ETV Bharat / sports

Jasprit Bumrah: ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಪುನರಾಗಮನ ನಿರೀಕ್ಷೆ: ಎನ್​ಸಿಎಯಲ್ಲಿ ಪ್ರತಿದಿನ 7 ಓವರ್​ ಪ್ರಾಕ್ಟಿಸ್‌ - seven overs a day at NCA

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಗಾಯಕ್ಕೆ ತುತ್ತಾಗಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಐರ್ಲೆಂಡ್‌ಗೆ ಪ್ರವಾಸಕ್ಕೆ ಮರಳುವ ನಿರೀಕ್ಷೆ ಇದ್ದು, ಎನ್​ಸಿಎಯಲ್ಲಿ ಪುನರ್ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Jasprit Bumrah
ಜಸ್ಪ್ರೀತ್ ಬುಮ್ರಾ
author img

By

Published : Jun 27, 2023, 6:32 PM IST

ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್​ಗೆ ಇನ್ನು 100 ದಿನ ಬಾಕಿ ಇದೆ. ಐಸಿಸಿ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದೆ. ಆದರೆ ಭಾರತದ ಸ್ಟಾರ್​ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ. ಬುಮ್ರಾ ತಂಡದಿಂದ ಹೊರಗುಳಿದು ಒಂದು ವರ್ಷ ಸಮೀಪಿಸುತ್ತಿದೆ. ಶಸ್ತ್ರಚಿಕಿತ್ಸೆಗೊಳಗಾಗಿಯೂ ಬಹುತೇಕ ಸಮಯ ಕಳೆದಿದೆ. ತಂಡದ ಎ ಗುತ್ತಿಗೆ ಆಟಗಾರರಾಗಿರುವ ಬುಮ್ರಾ ಏಷ್ಯಾಕಪ್​ ಮತ್ತು ವಿಶ್ವಕಪ್​ ವೇಳೆ ತಂಡಕ್ಕೆ ಮರಳುತ್ತಾರೆಯೇ ಎಂಬುದು ಎಲ್ಲರಲ್ಲಿರುವ ಪ್ರಶ್ನೆ. ಈ ನಡುವೆ ಅಭಿಮಾನಿಗಳಿಗೆ ಬುಮ್ರಾ ಪುನರಾಗಮನದ ಸಿಹಿಸುದ್ದಿ ಸಿಕ್ಕಿದೆ.

ಇತ್ತೀಚೆಗೆ ಬಂದ ವರದಿಯಂತೆ, ಬುಮ್ರಾ ಆಗಸ್ಟ್‌ ಮೂರನೇ ಮತ್ತು ನಾಲ್ಕನೇ ವಾರದಲ್ಲಿ ಭಾರತ ತಂಡವು 3 ಟಿ20 ಪಂದ್ಯಗಳನ್ನು ಆಡಲು ಐರ್ಲೆಂಡ್‌ ಪ್ರವಾಸ ಮಾಡಲಿದೆ. ಪ್ರವಾಸದ ವೇಳೆ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ ಬಿಸಿಸಿಐ ಇನ್ನೂ ಸ್ಪಷ್ಟಪಡಿಸಿಲ್ಲ. ಅಲ್ಲದೇ ಇದಕ್ಕೆ ಬಿ ಟೀಂ​ ಕಳಿಸುವ ಸಾಧ್ಯತೆ ಕಡಿಮೆ ಇದ್ದು ಎ ಟೀಮ್​ ಕಳುಹಿಸಲಿದೆ ಎನ್ನಲಾಗಿದೆ. ತಂಡದಲ್ಲಿ ಬುಮ್ರಾ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ವರದಿ ಹೇಳಿತ್ತು.

ಆದರೆ ಬಿಸಿಸಿಐ ಬುಮ್ರಾ ಅವರ ಆರೋಗ್ಯದ ಬಗ್ಗೆ ಯಾವುದೇ ಅಪ್ಡೇಟ್ ಅ​ನ್ನು ಇದುವರೆಗೂ ನೀಡಿಲ್ಲ. ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉಳಿದುಹೋಗಿದೆ. ಬುಮ್ರಾ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನರ್ವಸತಿ ಶಿಬಿರದಲ್ಲಿದ್ದಾರೆ. ಬುಮ್ರಾ ಎನ್‌ಸಿಎ ನೆಟ್ಸ್‌ನಲ್ಲಿ ಒಂದು ದಿನದಲ್ಲಿ ಏಳು ಓವರ್‌ಗಳನ್ನು ಬೌಲ್ ಮಾಡುತ್ತಿದ್ದಾರೆ. ಇದು 2023ರ ವಿಶ್ವಕಪ್ ಅನ್ನು ಎದುರು ನೋಡುತ್ತಿರುವ ಭಾರತೀಯ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದೆ.

ಕಳೆದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಮತ್ತೆ ಬುಮ್ರಾ ಬೆನ್ನುನೋವಿಗೆ ತುತ್ತಾಗಿದ್ದರು. ನಂತರದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಅವರು ಅಂದಿನಿಂದ ಚೇತರಿಕೆಯ ಹಾದಿಯಲ್ಲಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಟಿ20ಯಲ್ಲಿ ಕೊನೆಯ ಬಾರಿ ಭಾರತ ಪರ ಆಡಿದ್ದರು. "ಬುಮ್ರಾ ಒಳಗೊಂಡಿರುವ ಗಾಯದ ಬಗ್ಗೆ ನಿರಂತರ ಮೇಲ್ವಿಚಾರಣೆ ಅಗತ್ಯವಿದೆ. ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಎನ್‌ಸಿಎ ನೆಟ್ಸ್‌ನಲ್ಲಿ ಏಳು ಓವರ್‌ಗಳನ್ನು ಬೌಲ್ ಮಾಡುತ್ತಿದ್ದಾರೆ. ಅಭ್ಯಾಸಕ್ಕೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಮತ್ತೆ ಬೌಲಿಂಗ್​ ಕ್ರಮವನ್ನು ಲಯಕ್ಕೆ ತಂದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಎನ್‌ಸಿಎಯಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ. ನಂತರ ಫಿಟ್‌ನೆಸ್‌ ನಿಕಟ ಮೌಲ್ಯಮಾಪನ ನಡೆಯಲಿದೆ" ಎಂದು ಎನ್‌ಸಿಎ ಮೂಲಗಳು ತಿಳಿಸಿವೆ.

ಭಾರತದ ಮಾಜಿ ಸ್ಟ್ರೆಂಥ್​ ಮತ್ತು ಕಂಡೀಷನಿಂಗ್ ಕೋಚ್​ ರಾಮ್‌ಜಿ ಶ್ರೀನಿವಾಸನ್ ಮಾತನಾಡಿದ್ದು, "ಬುಮ್ರಾ ಅವರನ್ನು ಮೈದಾನಕ್ಕಿಳಿಸುವ ಬಗ್ಗೆ ಆತುರಪಡಬಾರದು. ನಿಧಾನವಾಗಿ ಚೇತರಿಸಿಕೊಳ್ಳಲು ಸಮಯ ಕೊಡಬೇಕು. ಎನ್​ಸಿಎಯಲ್ಲಿ ಅಭ್ಯಾಸ ಪಂದ್ಯಗಳ ನಂತರ ದೇಶೀಯ ಪಂದ್ಯಗಳಲ್ಲಿ ಆಡಿಸಿ ನಂತರ ಮೇಲ್ಮಟ್ಟದ ಪಂದ್ಯಗಳಲ್ಲಿ ಹೆಚ್ಚು ಒತ್ತಡದ ಆಟಕ್ಕೆ ಕರೆತರಬೇಕು. ಸೂಕ್ಷ್ಮವಾದ ವ್ಯಾಯಾಮ ಮತ್ತು ಬುಮ್ರಾಗೆ ಗರಿಷ್ಠ ಚೇತರಿಕೆ ಸಮಯವನ್ನು ಅನುಮತಿಸಬೇಕು" ಎಂದು ಹೇಳಿದ್ದಾರೆ.

ಚೇತರಿಕೆ ಹಾದಿಯಲ್ಲಿ ಸ್ಟಾರ್​ ಆಟಗಾರರು: ಎನ್​ಸಿಎಯಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕಾರು ಅಪಘಾತದಿಂದ ಗಾಯಕ್ಕೆ ತುತ್ತಾಗಿದ್ದ ರಿಷಭ್​ ಪಂತ್​, ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಗಾಯಕ್ಕೊಳಗಾದ ಶ್ರೇಯಸ್​ ಅಯ್ಯರ್​, ಐಪಿಎಲ್‌ನಲ್ಲಿ​ ಪೆಟ್ಟು ಮಾಡಿಕೊಂಡ ಕೆ.ಎಲ್. ರಾಹುಲ್​ ಕೂಡಾ ಪುನರ್ವಸತಿಗೆ ಒಳಗಾಗಿದ್ದಾರೆ. ಇದಲ್ಲದೇ ಬಿಸಿಸಿಐ ಯುವ ಆಟಗಾರರನ್ನು ಎನ್​ಸಿಎಗೆ ಕರೆಸಿದ್ದು ಅವರ ಫಿಟ್​ನೆಸ್​ಗೂ ಹೆಚ್ಚು ಮಹತ್ವ ನೀಡುತ್ತಿದೆ.

ಇದನ್ನೂ ಓದಿ: Cricket World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್‌​ನಲ್ಲಿ ಭಾರಿ ಕುತೂಹಲದ ಪಂದ್ಯಗಳು ಯಾವುವು ಗೊತ್ತೇ? ನೋಡಲು ಮಿಸ್​ ಮಾಡದಿರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.