ಧರ್ಮಾಶಾಲಾ: ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ತಮಗೆ ಸಿಕ್ಕಿರುವ ನೂತನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಪಾತ್ರವನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದು, ತಮ್ಮ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿಯನ್ನು ವಹಿಸಿದ, ಬ್ಯಾಟಿಂಗ್ನಲ್ಲಿ ಬಡ್ತಿ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿದ್ದಾರೆ.
ಎಡಗೈ ಆಲ್ರೌಂಡರ್ ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು 18 ಎಸೆತಗಳಲ್ಲಿ 45 ರನ್ಗಳಿಸಿ ಸರಣಿ ಜಯಿಸಲು ನೆರವಾಗಿದ್ದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್ಗಳ ಭರ್ಜರಿ ಗೆಲುವು
ಹೌದು, ನಾನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಅನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ. ನಾನು ನನ್ನ ಸಮಯವನ್ನು ತೆಗೆದುಕೊಂಡು ಮತ್ತು ಪರಿಸ್ಥಿತಿಗೆ ತಕ್ಕಂತೆ ನನ್ನ ಇನ್ನಿಂಗ್ಸ್ಅನ್ನು ವೇಗಗೊಳಿಸಬಲ್ಲೆ ಎಂದು ಪಂದ್ಯ ಮುಗಿದ ಬಳಿಕ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.
-
🗣️🗣️ Would like to thank @ImRo45 for backing me: @imjadeja 🔊#TeamIndia | #INDvSL | @Paytm pic.twitter.com/rnfSMGoVwN
— BCCI (@BCCI) February 26, 2022 " class="align-text-top noRightClick twitterSection" data="
">🗣️🗣️ Would like to thank @ImRo45 for backing me: @imjadeja 🔊#TeamIndia | #INDvSL | @Paytm pic.twitter.com/rnfSMGoVwN
— BCCI (@BCCI) February 26, 2022🗣️🗣️ Would like to thank @ImRo45 for backing me: @imjadeja 🔊#TeamIndia | #INDvSL | @Paytm pic.twitter.com/rnfSMGoVwN
— BCCI (@BCCI) February 26, 2022
"ನಾನು ರೋಹಿತ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ನನ್ನನ್ನು ನಂಬುತ್ತಾರೆ ಮತ್ತು ನಾನು ಮೈದಾನದಲ್ಲಿ ಹೋಗಿ ನನ್ನ ತಂಡಕ್ಕಾಗಿ ರನ್ಗಳಿಸಬಲ್ಲೆ ಎಂದು ಅವರಿಗೆ ಭರವಸೆಯಿದೆ. ಹಾಗಾಗಿ ಭವಿಷ್ಯದಲ್ಲಿ ನನಗೆ ಯಾವಾಗ ಅವಕಾಶ ಸಿಗುತ್ತದೆಯೋ, ಅಂದು ಅತ್ಯುತ್ತಮವಾದದನ್ನು ನೀಡುವುದಕ್ಕೆ ಬಯಸುತ್ತೇನೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿ ತಂಡಕ್ಕೆ ಪಂದ್ಯವನ್ನು ಗೆದ್ದುಕೊಡಲು ಬಯಸುತ್ತೇನೆ " ಎಂದು ಸ್ಟಾರ್ ಆಲ್ರೌಂಡರ್ ತಿಳಿಸಿದ್ದಾರೆ.
33 ವರ್ಷದ ಆಲ್ರೌಂಡರ್ ಮೊಣಕಾಲು ಗಾಯಕ್ಕೆ ಒಳಗಾದ ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು.
ಇದನ್ನೂ ಓದಿ:ಭಾರತೀಯ ಆಟಗಾರರು ತೆರಳಬೇಕಿದ್ದ ಬಸ್ನಲ್ಲಿ 2 ಬುಲೆಟ್ ಶೆಲ್ ಪತ್ತೆ!