ಚೆನ್ನೈ: ಜಮ್ಮು ಕಾಶ್ಮೀರದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಅನುಭವಿ ಬ್ಯಾಟರ್ ಕರುಣ್ ನಾಯರ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ನಾಯರ್ 175 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ತಮ್ಮ ವೃತ್ತಿ ಜೀವನದ 15ನೇ ಪ್ರಥಮ ದರ್ಜೆ ಶತಕ ಪೂರೈಸಿದ್ದಾರೆ.
ಕರುಣ್ರನ್ನು ಬಿಟ್ಟರೆ ಕರ್ನಾಟಕದ ಬೇರೇ ಯಾವ ಬ್ಯಾಟರ್ಗಳು ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಮಯಾಂಕ್ ಅಗರ್ವಾಲ್ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ತೆರಳಿರುವುದರಿಂದ ರವಿ ಕುಮಾರ್ ಸಮರ್ಥ್ ಇಂದು ಇನ್ನಿಂಗ್ಸ್ ಆರಂಭಿಸಿ 45 ರನ್ಗಳಿಸಿದರು.
ಇವರಿಬ್ಬರನ್ನು ಹೊರತುಪಡಿಸಿದರೆ ಬೇರೆ ಯಾವ ಬ್ಯಾಟರ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕಳೆದ ಪಂದ್ಯಗಳ ಶತಕ ವೀರರಾದ ಮನೀಶ್ ಪಾಂಡೆ(1) ಮತ್ತು ಕೆವಿ ಸಿದ್ಧಾರ್ಥ್(16) ಉಮ್ರಾನ್ ಮಲಿಕ್ಗೆ ವಿಕೆಟ್ ಒಪ್ಪಿಸಿದರು. ಯುವ ಬ್ಯಾಟರ್ ದೇವದತ್ ಪಡಿಕ್ಕಲ್ 8, ಬಿಆರ್ ಶರತ್ 11 ರನ್ಗಳಿಸಿಗೆ ವಿಕೆಟ್ ಒಪ್ಪಿಸಿದ್ದಾರೆ.
ಪ್ರಸ್ತುತ ಟೀ ವಿರಾಮಕ್ಕೆ ಕರ್ನಾಟಕ 5 ವಿಕೆಟ್ ಕಳೆದುಕೊಂಡು 190 ರನ್ಗಳಿಸಿದೆ. ಕರುಣ್ ನಾಯಕರ್ ಅಜೇಯ 107 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ:ಆಯ್ಕೆಯ ಬಗ್ಗೆ ಚಿಂತೆ ಬಿಡಿ, ನೀವು ರಣಜಿಯಲ್ಲಿ ರನ್ ಗಳಿಸಿ : ಯುವ ಪ್ರತಿಭೆಗಳಿಗೆ ರೋಹಿತ್ ಪಾಠ