ETV Bharat / sports

ಐಪಿಎಲ್​ನಲ್ಲಿ ಆಡುವ ಆಸೆ ವ್ಯಕ್ತಪಡಿಸಿದ ರೂಟ್, ಮೆಗಾ ಹರಾಜಿಗೆ ಹೆಸರು ನೋಂದಣಿ - ಜೋ ರೂಟ್​ ಐಪಿಎಲ್ ಮೆಗಾ ಹರಾಜು

ಕ್ರಿಕೆಟ್​ನ ಆಧುನಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ರೂಟ್ 2018 ರ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ, ಇದುವರೆಗೂ 4 ಬಾರಿ ಹರಾಜಿನಲ್ಲಿ ನೋಂದಾಯಿಸಲ್ಪಟ್ಟರೂ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಮನಸ್ಸು ಮಾಡಲಿಲ್ಲ. ಆದರೂ ವಿಶ್ವದ ಪ್ರಸಿದ್ಧ ಲೀಗ್​ನಲ್ಲಿ ಆಡುವ ಬಯಕೆಯನ್ನು ಮಾತ್ರ ಇವರು ಕಡಿಮೆ ಮಾಡಿಲ್ಲ.

Joe Root considering entering IPL auction
ಜೋ ರೂಟ್​
author img

By

Published : Jan 13, 2022, 6:03 PM IST

ಹೋಬರ್ಟ್: ಇಂಗ್ಲೆಂಡ್ ಟೆಸ್ಟ್​ ತಂಡದ ನಾಯಕ ಜೋ ರೂಟ್​ 4 ಬಾರಿ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರೂ ಜಗತ್ತಿನ ಅತ್ಯಂತ ಮನರಂಜನೆಯ ಟಿ20 ಲೀಗ್​ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಫೆಬ್ರವರಿ 12-13ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರುವುದಾಗಿ ಅವರು​ ಹೇಳಿದ್ದಾರೆ.

ಕ್ರಿಕೆಟ್​ನ ಆಧುನಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ರೂಟ್ 2018 ರ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ, ಇದುವರೆಗೂ 4 ಬಾರಿ ಹರಾಜಿನಲ್ಲಿ ನೋಂದಾಯಿಸಲ್ಪಟ್ಟರೂ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಮನಸ್ಸು ಮಾಡಲಿಲ್ಲ. ಆದರೂ ರೂಟ್​ ವಿಶ್ವದ ಪ್ರಸಿದ್ಧ ಲೀಗ್​ನಲ್ಲಿ ಆಡುವ ಬಯಕೆಯನ್ನು ಮಾತ್ರ ಕಡಿಮೆ ಮಾಡಿಲ್ಲ.

ಇದನ್ನೂ ಓದಿ:5 ವರ್ಷಗಳ ನಂತರ ಐಪಿಎಲ್​ಗೆ ಮರಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​

ಈ ಕುರಿತು 5ನೇ ಆ್ಯಶಸ್​ ಟೆಸ್ಟ್​ಗೂ ಮುನ್ನ ಮಾತನಾಡಿದ 31 ವರ್ಷದ ಬ್ಯಾಟರ್​, ಟೂರ್ನಮೆಂಟ್​ನಲ್ಲಿ ಆಡುವುದರಿಂದ ತಮ್ಮ ಟೆಸ್ಟ್​ ವೃತ್ತಿ ಜೀವನಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ ಎನಿಸಿದರೆ ಮಾತ್ರ ಆಡುವುದಾಗಿ ತಿಳಿಸಿದ್ದಾರೆ.

"ಇದು(ಐಪಿಎಲ್) ಟೆಸ್ಟ್ ಕ್ರಿಕೆಟ್ ಆಡುವ ನನ್ನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೇ? ನನಗೆ ಆ ಯೋಚನೆ ಬಾರದಿದ್ದರೆ ಮಾತ್ರ ಹರಾಜಿಗೆ ಹೋಗುತ್ತೇನೆ. ಆದರೆ ನಾನು ಎಂದಿಗೂ ಇಂಗ್ಲೆಂಡ್‌ಗಾಗಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ. ಅದೇ ನನಗೆ ತುಂಬಾ ಮುಖ್ಯವಾಗಿದೆ. ಇದು ನನಗೆ ಮಾತ್ರವಲ್ಲ, ಇತರ ಆಟಗಾರರ ಆದ್ಯತೆಯಾಗಿದೆ" ಎಂದು ತಿಳಿಸಿದ್ದಾರೆ

ವೃತ್ತಿ ಜೀವನದಲ್ಲಿ 32 ಅಂತಾರಾಷ್ಟ್ರೀಯ ಸೇರಿದಂತೆ 83 ಟಿ20 ಪಂದ್ಯಗಳನ್ನಾಡಿರುವ ರೂಟ್​ 13 ಅರ್ಧಶತಕಗಳ ಸಹಿತ 1994 ರನ್​ಗಳಿಸಿದ್ದಾರೆ. ಇಂಗ್ಲೆಂಡ್ ಕ್ಯಾಪ್ಟನ್​ ಈ ಹಿಂದೆಯೂ ಐಪಿಎಲ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ ಅವರು ಹರಾಜು ಪ್ರವೇಶಿಸುವುದಕ್ಕೆ ನಿರಾಕರಿಸಿದ್ದರು.

ಇದನ್ನೂ ಓದಿ:ಯುಎಇ ಅಲ್ಲ, 2022ರ ಐಪಿಎಲ್ ಈ ದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.