ETV Bharat / sports

ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ - Jasprit Bumrah becomes India's leading wicket-taker

ಒಟ್ಟಾರೆ ವಿಶ್ವ ಟಿ20ಯಲ್ಲಿ ಬಾಂಗ್ಲಾದೇಶದ ಆಲ್​ರೌಂಡರ್​ ಶಕಿಬ್ ಅಲ್ ಹಸನ್​ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 94 ಪಂದ್ಯಗಳಿಂದ 117 ವಿಕೆಟ್ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿದರೆ, ಶ್ರೀಲಂಕಾದ ಲಸಿತ್​ ಮಾಲಿಂಗ(107), ನ್ಯೂಜಿಲ್ಯಾಂಡ್​ನ ಟಿಮ್ ಸೌಥಿ(104) ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್(102) ಮಾತ್ರ 100ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್ ಅಗಿದ್ದಾರೆ.

ಜಸ್​ಪ್ರೀತ್ ಬೌಲರ್​ ದಾಖಲೆ
author img

By

Published : Nov 6, 2021, 10:19 AM IST

ದುಬೈ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿದ ಭಾರತದ ವೇಗಿ ಜಸ್​ಪ್ರೀತ್ ಬುಮ್ರಾ, ಸ್ಪಿನ್ನರ್​ ಚಹಾಲ್ ಹಿಂದಿಕ್ಕಿ ದೇಶದ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಬುಮ್ರಾ 3.4 ಓವರ್​ಗಳಲ್ಲಿ ಕೇವಲ 11 ರನ್​ ನೀಡಿ 2 ವಿಕೆಟ್ ಪಡೆದರು. ಈ ಮೂಲಕ ಚುಟುಕು ಕ್ರಿಕೆಟ್​ ವೃತ್ತಿ ಜೀವನದಲ್ಲಿ ಭಾರತದ ಪರ ಚಹಾಲ್ ಹಿಂದಿಕ್ಕಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಚಹಾಲ್​ 49 ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದರೆ, ಬುಮ್ರಾ 54 ಪಂದ್ಯಗಳಲ್ಲಿ 64 ವಿಕೆಟ್ ಪಡೆದು ದಾಖಲೆ ಬರೆದರು.

ಇವರನ್ನು ಹೊರತುಪಡಿಸಿದರೆ ಆರ್​ ಅಶ್ವಿನ್​ 48 ಪಂದ್ಯಗಳಿಂದ 55, ಭುವನೇಶ್ವರ್​ ಕುಮಾರ್​ 52 ಪಂದ್ಯಗಳಿಂದ 50, ಜಡೇಜಾ 54 ಪಂದ್ಯಗಳಿಂದ 43 ಮತ್ತು ಹಾರ್ದಿಕ್ ಪಾಂಡ್ಯ 53 ಪಂದ್ಯಗಳಿಂದ 42 ವಿಕೆಟ್​ ಪಡೆದಿದ್ದಾರೆ.

ಒಟ್ಟಾರೆ ವಿಶ್ವ ಟಿ20ಯಲ್ಲಿ ಬಾಂಗ್ಲಾದೇಶದ ಆಲ್​ರೌಂಡರ್​ ಶಕಿಬ್ ಅಲ್ ಹಸನ್​ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 94 ಪಂದ್ಯಗಳಿಂದ 117 ವಿಕೆಟ್ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿದರೆ, ಶ್ರೀಲಂಕಾದ ಲಸಿತ್​ ಮಾಲಿಂಗ(107), ನ್ಯೂಜಿಲ್ಯಾಂಡ್​ನ ಟಿಮ್ ಸೌಥಿ(104) ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್(102) ಮಾತ್ರ 100ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್ ಅಗಿದ್ದಾರೆ.

ಇದನ್ನೂ ಓದಿ:ಒಂದೆರೆಡು ಕೆಟ್ಟ ಪ್ರದರ್ಶನದ ಆಧಾರದ ಮೇಲೆ ನಮ್ಮ ತಂಡದ ಸಾಮರ್ಥ್ಯ ನಿರ್ಧರಿಸಬೇಡಿ: ಜಡೇಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.