದು ಕೆಕೆಆರ್ ಅಥವಾ ಟಿಕೆಆರ್ ಅಥವಾ ಅವರು ಒಡೆತನದ ಬೇರೆ ಯಾವುದೇ ಫ್ರಾಂಚೈಸಿಯಾದರೂ ಸರಿ. ಇಲ್ಲಿ ಏಳು ಬೀಳಿನೊಂದಿಗೆ ಹತ್ತು ವರ್ಷ ಕಳೆದಿದ್ದೇನೆ. ಕೆಕೆಆರ್ ನಿಷ್ಠಾವಂತ ಪ್ರಾಂಚೈಸಿಯಾಗಿದ್ದು, ಮುಂದಿನ ವರ್ಷ ಈಡನ್ ಗಾರ್ಡ್ಸ್ನಲ್ಲಿ ಆಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ನರೈನ್ ಹೇಳಿದ್ದಾರೆ.
ನರೈನ್ ಜೊತೆಗೆ ಮತ್ತೊಬ್ಬ ವಿಂಡೀಸ್ ಆಲ್ರೌಂಡರ್ ರಸೆಲ್ ಕೂಡ ಕೃತಜ್ಞತೆ ಸಲ್ಲಿಸಿದ್ದಾರೆ "ಕಳೆದ ಎಂಟು ಋತುಗಳಲ್ಲಿ ನಾನು ನೈಟ್ ರೈಡರ್ ಆಟಗಾರನಾಗಿದ್ದೇನೆ. ಅವರು ನನಗೆ ತುಂಬಾ ಪ್ರೀತಿಯನ್ನು ತೋರಿಸುತ್ತಿರುವುದಕ್ಕೆ ಖುಷಿಯಾಗಿದೆ. ಕೆಕೆಆರ್ನೊಂದಿಗೆ ನನ್ನ ಪ್ರಯಾಣ ಮುಂದುವರಿಯುತ್ತದೆ ಮತ್ತು ನನ್ನಲ್ಲಿ ತೋರಿಸಿದ ನಂಬಿಕೆ, ಬೆಂಬಲ ಮತ್ತು ವಿಶ್ವಾಸವನ್ನು ನಾನು ಪ್ರಶಂಸಿಸುತ್ತೇನೆ. " ಆಂಡ್ರೆ ರಸೆಲ್ ಕೆಕೆಆರ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ನನ್ನನ್ನು ಆಟಗಾರನಲ್ಲದೇ, ಒಳ್ಳೆ ಮನುಷ್ಯನನ್ನಾಗಿ ರೂಪಿಸಿದ ತಂಡ ನನ್ನ ಹೃದಯದಲ್ಲಿ ಶಾಶ್ವತ: ಹಾರ್ದಿಕ್ ಪಾಂಡ್ಯ