ETV Bharat / sports

ಏಕದಿನ ವಿಶ್ವಕಪ್​ಗೆ ಭಾರತ ಮಹಿಳಾ ತಂಡ ಪ್ರಕಟ; ಮಿಥಾಲಿಗೆ ಸಾರಥ್ಯ, ಕೆಲವರಿಗೆ ಸಿಹಿ, ಹಲವರಿಗೆ ಕಹಿ​ - ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಕಟ

ಇಂಗ್ಲೆಂಡ್​ನಲ್ಲಿ ನಡೆದ ದಿ ಹಂಡ್ರೆಡ್ ಟೂರ್ನಮೆಂಟ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ ಹೊರತುಪಡಿಸಿ ಆಟಗಾರ್ತಿ ರೋಡ್ರಿಗಸ್ ಎಲ್ಲ ರೀತಿಯ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಹಾಗಾಗಿ, ಅವರೂ ಸೇರಿ ಮೂವರು ಅನುಭವಿ ಆಟಗಾರರನ್ನು ಐಸಿಸಿ ಏಕದಿನ ವಿಶ್ವಕಪ್​ನಿಂದ ಹೊರಗಿಡಲಾಗಿದೆ.

Jemimah, Shikha dropped from Mithali Raj-led India squad for ICC Women's WC in NZ

author img

By

Published : Jan 6, 2022, 2:52 PM IST

Updated : Jan 6, 2022, 3:25 PM IST

ನವದೆಹಲಿ: ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್​​ಗಾಗಿ ಇಂದು (ಗುರುವಾರ) ಪ್ರಕಟಿಸಲಾದ 15 ಸದಸ್ಯರ ಭಾರತೀಯ ಮಹಿಳಾ ಕ್ರಿಕೆಟ್ ತಂಡದಿಂದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್​ ಅವರನ್ನು ಕೈಬಿಡಲಾಗಿದೆ.

ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನಾಯಕಿಯಾಗಿ ಹಾಗೂ ಹರ್ಮನ್‌ಪ್ರೀತ್ ಕೌರ್ ಉಪನಾಯಕಿಯಾಗಿ ತಂಡ ಮುನ್ನಡೆಸಲಿದ್ದಾರೆ. 39 ವರ್ಷದ ಮಿಥಾಲಿ ಅವರು ಈ ಮೆಗಾ ಈವೆಂಟ್‌ ನಂತರ ತಮ್ಮ ನಿವೃತ್ತಿಯ ಬಗ್ಗೆ ಆಲೋಚನೆ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ತಂಡದಲ್ಲಿ ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ ಮತ್ತು ಯುವ ಆಟಗಾರರಾದ ಶೆಫಾಲಿ ವರ್ಮಾ ಸೇರಿದಂತೆ ಇತರೆ ಅನುಭವಿ ಆಟಗಾರರು ಸೇರಿದ್ದಾರೆ. ಇನ್ನು ಕಳಪೆ ಪ್ರದರ್ಶನ ತೋರಿದ ರೋಡ್ರಿಗಸ್ ಜೊತೆ ವೇಗದ ಬೌಲರ್ ಶಿಖಾ ಪಾಂಡೆ ಅವರನ್ನು ಸಹ ತಂಡದಿಂದ ಕೈಬಿಡಲಾಗಿದೆ.

ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೂಡಾ ಸ್ಥಾನ ಪಡೆಯಲು ವಿಫಲರಾಗಿದ್ದು ಏಕದಿನ ಮಾದರಿಯಲ್ಲಿ ಅವರು ತೋರ್ಪಡಿಸಿದ ಕಳಪೆ ಪ್ರದರ್ಶನ ಕಾರಣದಿಂದ ಸದ್ಯಕ್ಕೆ ಈ ಆಟಗಾರ್ತಿಯರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಪಿಟಿಐಗೆ ದೃಢಪಡಿಸಿದೆ.

ಇನ್ನು ಫೆಬ್ರವರಿ 11 ರಿಂದ 24 ರವರೆಗೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಇದೇ 15 ಸದಸ್ಯರ ತಂಡವು ಕಾಣಿಸಿಕೊಳ್ಳಲಿದೆ ಎಂದೂ ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

  • #TeamIndia squad for one-off T20I against New Zealand:

    Harmanpreet Kaur (C), Smriti Mandhana (VC), Shafali, Yastika, Deepti, Richa (WK), Sneh Rana, Pooja, Meghna Singh, Renuka Singh Thakur, Taniya (WK), Rajeshwari, Poonam, Ekta, S. Meghna, Simran Dil Bahadur#NZvIND

    — BCCI Women (@BCCIWomen) January 6, 2022 " class="align-text-top noRightClick twitterSection" data=" ">

ಭಾರತವು ಮಾರ್ಚ್ 6 ರಂದು ಟೌರಂಗದ ಬೇ ಓವಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದ್ದು ಮಾರ್ಚ್ 10 ರಂದು ಹ್ಯಾಮಿಲ್ಟನ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಇನ್ನು ವಿಶ್ವಕಪ್ ತಂಡದ ಜೊತೆ ಬಿಸಿಸಿಐ ನ್ಯೂಜಿಲೆಂಡ್ ವಿರುದ್ಧ ನಡೆಯುವ ಏಕದಿನ ಮತ್ತು ಟಿ20 ಸರಣಿಗೂ ತಂಡವನ್ನು ಪ್ರಕಟಿಸಿದ್ದು ತಂಡದ ಆಟಗಾರರ ಮಾಹಿತಿ ಇಲ್ಲಿದೆ.

ವಿಶ್ವಕಪ್ ತಂಡ:

ಮಿಥಾಲಿ ರಾಜ್ (C), ಹರ್ಮನ್‌ಪ್ರೀತ್ ಕೌರ್ (VC), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (WK), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (WK), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.

ಸ್ಟ್ಯಾಂಡ್‌ಬೈ ಆಟಗಾರರು: ಸಬ್ಬಿನೇನಿ ಮೇಘನಾ, ಏಕ್ತಾ ಬಿಷ್ತ್, ಸಿಮ್ರಾನ್ ದಿಲ್ ಬಹದ್ದೂರ್.

ನ್ಯೂಜಿಲೆಂಡ್ ವಿರುದ್ಧ T20I ಆಡಲಿರುವ ತಂಡ:

ಹರ್ಮನ್‌ಪ್ರೀತ್ ಕೌರ್ (C), ಸ್ಮೃತಿ ಮಂಧಾನ (VC), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (WK), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (WK), ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಏಕ್ತಾ ಬಿಷ್ತ್, ಸಬ್ಬಿನೇನಿ ಮೇಘನಾ, ಸಿಮ್ರಾನ್ ದಿಲ್ ಬಹದ್ದೂರ್.

Last Updated : Jan 6, 2022, 3:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.