ETV Bharat / sports

ಬೈಜುನಿಂದ ಬಿಸಿಸಿಐಗೆ ₹86 ಕೋಟಿ ಬಾಕಿ?.. ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದ ಪೇಟಿಎಂ - ಟೈಟಲ್​ ಸ್ಪಾನ್ಸರ್​ ಪೇಟಿಎಂ

ಟೀಂ ಇಂಡಿಯಾ ಜೆರ್ಸಿ ಪ್ರಾಯೋಕತ್ವ ಪಡೆದಿರುವ ಬೈಜು ಸಂಸ್ಥೆ ಬಿಸಿಸಿಐಗೆ 86 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಶೀರ್ಷಿಕೆ ಪ್ರಾಯೋಜಕತ್ವದಿಂದ ಪೇಟಿಎಂ ಸಂಸ್ಥೆ ಹಿಂದೆ ಸರಿದಿದೆ.

ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದ ಪೇಟಿಎಂ

author img

By

Published : Jul 23, 2022, 2:01 PM IST

ನವದೆಹಲಿ: ಸ್ವದೇಶದಲ್ಲಿ ನಡೆಯುವ ಕ್ರಿಕೆಟ್​ ಟೂರ್ನಿಗಳಿಗೆ ತಾನು ನೀಡುವ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿರುವ ಪೇಟಿಎಂ, ಇದನ್ನು ಮಾಸ್ಟರ್​ಕಾರ್ಡ್​ಗೆ ವರ್ಗಾಯಿಸಲು ಕೋರಿದೆ. ಈ ಕೋರಿಕೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.

ಮುಂದೆ ನಡೆಯುವ ಟೂರ್ನಿಗಳಲ್ಲಿ ಟೈಟಲ್​ ಪ್ರಾಯೋಜಕತ್ವವನ್ನು ಮಾಸ್ಟರ್​ಕಾರ್ಡ್​ ಕಂಪನಿ ವಹಿಸಿಕೊಳ್ಳಲಿದೆ. ಪೇಟಿಎಂ ಸಂಸ್ಥೆ ಇದರಿಂದ ಹಿಂದೆ ಸರಿಯಲು ಮುಂದಾಗಿದೆ ಎಂದು ಇತ್ತೀಚೆಗೆ ನಡೆದ ಬಿಸಿಸಿಐನ ಅಪೆಕ್ಸ್​ ಸಭೆಯಲ್ಲಿ ಚರ್ಚಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಪೇಟಿಎಂ, ಬಿಸಿಸಿಐ ಜೊತೆಗೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಅಂತ್ಯದವರೆಗೂ ಪ್ರಾಯೋಕತ್ವ ನೀಡಲು ಅವಧಿಯನ್ನು ವಿಸ್ತರಿಸಿಕೊಂಡಿತ್ತು.

2019 ರ ಆಗಸ್ಟ್​ನಿಂದ ಪೇಟಿಎಂ, ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ನಾಲ್ಕು ವರ್ಷಗಳವರೆಗೆ ಪ್ರತಿ ಪಂದ್ಯಕ್ಕೆ 3.80 ಕೋ ರೂಪಾಯಿ ಬಿಡ್‌ ಸಲ್ಲಿಸಿತ್ತು. ಈ ಒಪ್ಪಂದವು 2023 ರ ಮಾರ್ಚ್ 31ರವರೆಗೆ ಇದೆ.

ಜೆರ್ಸಿ ಪ್ರಾಯೋಜಕ ಬೈಜುನಿಂದ ಹಣ ಬಾಕಿ: ಟೀಮ್​ ಇಂಡಿಯಾ ಜೆರ್ಸಿಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಬೈಜು ಕಂಪನಿ ಬಿಸಿಸಿಐಗೆ 86.21 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಇದು ಕೂಡ 2023ರ ಏಕದಿನ ವಿಶ್ವಕಪ್​ವರೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆದರೆ, ಇದನ್ನು ಅಲ್ಲಗಳೆದಿರುವ ಸಂಸ್ಥೆ, "ಬಿಸಿಸಿಐಗೆ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಒಪ್ಪಂದವನ್ನು ವಿಸ್ತರಿಸಿಕೊಳ್ಳಲಾಗಿದೆ. ಒಡಂಬಡಿಕೆಗೆ ಅಂತಿಮ ಮುದ್ರೆ ಬೀಳುವ ಕೆಲಸ ಮಾತ್ರ ಬಾಕಿ ಇದೆ. ಅದಾದ ಬಳಿಕ ಒಪ್ಪಂದದಂತೆ ಹಣವನ್ನು ವರ್ಗಾಯಿಸಲಾಗುವುದು" ಎಂದು ಹೇಳಿದೆ.

ಓದಿ: WI vs IND: ಭಾರತಕ್ಕೆ 3 ರನ್​ಗಳ ರೋಚಕ ಗೆಲುವು, ಸರಣಿಯಲ್ಲಿ 1-0 ಮುನ್ನಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.