ಆಕ್ಲೆಂಡ್(ನ್ಯೂಜಿಲೆಂಡ್): ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಜರಾಗುತ್ತಿದ್ದಾರೆ. ಇದರಿಂದ ಕೇನ್ ಆಲಭ್ಯತೆಯಲ್ಲಿ ನ್ಯೂಜಿಲೆಂಡ್ ತಂಡ ನೇಪಿಯರ್‌ನಲ್ಲಿ ಭಾರತ ವಿರುದ್ಧ ಕಣಕ್ಕಿಳಿಯುತ್ತಿದೆ.
ಕೇನ್ ಬದಲಿಗೆ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮೂರನೇ ಮತ್ತು ಅಂತಿಮ ಟಿ 20 ಪಂದ್ಯಕ್ಕೆ ಟಿಮ್ ಸೌಥಿ ನಾಯಕತ್ವದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೇಡ್ ಹೇಳಿದ್ದಾರೆ.
ಶುಕ್ರವಾರದಂದು ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಆಕ್ಲೆಂಡ್‌ನಲ್ಲಿ ತಂಡವನ್ನು ವಿಲಿಯಮ್ಸನ್ ಬುಧವಾರ ಸೇರಿಕೊಳ್ಳಲಿದ್ದಾರೆ ಎಂದು ಕೋಚ್ ಮಾಹಿತಿ ನೀಡಿದರು.
ಕೇನ್ ಈ ವರ್ಷ 13 ಟಿ 20 ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 36.91 ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ.
ಇದನ್ನೂ ಓದಿ : ಭಾರತ-ನ್ಯೂಜಿಲೆಂಡ್ ಎರಡನೇ ಟಿ20: ಇಂದಿನ ಪಂದ್ಯಕ್ಕೂ ಕಾಡುವನೇ ಮಳೆರಾಯ?