ಪಲ್ಲೆಕೆಲೆ: ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ದ್ವಿಶತಕ ಮತ್ತು ಧನಂಜಯ ಡಿ ಸಿಲ್ವಾ ಅವರ ಆಕರ್ಷಕ ಶತಕದ ನೆರವಿನಿಂದ ಶ್ರೀಲಂಕಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 4ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 512 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಜ್ಮುಲ್ ಹುಸೇನ್ ಶಾಂಟೊ(163) ಮತ್ತು ನಾಯಕ ಮೊಮಿನುಲ್ ಹಕ್(127) ಶತಕ ಹಾಗೂ ತಮೀಮ್(90) ರಹೀಮ್(68) ಮತ್ತು ಲಿಟನ್ ದಾಸ್(50) ಅರ್ಧಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 541 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತು.
ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಅತಿಥೇಯ ಶ್ರೀಲಂಕಾ 73 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 229 ರನ್ಗಳಿಸಿತ್ತು. ಕರುಣರತ್ನೆ 85 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು.
-
Stumps in Pallekele 🏏
— ICC (@ICC) April 24, 2021 " class="align-text-top noRightClick twitterSection" data="
A wicketless day for Bangladesh as Sri Lanka's Dimuth Karunaratne and Dhananjaya de Silva shared an unbeaten 322-run stand before bad light stopped play.#SLvBAN | #WTC21 | https://t.co/o4z3X6g7HL pic.twitter.com/cElCZVCmWz
">Stumps in Pallekele 🏏
— ICC (@ICC) April 24, 2021
A wicketless day for Bangladesh as Sri Lanka's Dimuth Karunaratne and Dhananjaya de Silva shared an unbeaten 322-run stand before bad light stopped play.#SLvBAN | #WTC21 | https://t.co/o4z3X6g7HL pic.twitter.com/cElCZVCmWzStumps in Pallekele 🏏
— ICC (@ICC) April 24, 2021
A wicketless day for Bangladesh as Sri Lanka's Dimuth Karunaratne and Dhananjaya de Silva shared an unbeaten 322-run stand before bad light stopped play.#SLvBAN | #WTC21 | https://t.co/o4z3X6g7HL pic.twitter.com/cElCZVCmWz
ಇಂದು ನಾಲ್ಕನೇ ದಿನ ಸಂಪೂರ್ಣವಾಗಿ ಬ್ಯಾಟಿಂಗ್ ನಡೆಸಿದ ಕರುಣರತ್ನೆ( ಮತ್ತು ಧನಂಜಯ 4ನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 322 ರನ್ ಸೇರಿಸಿದರು. ಕರುಣರತ್ನೆ 419 ಎಸೆತಗಳಲ್ಲಿ 25 ಬೌಂಡರಿ ಸಹಿತ 234 ರನ್ಗಳಿಸಿದರು. ಇದು ಅವರ ಚೊಚ್ಚಲ ದ್ವಿಶತಕವಾಗಿದೆ. ಜೊತೆಗೆ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಮೊದಲ ಡಬಲ್ ಸೆಂಚುರಿ ಸಿಡಿಸಿದ ಶ್ರೇಯ ಕೂಡ ಅವರಿಗೆ ಸಂದಿದೆ.
ಇನ್ನು ಧನಂಜಯ ಡಿ ಸಿಲ್ವಾ 278 ಎಸೆತಗಳಲ್ಲಿ 20 ಬೌಂಡರಿಗಳ ಸಹಿತ ಅಜೇಯ 154 ರನ್ಗಳಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಪ್ರಸ್ತುತ ಶ್ರೀಲಂಕಾ 29 ರನ್ಗಳ ಹಿನ್ನಡೆಯಲ್ಲಿದೆ. ನಾಳೆ 5ನೇ ದಿನವಾಗಿರುವುದರಿಂದ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ.
ಇದನ್ನು ಓದಿ:ಫುಟ್ಬಾಲ್ ಆಟಗಾರ್ತಿ, ಕೂಲಿ ಕಾರ್ಮಿಕನ ಮಗಳಿಗೆ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಓದುವ ಭಾಗ್ಯ