ETV Bharat / sports

ಜೂಲನ್ ಗೋಸ್ವಾಮಿ 200 ಏಕದಿನ ಪಂದ್ಯಗಳನ್ನಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್​ - ಜೂಲನ್ ಗೋಸ್ವಾಮಿ ದಾಖಲೆಗಳು

ಪ್ರಸ್ತುತ ಸಕ್ರಿಯರಾಗಿರುವ ಆಟಗಾರ್ತಿಯರಲ್ಲಿ, ದಕ್ಷಿಣ ಆಫ್ರಿಕಾದ ಮಿಗ್ನಾನ್​ ಡು ಪ್ರೀಜ್​ 150, ನ್ಯೂಜಿಲ್ಯಾಂಡ್​ನ ಆ್ಯಮಿ ಸ್ಯಾಟರ್ಥ್​ವೇಟ್​ 143 , ವೆಸ್ಟ್ ಇಂಡೀಸ್​ನ ಸ್ಟೆಫನಿ ಟೇಲರ್​ 142 , ನ್ಯೂಜಿಲ್ಯಾಂಡ್​ನ ಸೂಜಿ ಬೇಟ್ಸ್ ಮತ್ತು ವಿಂಡೀಸ್​ನ ದಿಯಾಂಡ್ರ ಡಾಟಿನ್ ತಲಾ 140 ಪಂದ್ಯಗಳನ್ನಾಡಿದ್ದಾರೆ.

Jhulan Goswami  become second player to played 200th ODI games
ಜೂಲನ್ ಗೋಸ್ವಾಮಿ 200 ಏಕದಿನ ಪಂದ್ಯ
author img

By

Published : Mar 19, 2022, 8:57 AM IST

ಆಕ್ಲೆಂಡ್​: ಭಾರತದ ಹಿರಿಯ ವೇಗದ ಬೌಲರ್​ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ 200 ಪಂದ್ಯಗಳನ್ನಾಡಿದ ವಿಶ್ವದ 2ನೇ ಕ್ರಿಕೆಟರ್​ ಎನಿಸಿಕೊಂಡರು. ಶನಿವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್​ ಪಂದ್ಯದ ವೇಳೆ ಈ ಮೈಲಿಗಲ್ಲು ತಲುಪಿದರು.

250 ವಿಕೆಟ್​ ಪಡೆದಿರುವ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್​ ಆಗಿರುವ 39 ವರ್ಷದ ಜೂಲನ್ ಗೋಸ್ವಾಮಿ 200 ಏಕದಿನ ಪಂದ್ಯಗಳನ್ನಾಡಿದ ಭಾರತದ 2ನೇ ಆಟಗಾರ್ತಿಯಾಗಿದ್ದಾರೆ. ಪ್ರಸ್ತುತ ವಿಶ್ವಕಪ್​ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮಿಥಾಲಿ ರಾಜ್​ 230 ಪಂದ್ಯಗಳನ್ನಾಡಿ, ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇವರಿಬ್ಬರನ್ನು ಹೊರೆತುಪಡಿಸಿದರೆ ಬೇರೆ ಯಾವ ಮಹಿಳಾ ಕ್ರಿಕೆಟರ್​ 200ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿಲ್ಲ. ಇಂಗ್ಲೆಂಡ್ ಮಾಜಿ ನಾಯಕಿ ವಾರ್ಲೊಟ್​ ಎಡ್ವರ್ಡ್ಸ್​ 191 ಪಂದ್ಯಗಳನ್ನಾಡಿ 3ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಸಕ್ರಿಯರಾಗಿರುವ ಆಟಗಾರ್ತಿಯರಲ್ಲಿ, ದಕ್ಷಿಣ ಆಫ್ರಿಕಾದ ಮಿಗ್ನಾನ್​ ಡು ಪ್ರೀಜ್​ 150, ನ್ಯೂಜಿಲ್ಯಾಂಡ್​ನ ಆ್ಯಮಿ ಸ್ಯಾಟರ್ಥ್​ವೇಟ್​ 143 , ವೆಸ್ಟ್ ಇಂಡೀಸ್​ನ ಸ್ಟೆಫನಿ ಟೇಲರ್​ 142 , ನ್ಯೂಜಿಲ್ಯಾಂಡ್​ನ ಸೂಜಿ ಬೇಟ್ಸ್ ಮತ್ತು ವಿಂಡೀಸ್​ನ ದಿಯಾಂಡ್ರ ಡಾಟಿನ್ ತಲಾ 140 ಪಂದ್ಯಗಳನ್ನಾಡಿದ್ದಾರೆ.

ಇನ್ನು ವಿಶ್ವಕಪ್​ನಲ್ಲಿ ಭಾರತ ತಂಡ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು , 2 ಸೋಲು ಕಂಡಿದೆ. ಸೆಮಿಫೈನಲ್ ದೃಷ್ಟಿಕೋನದಲ್ಲಿ ಇಂದು ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಪ್ರಮುಖವಾಗಿದೆ.

ಇದನ್ನೂ ಓದಿ:ಬಲಿಷ್ಟ ಆಸ್ಟ್ರೇಲಿಯನ್ನರ ವಿರುದ್ಧ ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.