ETV Bharat / sports

ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್​ ಧರಿಸಿ ಸಾಂಕ್ರಾಮಿಕದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ: ಮಾರ್ಗನ್ ಮನವಿ

ಸೋಮವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿ 124 ರನ್​ಗಳ ಗುರಿಯನ್ನು ಕೆಕೆಆರ್ 5 ವಿಕೆಟ್​ ಕಳೆದುಕೊಂಡು ತಲುಪಿತು. ನಾಯಕ ಮಾರ್ಗನ್ ಅಜೇಯ 47 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್
ಇಯಾನ್ ಮಾರ್ಗನ್
author img

By

Published : Apr 27, 2021, 5:53 PM IST

Updated : Apr 27, 2021, 6:02 PM IST

ಅಹಮದಾಬಾದ್​: ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದ ಬಳಿಕ ಮಾತನಾಡಿರುವ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿ 124 ರನ್​ಗಳ ಗುರಿಯನ್ನು ಕೆಕೆಆರ್ 5 ವಿಕೆಟ್​ ಕಳೆದುಕೊಂಡು ತಲುಪಿತು. ನಾಯಕ ಮಾರ್ಗನ್ ಅಜೇಯ 47 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಂದ್ಯದ ಬಳಿಗೆ ಭಾರತದಲ್ಲಿನ ಪರಿಸ್ಥಿತಿಯನ್ನು ಕುರಿತು ಮಾತನಾಡುತ್ತಾ ಸಂದೇಶವೊಂದನ್ನು ರವಾನಿಸಿದರು," ವಿಶ್ವದಲ್ಲಿ ನೀವು ಎಲ್ಲಿದ್ದೀರಾ ಎನ್ನುವುದು ಮುಖ್ಯವಲ್ಲ, ನಾವು ಒಟ್ಟಾಗಿ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್​ ಧರಿಸಿ ಹೋಗಬೇಕು, ಸಾಮಾನ್ಯವಾಗಿ ನೀವು ಸುರಕ್ಷಿತವಾಗಿರಲು ಪ್ರಯತ್ನಿಸಬೇಕು, ಇವೆಲ್ಲಾ ಕೊರೊನಾ ವಿರುದ್ಧ ಹೋರಾಡಬೇಕಾದರೆ ನಾವೆಲ್ಲರೂ ಅನುಸರಿಸಬೇಕೆಂದು" ಕೆಕೆಆರ್ ನಾಯಕ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಆನಾರೋಗ್ಯದಿಂದ ಬಳಲುತ್ತಿರುವ ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನಾವು ನಮ್ಮ ಬೆಂಬಲ ಸೂಚಿಸಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಕೆಕೆಆರ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ 50 ಸಾವಿರ ಡಾಲರ್​ ಮೊತ್ತವನ್ನು ಪಿಎಂ ಕೇರ್ಸ್ ಫಂಡ್​ಗೆ ದೇಣಿಗೆ ನೀಡಿ ಆಕ್ಸಿಜನ್ ಕೊರತೆಯಿಂದ ತತ್ತರಿಸುತ್ತಿರುವ ಜನತೆಗೆ ನೆರವಾಗುತ್ತಿರುವುದಾಗಿ ಘೋಷಿಸಿ ಭಾರತೀಯರ ಮನ ಗೆದ್ದಿದ್ದರು.

ಇದನ್ನು ಓದಿ: ಭಾರತೀಯರಿಗಾಗಿ ಮಿಡಿದ ಮನ.. 'ಪಿಎಂ ಕೇರ್ಸ್​ ಫಂಡ್​'ಗೆ 37 ಲಕ್ಷ ರೂ.​ ದೇಣಿಗೆ ನೀಡಿದ ಕಮ್ಮಿನ್ಸ್​

Last Updated : Apr 27, 2021, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.