ETV Bharat / sports

ಸೌರಾಷ್ಟ್ರ ತಂಡ ರಣಜಿ ಫೈನಲ್​ಗೆ: ಇಂಡಿಯಾ-ಆಸಿಸ್ ಎರಡನೇ ಟೆಸ್ಟ್​ನಿಂದ ಜಯದೇವ್ ಉನಾದ್ಕತ್​ ಬಿಡುಗಡೆ - ETV Bharath Kannada news

ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಎರಡನೇ ಪಂದ್ಯದಿಂದ ಜಯದೇವ್ ಉನಾದ್ಕತ್​ ಬಿಡುಗಡೆ - ರಣಜಿ ಟ್ರೋಫಿಯಲ್ಲಿ ಫೈನಲ್​ ಪ್ರವೇಶಿಸಿರುವ ಸೌರಾಷ್ಟ್ರ - ಸೌರಾಷ್ಟ್ರ ತಂಡದ ಪ್ರಮುಖ ಬೌಲರ್​ ಆಗಿರುವ ಉನಾದ್ಕತ್​ಗೆ ಎರಡನೇ ಟೆಸ್ಟ್​ನಿಂದ ಬಿಡುಗಡೆ ಮಾಡಿದ ಬಿಸಿಸಿಐ

Jaydev Undakat released from second Test to play Ranji final for Saurashtra
ಜಯದೇವ್ ಉನಾದ್ಕತ್​ ಬಿಡುಗಡೆ
author img

By

Published : Feb 12, 2023, 9:19 PM IST

ಹೈದರಾಬಾದ್​: ಕರ್ನಾಟಕ ಮತ್ತು ಸೌರಾಷ್ಟ್ರ ರಣಜಿ ಸೆಮೀಸ್​ ಫೈಟ್​ನಲ್ಲಿ ಗೆದ್ದ ಅರ್ಪಿತ್ ವಾಸವಾಡ ನಾಯಕತ್ವದ ತಂಡ ಫೈನಲ್​ ಪ್ರವೇಶಿಸಿದೆ. ಫೆಬ್ರವರಿ 16 ರಿಂದ ಫೈನಲ್​ ಫೈಟ್​ ಆರಂಭವಾಗಲಿದ್ದು, ಸೌರಾಷ್ಟ್ರವು ಬೆಂಗಾಳ ತಂಡವನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಸೌರಾಷ್ಟ್ರದ ಪ್ರಮುಖ ಬೌಲರ್​ ಜಯದೇವ್ ಉನದ್ಕತ್ ಅವರನ್ನು ಆಸಿಸ್​ ವಿರುದ್ಧದ ಎರಡನೇ ಪಂದ್ಯದಿಂದ ಬಿಡುಗಡೆ ಮಾಡಲಾಗಿದೆ.

ವೇಗಿ ಜಯದೇವ್ ಉನದ್ಕತ್ ಅವರು ಸೌರಾಷ್ಟ್ರ ಪರ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ಗೆ ಭಾರತ ತಂಡದಿಂದ ಭಾನುವಾರ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

"ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತದ ಮಾಸ್ಟರ್‌ಕಾರ್ಡ್ ಆಸ್ಟ್ರೇಲಿಯಾ ಪ್ರವಾಸದ 2 ನೇ ಟೆಸ್ಟ್‌ಗಾಗಿ ಭಾರತ ತಂಡದಿಂದ ಜಯದೇವ್ ಉನದ್ಕತ್ ಅವರನ್ನು ಬಿಡುಗಡೆ ಮಾಡಲು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಸಮಾಲೋಚಿಸಲು ನಿರ್ಧರಿಸಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉನಾದ್ಕತ್ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಮೊದಲ ಪಂದಯ ನಾಗ್ಪುರದ ಸ್ಪಿನ್​ ಟ್ರ್ಯಾಕ್​ನಲ್ಲಿ ನಡೆದ ಕಾರಣ ಸ್ಪಿನ್ನರ್​ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭಾರತವು ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ಉ ಮುರು ದಿನದಲ್ಲಿ ಜಯಿಸಿದೆ. 132 ರನ್​ನ ಜೊತೆಗೆ ಇನ್ನಿಂಗ್ಸ್​ನ ಗೆಲುವನ್ನು ದಾಖಲಿಸಿದೆ.

ಭಾರತವು ಮೊದಲ ಪಂದ್ಯದಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಲಾಗಿತ್ತು. ಇವರ ಜೊತೆಗೆ ಮೂವರು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ವೇಗಿ ಉನಾದ್ಕತ್ ಸುಮಾರು 12 ವರ್ಷಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಕರ್ನಾಟಕದ ಕನಸು ಭಗ್ನ: ಕರ್ನಾಟಕ ತಂಡವು ರಣಜಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದ್ದು, ಸೌರಾಷ್ಟ್ರಕ್ಕೆ 115 ರನ್‌ಗಳ ಸುಲಭ ಗುರಿ ನೀಡಿತ್ತು. ಈ ಗುರಿಯನ್ನು 6 ವಿಕೆಟ್​ ನಷ್ಟಕ್ಕೆ 117ರನ್​ ಗಳಿಸಿದ ಸೌರಾಷ್ಟ್ರ ಫೈನಲ್​ಗೆ ಅವಕಾಶ ಮಾಡಿಕೊಂಡಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ರಣಜಿಯ ಕರ್ನಾಟಕ ಮತ್ತು ಸೌರಾಷ್ಟ್ರ ಸೆಮೀಸ್​ ಫೈಟ್​ನಲ್ಲಿ ಆತಿಥೇಯ ತಂಡ ಮೊದಲು ಬ್ಯಾಟ್​ ಮಾಡಿತು. ನಾಯಕ ಮಯಂಕ್‌ ಅಗರವಾಲ್ ಸಿಡಿಸಿದ 249 ರನ್ನಿನ ಬಲದಿಂದ ಮೊದಲ ಇನ್ನಿಂಗ್ಸ್​ನಲ್ಲಿ 407 ರನ್‌ ಕಲೆಹಾಕಿತ್ತು. ಸೌರಾಷ್ಟ್ರ ಇದಕ್ಕುತ್ತರವಾಗಿ ಅಮೋಘ ಬ್ಯಾಟಿಂಗ್‌ ಬಲದಿಂದ 527 ರನ್ ಗಳಿಸಿ 120ಗಳ ಮುನ್ನಡೆ ಪಡೆದುಕೊಂಡಿತು. ಸೌರಾಷ್ಟ್ರ ನಾಯಕ ಅರ್ಪಿತ್‌ 202 ರನ್‌, ಅನುಭವಿ ಶೆಲ್ಡನ್‌ ಜಾಕ್ಸನ್‌ 160, ಹಾಗೂ ಚಿರಾಗ್‌ ಜಾನಿ 72 ರನ್‌ ತಂಡದ ಬೃಹತ್​ ಮೊತ್ತಕ್ಕೆ ಸಹಕಾರಿಯಾಯಿತು.

120 ರನ್‌ ಅಂತರದ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ 224 ರನ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 115ರನ್​ ಗುರಿ ಎದುರಾಳಿಗೆ ನೀಡಿತು. ಕೊನೆಯ ದಿನವಾಗಿದ್ದ ಇಂದು ಅಂತಿಮ ಕ್ಷಣದ ವರೆಗೂ ಪ್ರಯತ್ನಿಸಿದ ಸೌರಾಷ್ಟ್ರ ಡ್ರಾ ಆಗಲು ಬಿಡದೇ 6 ವಿಕೆಟ್ ಕಳೆದುಕೊಂಡು 117 ಪೇರಿಸಿ ವಿಜಯ ಸಾಧಿಸಿತು.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸನಿಹಕ್ಕೆ ಭಾರತ: ಫೈನಲ್ ಲೆಕ್ಕಾಚಾರವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.