ETV Bharat / sports

ಭಾರತ - ನೇಪಾಳ ಪಂದ್ಯದ ಮ್ಯಾಚ್ ರೆಫರಿ ಆಗಿ ದಾಖಲೆ ಬರೆಯಲಿದ್ದಾರೆ ಕನ್ನಡಿಗ ಜಾವಗಲ್ ಶ್ರೀನಾಥ್ - ETV Bharath Kannada news

Javagal Srinath set to officiate in 250th odi as match referee: ಕನ್ನಡಿಗ ಜಾವಗಲ್ ಶ್ರೀನಾಥ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯಾಗಿ 250 ಪಂದ್ಯಗಳಲ್ಲಿ ಕಾರ್ಯನಿರ್ವಹಿಸದ ದಾಖಲೆಯನ್ನು ಮಾಡಿದ್ದಾರೆ.

Javagal Srinath
Javagal Srinath
author img

By ETV Bharat Karnataka Team

Published : Sep 4, 2023, 5:26 PM IST

ಪಲ್ಲೆಕೆಲೆ (ಶ್ರೀಲಂಕಾ): ಇಂದು ಭಾರತ ಮತ್ತು ನೇಪಾಳದ ನಡುವಿನ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ವಿಶಿಷ್ಟ ದಾಖಲೆವೊಂದನ್ನು ಮಾಡಿದ್ದಾರೆ. 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ನಂತರ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮ್ಯಾಚ್​ ರೆಫರಿ ಆಗಿ 250ನೇ ಪಂದ್ಯವನ್ನು ನಿರ್ವಹಿಸಿದ ದಾಖಲೆ ಈಗ ಅವರ ಹೆಸರಿಗಾಗಿದೆ.

67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್‌ ಮತ್ತು 229 ಏಕದಿನಗಳಲ್ಲಿ 315 ವಿಕೆಟ್‌ ಗಳಿಸಿದ ಭಾರತದ ಮಾಜಿ ವೇಗದ ಬೌಲರ್, ಶ್ರೀನಾಥ್ 2003 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ತಲುಪಿದ ತಂಡದ ಸದಸ್ಯರಾಗಿದ್ದರು, ಅವರು ನಂತರ ನಿವೃತ್ತಿ ಪ್ರಕಟಿಸಿದ್ದರು. ನಿವೃತ್ತಿ ಪಡೆದ ಮೂರು ವರ್ಷದ ನಂತರ ಐಸಿಸಿ ಮ್ಯಾಚ್ ರೆಫರಿಯಾಗಿ ಆಯ್ಕೆ ಆಗಿದ್ದರು.

250 ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ ವಿಶ್ವದ ನಾಲ್ಕನೇ ಮತ್ತು ಭಾರತದ ಎರಡನೇ ವ್ಯಕ್ತಿಯಾಗಿದ್ದಾರೆ. ಇವರಿಗೂ ಮೊದಲು ರಂಜನ್ ಮದುಗಲೆ, ಕ್ರಿಸ್ ಬ್ರಾಡ್ ಮತ್ತು ಜೆಫ್ ಕ್ರೋವ್ 250 ಏಕದಿನ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು.

ಈ ಬಗ್ಗೆ ಸ್ವತಃ ಶ್ರೀನಾಥ್​ ಮಾತನಾಡಿದ್ದು,"ಮ್ಯಾಚ್ ರೆಫರಿಯಾಗಿ ಈ ಮೈಲಿಗಲ್ಲನ್ನು ತಲುಪುತ್ತಿರುವುದು ಸಂತಸ ತಂದಿದೆ. ರೆಫರಿಯಾಗಿ 17 ವರ್ಷಗಳ ಪ್ರಯಾಣ ಪೂರ್ಣಗೊಳಿಸಿದ್ದೇನೆ. ಇದರಲ್ಲಿ ನಾನು ಆಡಿದ ಏಕದಿನ ಪಂದ್ಯಕ್ಕಿಂತ ಹೆಚ್ಚು ರೆಫರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂಬುದು ನಂಬಲಸಾಧ್ಯವಾಗಿದೆ. ನಾನು ಇನ್ನೂ ಆಟದೊಂದಿಗೆ ಸಂಬಂಧ ಹೊಂದಿರುವುದು ನನಗೆ ಹೆಚ್ಚು ವಿಶೇಷವಾಗಿದೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

"2006 ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಮ್ಯಾಚ್ ರೆಫರಿಯಾಗಿ ನನ್ನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಿಂದ ನಿರ್ವಹಿಸಿದೆ. ನಂತರ ಉತ್ತಮವಾಗಿ ಕಾರ್ಯನಿರ್ವಹಿಸುವ ಅವಕಾಶ ಕೂಡಿ ಬಂತು. ಐಸಿಸಿ, ಬಿಸಿಸಿಐ, ಎಲೈಟ್ ಪ್ಯಾನೆಲ್‌ನಲ್ಲಿರುವ ನನ್ನ ಸಹೋದ್ಯೋಗಿಗಳು ಮತ್ತು ಈ ಪ್ರಯಾಣದ ಮೂಲಕ ನನ್ನೊಂದಿಗೆ ಇದ್ದ ಹತ್ತಿರದ ಆತ್ಮೀಯರಿಗೆ ಧನ್ಯವಾದ" ಎಂದು ಹೇಳಿದರು.

ಶ್ರೀನಾಥ್ ಅವರು 2006 ರಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯರಾದರು ಮತ್ತು ಅದೇ ವರ್ಷದಲ್ಲಿ ಅವರ ಮೊದಲ ಪುರುಷರ ಏಕದಿನ ಪಂದ್ಯದ ರೆಫರಿ ಆಗಿದ್ದರು. ಅವರು 2007 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಮತ್ತು 2009 ಮತ್ತು 2013 ರಲ್ಲಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮ್ಯಾಚ್ ರೆಫರಿಯಾಗಿದ್ದರು. ಅವರು 2012, 2014, 2016 ಮತ್ತು 2021 ರಲ್ಲಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ರೆಫರಿಯಾಗಿದ್ದಾರೆ. ಶ್ರೀನಾಥ್ ಅವರು 65 ಟೆಸ್ಟ್‌ಗಳು, 118 ಪುರುಷರ ಟಿ20 ಮತ್ತು 16 ಮಹಿಳೆಯರ ಟಿ20 ರೆಫರಿಯಾಗಿದ್ದಾರೆ.

250 ಏಕದಿನ ಪಂದ್ಯದ ರೆಫರಿಯಾಗಿ ಸೇವೆಸಲ್ಲಿಸುವ ಮೂಲಕ ವಿಶಿಷ್ಟ ಮೈಲಿಗಲ್ಲನ್ನು ಸಾಧಿಸಿರುವ ಶ್ರೀನಾಥ್ ಅವರನ್ನು ಅಭಿನಂದಿಸಿದೆ. "ಉತ್ತಮ ಆಟಗಾರನನ್ನು ಐಸಿಸಿಯ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯಾಗಿ ನೋಡಲು ಹೆಮ್ಮೆಯಾಗುತ್ತದೆ. ಅವರ ಅನುಭವ ಮತ್ತು ಆಟಗಾರರು ಅವರ ಬಗ್ಗೆ ಹೊಂದಿರುವ ಗೌರವವು ಅಪಾರ ಮೌಲ್ಯವನ್ನು ಹೊಂದಿದೆ. ಅಂತಹ ನಿರಂತರ ಯಶಸ್ಸನ್ನು ಸಾಧಿಸಲು ಇದು ಬಹಳಷ್ಟು ಬದ್ಧತೆಯನ್ನು ತೋರಿದ್ದಾರೆ. 250 ಪಂದ್ಯದ ಮೈಲುಗಲ್ಲು ಸಾಧಿಸುತ್ತಿರುವ ಶ್ರೀನಾಥ್​ಗೆ ಶುಭಾಶಯ" ಎಂದು ಐಸಿಸಿ ಭಾನುವಾರ ತಿಳಿಸಿದೆ.

ಇದನ್ನೂ ಓದಿ: Asia Cup 2023: ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ರೋಜರ್ ಬಿನ್ನಿ, ರಾಜೀವ್ ಶುಕ್ಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.