ಇಂಗ್ಲೆಂಡ್ನ ಏಕದಿನ, ಟಿ20 ತಂಡದ ನಾಯಕರಾಗಿದ್ದ ಇಯಾನ್ ಮೋರ್ಗನ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ತೆರವಾದ ನಾಯಕನ ಸ್ಥಾನಕ್ಕೆ ಡ್ಯಾಶಿಂಗ್ ಬ್ಯಾಟರ್ ಜೋಸ್ ಬಟ್ಲರ್ರನ್ನು ನೇಮಿಸಲಾಗಿದೆ.
ಇಯಾನ್ ಮೋರ್ಗನ್ ನಿವೃತ್ತಿಗೂ ಮೊದಲು ಜೋಸ್ ಬಟ್ಲರ್ರನ್ನು ಉಪನಾಯಕನನ್ನಾಗಿ ನೇಮಿಸಲು ಕೋರಿಕೆ ಇಟ್ಟಿದ್ದರು. ಇದೀಗ ಅವರನ್ನೇ ನಾಯಕನ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಭಾರತದ ವಿರುದ್ಧ ನಡೆಯುವ 3 ಪಂದ್ಯಗಳ ಟಿ20 ಸರಣಿ ಮೂಲಕ ಪೂರ್ಣಾವಧಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
-
Our new men's white-ball captain 🧢
— England Cricket (@englandcricket) June 30, 2022 " class="align-text-top noRightClick twitterSection" data="
🗣 In his own words, these are the matches that made @JosButtler...
">Our new men's white-ball captain 🧢
— England Cricket (@englandcricket) June 30, 2022
🗣 In his own words, these are the matches that made @JosButtler...Our new men's white-ball captain 🧢
— England Cricket (@englandcricket) June 30, 2022
🗣 In his own words, these are the matches that made @JosButtler...
ಜೋಸ್ ಬಟ್ಲರ್ ಈಗಾಗಲೇ 14 ಪಂದ್ಯಗಳಲ್ಲಿ ನಾಯಕನಾಗಿ ಇಂಗ್ಲೆಂಡ್ ತಂಡ ಮುನ್ನಡೆಸಿದ್ದಾರೆ. ಕಳೆದ ವಾರ ನೆದರ್ಲ್ಯಾಂಡ್ ವಿರುದ್ಧದ ಮೂರನೇ ಏಕದಿನದ ವೇಳೆ ಮೋರ್ಗನ್ ಗಾಯಗೊಂಡಾಗ ನಾಯಕತ್ವ ವಹಿಸಿಕೊಂಡಿದ್ದರು.
31 ವರ್ಷದ ಜೋಸ್ ಬಟ್ಲರ್ ಇಂಗ್ಲೆಂಡ್ನ ಯಶಸ್ವಿ ನಾಯಕನಾಗಲಿದ್ದಾರೆ ಎಂದು ಮಾಜಿ ನಾಯಕ ಇಯಾನ್ ಹೇಳಿದ್ದಾರೆ. ನಾನು ನಾಯಕನಾಗಿದ್ದಾಗ ಅವರಲ್ಲಿನ ಮುಂದಾಳತ್ವದ ಗುಣವನ್ನು ಕಂಡಿದ್ದೇನೆ. ಅವರು ತಂಡದ ಚುಕ್ಕಾಣಿ ಹಿಡಿಯಬೇಕು ಎಂದು ಬಯಸಿದ್ದೆ. ಅದೀಗ ನೆರವೇರಿದೆ ಎಂದಿದ್ದಾರೆ.
151 ಏಕದಿನ ಪಂದ್ಯವಾಡಿರುವ ಜೋಸ್ ಬಟ್ಲರ್ 4120 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ, 21 ಅರ್ಧಶತಕಗಳಿವೆ.
ಇದನ್ನೂ ಓದಿ: ಕ್ಯಾಪ್ಟನ್ ಬುಮ್ರಾ: ಕಪಿಲ್ ದೇವ್ ಬಳಿಕ ಇದೇ ಮೊದಲ ಬಾರಿ ವೇಗಿಗೆ ಟೆಸ್ಟ್ ತಂಡದ ಸಾರಥ್ಯ!