ಮ್ಯಾಂಚೆಸ್ಟರ್(ಇಂಗ್ಲೆಂಡ್): ಕ್ರಿಕೆಟ್ ಲೋಕದಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣಗೊಳ್ಳುವುದು, ಬ್ರೇಕ್ ಆಗುವುದು ಕುತೂಹಲದ ಸಂಗತಿಯಾಗುಳಿದಿಲ್ಲ. ಆದರೆ, ಕೆಲ ಪ್ಲೇಯರ್ಸ್ ನಿರ್ಮಿಸುವ ರೆಕಾರ್ಡ್ ಅಷ್ಟೊಂದು ಸುಲಭವಾಗಿ ಮುರಿಯಲು ಆಗುವುದಿಲ್ಲ. ಸದ್ಯ ಅಂಥದ್ದೊಂದು ಸಾಧನೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರಿಂದ ನಿರ್ಮಾಣಗೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ರೆಕಾರ್ಡ್ ನಿರ್ಮಾಣಗೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ತವರು ನೆಲದಲ್ಲಿ 100 ಟೆಸ್ಟ್ ಪಂದ್ಯ ಆಡಿರುವ ಮೊದಲ ಆಟಗಾರನಾಗಿ ಆ್ಯಂಡರ್ಸನ್ ಹೊರಹೊಮ್ಮಿದ್ದಾರೆ.
-
James Anderson became the first to a rare feat in Manchester in the #WTC23 clash against South Africa 😲#ENGvSAhttps://t.co/6jjykYuf6f
— ICC (@ICC) August 25, 2022 " class="align-text-top noRightClick twitterSection" data="
">James Anderson became the first to a rare feat in Manchester in the #WTC23 clash against South Africa 😲#ENGvSAhttps://t.co/6jjykYuf6f
— ICC (@ICC) August 25, 2022James Anderson became the first to a rare feat in Manchester in the #WTC23 clash against South Africa 😲#ENGvSAhttps://t.co/6jjykYuf6f
— ICC (@ICC) August 25, 2022
2003ರಲ್ಲಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಜೇಮ್ಸ್ ಆ್ಯಂಡರ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀರ್ಘಾವಧಿ ಕ್ರಿಕೆಟರ್ ಆಗಿ ಉಳಿದುಕೊಂಡಿದ್ದಾರೆ. ಇಲ್ಲಿಯವರೆಗೆ 147 ಟೆಸ್ಟ್ ಪಂದ್ಯ ಆಡಿರುವ ಅವರು, ಹೆಚ್ಚು ಕ್ರಿಕೆಟ್ ಪಂದ್ಯ ಆಡಿರುವ ಆಟಗಾರ ಸಾಲಿನಲ್ಲೂ ಗುರುತಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ 158 ಟೆಸ್ಟ್, ಜಾಕ್ ಕಾಲಿಸ್ 166 ಟೆಸ್ಟ್ ಪಂದ್ಯ ಆಡಿದ್ದಾರೆ.
ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಆಡಿರುವ ಪ್ಲೇಯರ್ಸ್:
- ಜೇಮ್ಸ್ ಆ್ಯಂಡರ್ಸನ್ 100 ಟೆಸ್ಟ್( ಒಟ್ಟು 174 ಟೆಸ್ಟ್ ಪಂದ್ಯ)
- ಸಚಿನ್ ತೆಂಡೂಲ್ಕರ್ 94 ಟೆಸ್ಟ್(ಒಟ್ಟು 200 ಟೆಸ್ಟ್ ಪಂದ್ಯ)
- ರಿಕಿ ಪಾಂಟಿಂಗ್ 92 ಟೆಸ್ಟ್(168 ಟೆಸ್ಟ್ ಪಂದ್ಯ)
- ಸ್ಟುವರ್ಟ್ ಬ್ರಾಡ್ 91 ಟೆಸ್ಟ್(158 ಟೆಸ್ಟ್ ಪಂದ್ಯ)
- ಅಲೆಸ್ಟರ್ ಕುಕ್ 89 ಟೆಸ್ಟ್(161 ಟೆಸ್ಟ್)
ಇದನ್ನೂ ಓದಿ: ಹೆಚ್ಚು ಬಾರಿ ಕೊಹ್ಲಿ ವಿಕೆಟ್ ಪಡೆದ ದಾಖಲೆ, ಲಿಯಾನ್ ಜೊತೆ ಹಂಚಿಕೊಂಡ ಆ್ಯಂಡರ್ಸನ್
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಜೇಮ್ಸ್ ಆ್ಯಂಡರ್ಸನ್ ಕಣಕ್ಕಿಳಿದಿದ್ದು, 1 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನೂ ಟೆಸ್ಟ್ನಲ್ಲಿ 600ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ವಿಕೆಟ್ ಹೆಚ್ಚು ಸಲ ಪಡೆದುಕೊಂಡಿರುವ ಸಾಧನೆ ಸಹ ಆ್ಯಂಡರ್ಸನ್ ಹೆಸರಿನಲ್ಲಿದೆ.