ETV Bharat / sports

ಕೆವಿನ್ ಪೀಟರ್ಸನ್​ ಹಿಂದಿಕ್ಕಿ ಇಂಗ್ಲೆಂಡ್ ಪರ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಜೋ ರೂಟ್​ - ಕೆವಿನ್ ಪೀಟರ್ಸನ್ ದಾಖಲೆ ಮುರಿದ ಜೂ ರೂಟ್​

ವಿಂಡೀಸ್ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಜೋ ರೂಟ್ ತಮ್ಮ ವೃತ್ತಿ ಜೀವನದ 24ನೇ ಶತಕ ಸಿಡಿಸಿದ್ದು, ಮಾಜಿ ನಾಯಕ ಕೆವಿನ್ ಪೀಟರ್ಸನ್​(23) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ತಂಡದ ಪರ ಹೆಚ್ಚು ಶತಕ ಸಿಡಿಸಿದ ಬ್ಯಾಟರ್​ ಎನಿಸಿಕೊಂಡರು.

Joe Root surpasses Kevin Pietersen milestone with century
ಜೋ ರೂಟ್​ ಶತಕ ದಾಖಲೆ
author img

By

Published : Mar 12, 2022, 9:54 PM IST

ಆ್ಯಂಟಿಗುವಾ: ವೆಸ್ಟ್​ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಜೋ ರೂಟ್ ಇಂಗ್ಲೆಂಡ್ ಪರ ಹೆಚ್ಚು ಶತಕ ಸಿಡಿಸಿ 2ನೇ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾದರು.

ಮೊದಲ ರಿಚರ್ಡ್ಸ್​-ಬಾಥಮ್​ ಟೆಸ್ಟ್​ನ ಅಂತಿಮ ದಿನವಾದ ಇಂದು ಜೋ ರೂಟ್ ತಮ್ಮ ವೃತ್ತಿ ಜೀವನದ 24ನೇ ಶತಕ ಸಿಡಿಸಿದರು. ಈ ಮೂಲಕ ಮಾಜಿ ನಾಯಕ ಕೆವಿನ್ ಪೀಟರ್ಸನ್​(23) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ತಂಡದ ಪರ ಹೆಚ್ಚು ಶತಕ ಸಿಡಿಸಿದ ಬ್ಯಾಟರ್​ ಎನಿಸಿಕೊಂಡರು.

ಅಗ್ರಸ್ಥಾನದಲ್ಲಿ ಮಾಜಿ ನಾಯಕ ಅಲೈಸ್ಟರ್ ಕುಕ್ ಇದ್ದು, ಅವರು 161 ಪಂದ್ಯಗಳಿಂದ 33 ಶತಕಗಳ ಸಹಿತ 12, 472 ರನ್​ಗಳಿಸಿ ಹೆಚ್ಚು ಶತಕ ಮತ್ತು ಹೆಚ್ಚು ರನ್​ ಸಿಡಿಸಿದರು ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ರೂಟ್​ 115 ಪಂದ್ಯಗಳಿಂದ 24 ಶತಕ ಹಾಗೂ 53 ಅರ್ಧಶತಕಗಳ ಸಹಿತ 9722 ರನ್​ಗಳಿಸಿದ್ದಾರೆ. ಈ ಸರಣಿಯಲ್ಲಿ 278 ರನ್​ಗಳಿಸಿದರೆ ತಮ್ಮ ದೇಶದ ಪರ 10 ಸಾವಿರ ಪೂರೈಸಿದ 2ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ.

ನಾಯಕನಾಗಿ ಹೆಚ್ಚು ಶತಕ

ಜೋ ರೂಟ್​ ನಾಯಕನಾಗಿ ಇಂಗ್ಲೆಂಡ್​ ಪರ ಹೆಚ್ಚು ಶತಕ ಸಿಡಿಸಿದ ಶ್ರೇಯಕ್ಕೂ ಪಾತ್ರರಾದರು. ಅವರು ಇಂಗ್ಲೆಂಡ್ ಪರ 13 ಶತಕ ದಾಖಲಿಸಿದ್ದರೆ, ಕುಕ್ 12 ಶತಕ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ.

ರೂಟ್​ ಪ್ರಸ್ತುತ ಇಂಗ್ಲೆಂಡ್ ಪರ 62 ಟೆಸ್ಟ್​ ಪಂದ್ಯಗಳನ್ನಾಡುತ್ತಿದ್ದು, ಅತಿ ಹೆಚ್ಚು ಜಯ, ಹೆಚ್ಚು ಸೋಲು, ಹೆಚ್ಚು ರನ್​, ಹೆಚ್ಚು ಶತಕ ಮತ್ತು ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಲಂಕಾ ಸ್ಪಿನ್​ ಮೋಡಿಗೆ ಭಾರತ ಕಂಗಾಲು: ಅಯ್ಯರ್​ ಏಕಾಂಗಿ ಹೋರಾಟದ ಹೊರತಾಗಿಯೂ 252ಕ್ಕೆ ಆಲೌಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.