ಮುಂಬೈ: ಐಪಿಎಲ್ ಮುಂದೂಡಲ್ಪಟ್ಟಿದ್ದರಿಂದ ಸ್ಥಳೀಯ ಆಟಗಾರರು ಈಗಾಗಲೇ ತಮ್ಮ ಮನೆ ತಲುಪಿದ್ದಾರೆ, ಆಸ್ಟ್ರೇಲಿಯಾ ಆಟಗಾರರು ತವರಿಗೆ ಮರಳುವ ಮುನ್ನ ಮಾಲ್ಡೀವ್ಸ್ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಿದ್ದು, ಅವರ ಜೊತೆಗೆ ಮುಖ್ಯ ಕೋಚ್ ಜಯವರ್ದನೆ ಮಾಲ್ಡೀವ್ಸ್ನಲ್ಲೇ ಉಳಿದಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಿಳಿಸಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸರಣಿ ಟ್ವೀಟ್ಗಳ ಮೂಲಕ ತಮ್ಮ ಆಟಗಾರರ ಬಗ್ಗೆ ತೆಗೆದುಕೊಂಡಿರುವ ಕಾಳಜಿಯನ್ನು ಹಂಚಿಕೊಂಡಿದೆ. ಎಲ್ಲ ಕೋವಿಡ್ -19 ಸಂಬಂಧಿತ ಪ್ರಯಾಣ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಶ್ರದ್ಧೆಯಿಂದ ಪಾಲಿಸಲಾಗಿದ್ದು, ಭಾರತೀಯ ಆಟಗಾರರು ಅವರವರ ನಗರಗಳಿಗೆ ತಲುಪಿದ್ದಾರೆ.
-
Travel update on MI players, support staff and management: pic.twitter.com/fw0awJO2K4
— Mumbai Indians (@mipaltan) May 6, 2021 " class="align-text-top noRightClick twitterSection" data="
">Travel update on MI players, support staff and management: pic.twitter.com/fw0awJO2K4
— Mumbai Indians (@mipaltan) May 6, 2021Travel update on MI players, support staff and management: pic.twitter.com/fw0awJO2K4
— Mumbai Indians (@mipaltan) May 6, 2021
ಮುಂಬೈ ಮತ್ತು ಅಹ್ಮದಾಬಾದ್ ಮೂಲದ ಆಟಗಾರರು ಮತ್ತು ಸಿಬ್ಬಂದಿಗಳನ್ನು ಅಹ್ಮದಾಬಾದ್ ಮೂಲಕ ಚಾರ್ಟೆಡ್ ಫ್ಲೈಟ್ನಲ್ಲಿ ಕಳುಹಿಸಲಾಗಿದೆ. ಆಸ್ಟ್ರೇಲಿಯಾ ಆಟಗಾರರು, ಸಹಾಯಕ ಸಿಬ್ಬಂದಿಗಳು ವಿಶೇಷ ಚಾರ್ಟರ್ ಫ್ಲೈಟ್ ಮೂಲಕ ಮಾಲ್ಡೀವ್ಸ್ಗೆ ಕಳುಹಿಸಲಾಗಿದೆ.
-
👕 MI managment will stay back in Delhi till all members of the MI contingent reach their respective destinations safely.
— Mumbai Indians (@mipaltan) May 6, 2021 " class="align-text-top noRightClick twitterSection" data="
">👕 MI managment will stay back in Delhi till all members of the MI contingent reach their respective destinations safely.
— Mumbai Indians (@mipaltan) May 6, 2021👕 MI managment will stay back in Delhi till all members of the MI contingent reach their respective destinations safely.
— Mumbai Indians (@mipaltan) May 6, 2021
ಕ್ರಿಸ್ ಲಿನ್ ಮತ್ತು ನಥನ್ ಕೌಲ್ಟರ್ ನೈಲ್ 14 ದಿನಗಳ ಕ್ವಾರಂಟೈನ್ಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ನಂತರವ ಅವರು ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳಸಲಿದ್ದಾರೆ. ಇನ್ನು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ದನೆ ಕೂಡ ಮಾಲ್ಡೀವ್ಸ್ನಲ್ಲೇ ಕ್ವಾರಂಟೈನ್ ಮುಗಿಸಿ ನಂತರ ಶ್ರೀಲಂಕಾಗೆ ತೆರಳಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.
-
〽️ Mumbai & Ahmedabad based players and support staff members will return home via Ahmedabad on a charter flight. The Cabin crew has completed 7 days quarantine at the team hotel in Delhi.
— Mumbai Indians (@mipaltan) May 6, 2021 " '="" class="align-text-top noRightClick twitterSection" data="
">〽️ Mumbai & Ahmedabad based players and support staff members will return home via Ahmedabad on a charter flight. The Cabin crew has completed 7 days quarantine at the team hotel in Delhi.
— Mumbai Indians (@mipaltan) May 6, 2021〽️ Mumbai & Ahmedabad based players and support staff members will return home via Ahmedabad on a charter flight. The Cabin crew has completed 7 days quarantine at the team hotel in Delhi.
— Mumbai Indians (@mipaltan) May 6, 2021
ಉಳಿದಂತೆ ಕೀರನ್ ಪೊಲಾರ್ಡ್ ಟ್ರಿನಿಡಾಡ್ಗೆ, ಕ್ವಿಂಟನ್ ಡಿ ಕಾಕ್ ಜೋಹನ್ಸ್ಬರ್ಗ್ ಮತ್ತು ಪೇಸರ್ ಬೌಲ್ಟ್ ಹಾಗೂ ಬೌಲಿಂಗ್ ಕೋಚ್ ಶೇನ್ ಬಾಂಡ್ ಆಕ್ಲೆಂಡ್ಗೆ ಈಗಾಗಲೇ ತಲುಪಿದ್ದಾರೆ.
ಇದನ್ನು ಓದಿ:ಅರ್ಧಕ್ಕೆ ನಿಂತ ಐಪಿಎಲ್ ನಡೆಸಿಕೊಡಲು ಆಫರ್ ನೀಡಿದ ಇಂಗ್ಲೆಂಡ್ ಕೌಂಟಿ ಕ್ಲಬ್ಸ್