ETV Bharat / sports

Jos Buttler: ಟಿ20ಯಲ್ಲಿ 10 ಸಾವಿರ ರನ್​ ಗಡಿ ದಾಟಿದ 9ನೇ ಆಟಗಾರ ಜೋಸ್​ ಬಟ್ಲರ್​.. ಕೊಹ್ಲಿ, ರೋಹಿತ್​ ಸ್ಥಾನ ಎಷ್ಟು ಗೊತ್ತಾ? - Jos Buttler completed ten thousand runs

ಟಿ20 ಬ್ಲಾಸ್ಟ್ 2023 ಲೀಗ್​ನಲ್ಲಿ ಜೋಸ್ ಬಟ್ಲರ್​ ಶುಕ್ರವಾರ ನಡೆದ ಪಂದ್ಯದಲ್ಲಿ 83 ರನ್​ ಗಳಿಸುವ ಮೂಲಕ 1000 ರನ್​ ಗಳಿಸಿ ದಾಖಲೆ ಮಾಡಿದ್ದಾರೆ.

Jos Buttler completed 10,000 runs in T20 format
ಜೋಸ್ ಬಟ್ಲರ್​
author img

By

Published : Jun 24, 2023, 6:07 PM IST

ಮ್ಯಾಂಚೆಸ್ಟರ್ (ಯುಕೆ): ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಶುಕ್ರವಾರ ಟಿ20 ಮಾದರಿಯಲ್ಲಿ ಹತ್ತು ಸಾವಿರ ರನ್ ಗಡಿ ದಾಟಿ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಒಂಬತ್ತನೇ ಬ್ಯಾಟರ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಟಿ20 ಬ್ಲಾಸ್ಟ್ 2023 ಲೀಗ್​ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಲ್ಯಾನ್ಸ್​ಶೇರ್ ಪರವಾಗಿ ಆಡುತ್ತಿರುವ ಬ್ಯಾಟರ್ ಜೋಸ್ ಬಟ್ಲರ್ 36 ಬಾಲ್​ನಲ್ಲಿ 83 ರನ್​ ಗಳಿಸಿದರು. ಇವರ ಅಬ್ಬರದ ಆಟಕ್ಕೆ ಡರ್ಬಿಶೈರ್ ಫಾಲ್ಕನ್ಸ್ 27 ರನ್​ ಸೋಲು ಕಂಡಿತು. ಇದರಿಂದ ಲ್ಯಾನ್ಸ್​ಶೇರ್​ ತಂಡ ಕ್ವಾಲಿಫೈಯರ್​ ಆಗುವುದನ್ನು ಖಚಿತ ಪಡಿಸಿಕೊಂಡಿತು.

ಜೋಸ್​ ಬಟ್ಲರ್ 17 ರನ್‌ಗಳಿಂದ ಶತಕ ವಂಚಿತರಾದರು. ಆದರೆ ದೊಡ್ಡ ಮೈಲಿಗಲ್ಲೊಂದನ್ನು ಅವರು ಸಾಧಿಸಿದ್ದಾರೆ. ನಿನ್ನೆ ಅವರು ಗಳಿಸಿದ ಸ್ಕೋರ್​ನಿಂದಾಗಿ ಟಿ20 ಮಾದರಿಯ ಕ್ರಿಕೆಟ್​ನಲ್ಲಿ 10,000 ರನ್‌ ಗಳಿಸಿದ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ವಿಶ್ವದ 9ನೇ ಆಟಗಾರಾದರು. 10 ಸಾವಿರ ರನ್​ ಗಡಿ ದಾಟಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯುನಿವರ್ಸ್​ಲ್​ ಬಾಸ್​ ಕ್ರಿಸ್​ ಗೇಲ್​ ಹೊಂದಿದ್ದಾರೆ.

  • Most runs in T20 format:

    Chris Gayle - 14562
    Shoaib Malik - 12528
    Kieron Pollard - 12175
    Virat Kohli - 11965
    Aaron Finch - 11392
    Alex Hales - 11214
    Rohit Sharma - 11035
    Jos Buttler - 10080*

    Jos Buttler completed 10,000 runs in T20 format. pic.twitter.com/vkKJ98M5B5

    — Johns. (@CricCrazyJohns) June 24, 2023 " class="align-text-top noRightClick twitterSection" data=" ">

ಇದನ್ನೂ ಓದಿ: IND vs WI :ತಂಡಕ್ಕೆ ಯುವಕರ ಆಯ್ಕೆಗೆ ಮಾನದಂಡ ಏನು.. ಡಬ್ಲ್ಯೂಟಿಸಿ ಸೋಲಿಗೆ ಪೂಜಾರ ಒಬ್ಬರೇ ಬಲಿಪಶುವೇ?

333 ಜರ್ಸಿ ಸಂಖ್ಯೆಯ ಆಟಗಾರ ಗೇಲ್​ ಟಿ 20 ಮಾದರಿಯಲ್ಲಿ 14,562 ರನ್​ ಗಳಿಸಿದ್ದಾರೆ. ಅವರ ದಾಖಲೆ ಮುರಿಯುವುದು ಬಹಳ ಕಷ್ಟವಿದೆ. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಆಟಗಾರ ಶೋಯೆಬ್ ಮಲಿಕ್ ಇದ್ದು, ಅವರು 12,528 ರನ್ ಗಳಿಸಿದ್ದಾರೆ. ವೆಸ್ಟ್​ ಇಂಡೀಸ್​ನ ಇನ್ನೊಬ್ಬ ದಾಂಡಿಗ ಕೀರಾನ್ ಪೊಲಾರ್ಡ್ 12,175 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರನ್​ ಮಷಿನ್​ ವಿರಾಟ್​ ಕೊಹ್ಲಿ ಇದ್ದಾರೆ. ಕಿಂಗ್​​ ಕೊಹ್ಲಿ ಟಿ 20 ಮಾದರಿಯಲ್ಲಿ 11,965 ರನ್ ಕಲೆಹಾಕಿದ್ದಾರೆ. ಟಾಪ್​ ಐದರೊಳಗೆ ಇರುವ ಭಾರತದ ಏಕೈಕ ಆಟಗಾರ ವಿರಾಟ್​ ಆಗಿದ್ದಾರೆ.

ನಂತರದ ಸ್ಥಾನದಲ್ಲಿ ಅರೋನ್​ ಪಿಂಚ್ (11392),​ ಅಲೆಕ್ಸ್​ ಹೇಲ್ಸ್ (11214), ರೋಹಿತ್​​ ಶರ್ಮಾ (11035) ಇದ್ದಾರೆ. ಜೋಸ್​ ಬಟ್ಲರ್ ಹತ್ತು ಸಾವಿರ ರನ್ ಗಡಿಗೆ ಕೇವಲ 3 ರನ್​ ದೂರದಲ್ಲಿದ್ದರು. ನಿನ್ನೆ ಪಂದ್ಯದಲ್ಲಿ ಅವರು ಮೂರು ರನ್​ ಗಳಿಸುತ್ತಿದ್ದಂತೆ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ಬಟ್ಲರ್​ 10080 ರನ್​ ಗಳೊಂದಿಗೆ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಬಟ್ಲರ್ "ನಾನು ಇಂದು ಆಡಿದ ಇನ್ನಿಂಗ್ಸ್​ನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಈ ದಾಖಲೆ ನನಗೆ ನಿಜವಾಗಿಯೂ ಆನಂದವನ್ನು ತಂದಿದೆ. ಲಿಯಾಮ್ ಲಿವಿಂಗ್ಸ್ಟೋನ್ ಜೊತೆಗೆ ಆಡುವುದು ಉತ್ತಮವಾಗಿತ್ತು. ಲಿಯಾಮ್ ಲಿವಿಂಗ್ಸ್ಟೋನ್ ಬೌಲರ್‌ಗಳ ಮೇಲೆ ತುಂಬಾ ಒತ್ತಡವನ್ನು ಹಾಕುತ್ತಾರೆ. ಹೀಗಾಗಿ ಯಾವುದೇ ಸಮಯದಲ್ಲಿ ಜೊತೆಯಾಟವನ್ನು ವಿಸ್ತರಿಸಬಹುದು" ಎಂದಿದ್ದಾರೆ.

ಇದನ್ನೂ ಓದಿ: T Natarajan: ನಟರಾಜನ್​ ನಿರ್ಮಿಸಿದ ಕ್ರಿಕೆಟ್​ ಮೈದಾನ ಲೋಕಾರ್ಪಣೆ ಮಾಡಿದ ದಿನೇಶ್​ ಕಾರ್ತಿಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.