ETV Bharat / sports

Kane Williamson: 33ನೇ ವಸಂತಕ್ಕೆ ಕಾಲಿಟ್ಟ ಕೇನ್ ವಿಲಿಯಮ್ಸನ್‌: ಸವ್ಯಸಾಚಿ ಕ್ರಿಕೆಟಿಗನ ವೃತ್ತಿ ಬದುಕು ಹೀಗಿದೆ - ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್‌ ಕೇನ್ ವಿಲಿಯಮ್ಸನ್‌

Kane Williamson Birthday: ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಆಧುನಿಕ ಕ್ರಿಕೆಟ್​ನ ಟಾಪ್​ 4 ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಕ್ರಿಕೆಟ್​ ಪಯಣ ಹೀಗೆ ಮುಂದುವರಿಯಲಿ ಎಂದು ಅಭಿಮಾನಿಗಳ ಪರವಾಗಿ ಹ್ಯಾಪಿ ಬರ್ತಡೇ ಕೇನ್​..

ಕೇನ್ ವಿಲಿಯಮ್ಸನ್‌
ಕೇನ್ ವಿಲಿಯಮ್ಸನ್‌
author img

By

Published : Aug 8, 2023, 9:10 AM IST

ನವದೆಹಲಿ: ಸದ್ಯದ ಕ್ರಿಕೆಟ್​ನ ಟಾಪ್​ 4 ಬ್ಯಾಟರ್​ಗಳು ಎಂದರೆ ಅದು ಭಾರತದ ವಿರಾಟ್​ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​, ಇಂಗ್ಲೆಂಡ್​ನ ಜೋ ರೂಟ್​ ಮತ್ತು ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್​. ಅದರಲ್ಲೂ ಕೇನ್​ ವಿಶ್ವಕ್ರಿಕೆಟ್​ಗ ಸವ್ಯಸಾಚಿ ಬ್ಯಾಟರ್​ ಎಂದೇ ಗುರುತಿಸಿಕೊಂಡಿದ್ದಾರೆ. ಮೊದಲ ಟೆಸ್ಟ್​ ವಿಶ್ವಕಪ್​ ಗೆದ್ದ ಕಿವೀಸ್​ ನಾಯಕ ಇಂದು (ಆಗಸ್ಟ್​ 8) 33ನೇ ವಸಂತಕ್ಕೆ ಕಾಲಿಟ್ಟರು.

ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರು ನ್ಯೂಜಿಲ್ಯಾಂಡ್​​​​ ತಂಡದ ಮುಂಚೂಣಿ ನಾಯಕರಾಗಿದ್ದಾರೆ. ಉಳಿದ ತಂಡಗಳ ಸವಾಲುಗಳನ್ನು ಮೆಟ್ಟಿನಿಂತು ಕಿವೀಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

2010 ರಲ್ಲಿ ದೇಶದ ಪರವಾಗಿ ಪದಾರ್ಪಣೆ ಮಾಡಿದ ವಿಲಿಯಮ್ಸನ್ ಅವರು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಧುನಿಕ ಯುಗದ 'ಫ್ಯಾಬ್ ಫೋರ್' ಬ್ಯಾಟಿಂಗ್ ತಾರೆಯರಾದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಭಾರತದ ಬ್ಯಾಟಿಂಗ್ ಕಿಂಗ್​ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಕೇನ್​ ಕ್ರಿಕೆಟ್​ ಹಾದಿ..: ಕೇನ್​ ಈವರೆಗೂ ನ್ಯೂಜಿಲ್ಯಾಂಡ್​ ಪರವಾಗಿ 94 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 54.89 ಸರಾಸರಿಯಲ್ಲಿ 8,124 ರನ್ ಗಳಿಸಿದ್ದಾರೆ. ಇದರಲ್ಲಿ 28 ಶತಕಗಳು ಮತ್ತು 33 ಅರ್ಧ ಶತಕಗಳಿವೆ. 251 ರ ಅತ್ಯುತ್ತಮ ಸ್ಕೋರ್ ಆಗಿದೆ. 161 ಏಕದಿನಗಳನ್ನಾಡಿದ್ದು, 47.83 ಸರಾಸರಿಯಲ್ಲಿ 6,554 ರನ್ ಗಳಿಸಿದ್ದಾರೆ. 13 ಶತಕಗಳು ಮತ್ತು 42 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ರಾಸ್ ಟೇಲರ್ (236 ಪಂದ್ಯಗಳಲ್ಲಿ 8.607 ರನ್) ಅಗ್ರಸ್ಥಾನಿಯಾಗಿದ್ದರೆ, ಕೇನ್​ ಕಿವೀಸ್​ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

87 ಟಿ20 ಪಂದ್ಯಗಳಲ್ಲಿ 2,464 ರನ್ ಮಾಡಿದ್ದರೆ, 17 ಅರ್ಧಶತಕಗಳನ್ನು ಗಳಿಸಿದ್ದಾರೆ. ಚುಟುಕು ಕ್ರಿಕೆಟ್​ನಲ್ಲಿ ಕಿವೀಸ್​ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ 122 ಪಂದ್ಯಗಳಲ್ಲಿ 3,531 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರೆ ವೃತ್ತಿಬದುಕಿನಲ್ಲಿ 342 ಪಂದ್ಯಗಳಲ್ಲಿ 47.74ರ ಸರಾಸರಿಯಲ್ಲಿ 17,142 ರನ್ ಗಳಿಸಿದ್ದಾರೆ. 41 ಶತಕಗಳು ಮತ್ತು 92 ಅರ್ಧಶತಕ ಬಾರಿಸಿದ್ದಾರೆ. ರಾಸ್ ಟೇಲರ್ 450 ಪಂದ್ಯಗಳಲ್ಲಿ 18,199 ರನ್​, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿವೀಸ್‌ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.

ತಂಡಕ್ಕೆ ಚೊಚ್ಚಲ ಐಸಿಸಿ ಪ್ರಶಸ್ತಿ: ಚೋಕರ್ಸ್​ ಹಣೆಬರಹ ಹೊಂದಿರುವ ತಂಡಕ್ಕೆ ಕೇನ್​ ವಿಲಿಯಮ್ಸನ್​ ಮೊದಲ ಟೆಸ್ಟ್​ ವಿಶ್ವ ಚಾಂಪಿಯನ್​ ಪ್ರಶಸ್ತಿಯನ್ನು ಗೆಲ್ಲಿಸಿಕೊಡುವ ಮೂಲಕ ಐತಿಹಾಸಿಕ ದಾಖಲೆ ಬರೆದರು. ಟೆಸ್ಟ್​ ಫೈನಲ್​ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಸೋಲಿಸಿ, ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. 2019 ರ ವಿಶ್ವಕಪ್​ನಲ್ಲಿ ತಂಡವನ್ನು ಫೈನಲ್​ವರೆಗೆ ಕೊಂಡೊಯ್ದಿದಿದ್ದರು.

ಇದನ್ನೂ ಓದಿ: IND vs WI, 3rd T20: 3 ಪಂದ್ಯದಲ್ಲಿ ಹಾರ್ದಿಕ್​ ಪಡೆಗೆ ಗೆಲುವು ಅನಿವಾರ್ಯ; ನಿರ್ಣಾಯಕ ಕದನದಲ್ಲಿ ಮಿಂಚುವರೇ IPL​ ಸ್ಟಾರ್ಸ್?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.