ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​: ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಜೇಮ್ಸ್​ ಆ್ಯಂಡರ್ಸನ್ - James Anderson equals to anil kumble record

ಎರಡನೇ ಇನ್ನಿಂಗ್ಸ್​ನಲ್ಲಿ ಸತತ ಚೇತೇಶ್ವರ್ ಪೂಜಾರ(4) ಮತ್ತು ವಿರಾಟ್​ ಕೊಹ್ಲಿ(0) ವಿಕೆಟ್ ಪಡೆದ ಆ್ಯಂಡರ್ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 619 ವಿಕೆಟ್​ ಪಡೆದು ಅನಿಲ್​ ಕುಂಬ್ಳೆ ದಾಖಲೆ ಸರಿಗಟ್ಟಿದರು. 39 ವರ್ಷದ ಹಿರಿಯ ವೇಗಿ ಈ ಸಾಧನೆಗಾಗಿ 163 ಪಂದ್ಯಗಳನ್ನು ತೆಗದುಕೊಂಡಿದ್ದಾರೆ. ಕುಂಬ್ಳೆ ಇಷ್ಟೇ ವಿಕೆಟ್​ಗಳನ್ನು 132 ಪಂದ್ಯಗಳಲ್ಲಿ ಪೂರೈಸಿದ್ದರು.

James Anderson equal to Anil Kumble's most test wickets Taker  record
ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಜೇಮ್ಸ್​ ಆ್ಯಂಡರ್ಸನ್
author img

By

Published : Aug 5, 2021, 7:40 PM IST

ನಾಟಿಂಗ್​​ಹ್ಯಾಮ್: ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ವೇಗಿ ಜೇಮ್ಸ್​ ಆ್ಯಂಡರ್ಸನ್ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಪಟ್ಟಿಯಲ್ಲಿ ಕನ್ನಡಿಗ ಹಾಗೂ ಭಾರತದ ಮಾಜಿ ಸ್ಪಿನ್ನರ್​ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎರಡನೇ ಇನ್ನಿಂಗ್ಸ್​ನಲ್ಲಿ ಸತತ ಚೇತೇಶ್ವರ್ ಪೂಜಾರ(4) ಮತ್ತು ವಿರಾಟ್​ ಕೊಹ್ಲಿ(0) ವಿಕೆಟ್ ಪಡೆದ ಆ್ಯಂಡರ್ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 619 ವಿಕೆಟ್​ ಪಡೆದು ಅನಿಲ್​ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು. 39 ವರ್ಷದ ಹಿರಿಯ ವೇಗಿ ಈ ಸಾಧನೆಗಾಗಿ 163 ಪಂದ್ಯಗಳನ್ನು ತೆಗದುಕೊಂಡಿದ್ದಾರೆ. ಕುಂಬ್ಳೆ ಇಷ್ಟೇ ವಿಕೆಟ್​ಗಳನ್ನು 132 ಪಂದ್ಯಗಳಲ್ಲಿ ಪೂರೈಸಿದ್ದರು.

ಇದೇ ಟೆಸ್ಟ್​ನಲ್ಲಿ ಆ್ಯಂಡರ್ಸನ್​ ಇನ್ನೊಂದು ವಿಕೆಟ್ ಪಡೆದರೆ ದೀರ್ಘ ಮಾದರಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಮೂರನೇ ಬೌಲರ್​ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್(800) ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್​(708) ಮೊದಲೆರಡು ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಆ್ಯಂಡರ್ಸನ್ ಮತ್ತು ಕುಂಬ್ಳೆ ಇದ್ದರೆ, ನಾಲ್ಕರಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮೆಕ್​ಗ್ರಾತ್​(563) ಮತ್ತು 5ರಲ್ಲಿ ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​ ಇದ್ದಾರೆ.

ಇನ್ನು ಪ್ರಸ್ತುತ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗಳಿಗೆ ಆಲೌಟ್​ ಆದರೆ, ಇದಕ್ಕುತ್ತರವಾಗಿ ಭಾರತ ತಂಡ 4 ವಿಕೆಟ್ ಕಳೆದುಕೊಂಡು ಭಾರತ 125 ರನ್​ಗಳಿಸಿದೆ.

ಇದನ್ನು ಓದಿ:ಈ ವರ್ಷ ಮೈದಾನಕ್ಕಿಳಿಯಲ್ಲ ಸ್ಟಾರ್ ಬೌಲರ್​: ಟಿ-20 ವಿಶ್ವಕಪ್​ಗೂ ಮುನ್ನ ಇಂಗ್ಲೆಂಡ್​ಗೆ ಆಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.