ETV Bharat / sports

IND vs WI 3rd ODI: ಶ್ರೇಯಸ್​ ಅಯ್ಯರ್​ 80, ರಿಷಬ್​ ಪಂತ್​ 56...ವೆಸ್ಟ್​ ಇಂಡೀಸ್​ಗೆ 266 ರನ್​ಗಳ ಗುರಿ - ವೆಸ್ಟ್​ ಇಂಡೀಸ್​- ಭಾರತ ಏಕದಿನ ಸರಣಿ

ಸರಣಿ ಕ್ಲೀನ್​ಸ್ವೀಪ್​ ಗುರಿಯೊಂದಿಗೆ ಕಣಕ್ಕಿಳಿದಿರುವ ಭಾರತ ತಂಡ ಇಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ (80) ಮತ್ತು ರಿಷಭ್​ ಪಂತ್​ (56) ರ ಹೋರಾಟದಿಂದ 265 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

3rd-odi
ಶ್ರೇಯಸ್​ ಅಯ್ಯರ್
author img

By

Published : Feb 11, 2022, 6:00 PM IST

ಅಹ್ಮದಾಬಾದ್​: ಸರಣಿ ಕ್ಲೀನ್​ಸ್ವೀಪ್​ ಗುರಿಯೊಂದಿಗೆ ಕಣಕ್ಕಿಳಿದಿರುವ ಭಾರತ ತಂಡ ಇಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ (80) ಮತ್ತು ರಿಷಬ್​ ಪಂತ್​ (56) ರ ಹೋರಾಟದಿಂದ 265 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಭಾರತಕ್ಕೆ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್​ ಶರ್ಮಾ, ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ ಮತ್ತು ಶಿಖರ್ ಧವನ್​ರ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್​ಗಿಳಿದ ಶ್ರೇಯರ್​ ಅಯ್ಯರ್​ ಮತ್ತು ವಿಕೆಟ್​ ಕೀಪರ್​ ರಿಷಬ್​ ಪಂತ್​ ಜವಾಬ್ದಾರಿಯುತ 110 ರನ್​ಗಳ ಜೊತೆಯಾಟವಾಡಿ ತಂಡ ಉತ್ತಮ ರನ್​ ಕಲೆಹಾಕುವಲ್ಲಿ ನೆರವಾದರು.

ಈ ವೇಳೆ ಉತ್ತಮ ಲಯದಲ್ಲಿದ್ದ ರಿಷಬ್​ ಪಂತ್​(56)ಗೆ ಜಾಸನ್​ ಹೋಲ್ಡರ್​ ಪೆವಿಲಿಯನ್​ ದಾರಿ ತೋರಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್​ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ವಾಪಸ್ಸಾದರು.

ದೀಪಕ್​- ಸುಂದರ್​ ಜುಗಲ್​ಬಂದಿ: ಸೂರ್ಯಕುಮಾರ್​ ಔಟಾದ ಬಳಿಕ ಮೈದಾನಕ್ಕಿಳಿದ ವಾಷಿಂಗ್ಟನ್​ ಸುಂದರ್​(33) ಶ್ರೇಯಸ್​ ಅಯ್ಯರ್​ಗೆ ಉತ್ತಮ ಸಾಥ್​ ನೀಡಿದರು. 80 ರನ್ ​ಗಳಿಸಿದ್ದಾಗ ಶ್ರೇಯಸ್​ ಅಯ್ಯರ್​ ಅರೆಕಾಲಿಕ ಬೌಲರ್​ ಡ್ಯಾರನ್​ ಬ್ರಾವೋ ಎಸೆತದಲ್ಲಿ ಔಟಾಗಿ ಶತಕದಿಂದ ವಂಚಿತರಾದರು. ಬಳಿಕ ಬಂದ ಬೌಲರ್​ ದೀಪಕ್​ ಚಹರ್​ ವೆಸ್ಟ್​ ಇಂಡೀಸ್​ ಬೌಲರ್​ಗಳ ಮೇಲೆ ಸವಾರಿ ನಡೆಸಿದರು.

ದೀಪಕ್​ ಚಹರ್​ 38 ಎಸೆತಗಳಲ್ಲಿ 4 ಬೌಂಡರಿ, 2 ಭರ್ಜರಿ ಸಿಕ್ಸರ್​ಗಳನ್ನು ಸಿಡಿಸಿ 38 ರನ್​ಗಳಿದರು. ದೀಪಕ್​ ಚಹರ್​ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶಾಯ್​ ಹೋಪ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಭಾರತ ತಂಡ ದಿಢೀರ್​ ಕುಸಿತಗೊಂಡು ತನ್ನೆಲ್ಲಾ ವಿಕೆಟ್​ ಒಪ್ಪಿಸಿ ವೆಸ್ಟ್​ ಇಂಡೀಸ್​ಗೆ 266 ರನ್​ಗಳ ಗುರಿ ನೀಡಿದೆ. ವೆಸ್ಟ್​ ಇಂಡೀಸ್​ ಪರವಾಗಿ ಜಾಸನ್​ ಹೋಲ್ಡರ್​ 34/4 ವಿಕೆಟ್​ ಪಡೆದರೆ, ಅಲ್ಜಾರ್ರಿ ಜೋಶೆಫ್​ 2, ಹೈಡೆನ್​ ವಾಲ್ಶ್​ 2 ವಿಕೆಟ್​ ಕಿತ್ತರು.

ಮತ್ತೆ ನಿರಾಸೆ ಮೂಡಿಸಿದ ವಿರಾಟ್​ ಕೊಹ್ಲಿ: ನಾಯಕ ರೋಹಿತ್​ ಶರ್ಮಾ ಔಟಾದ ಬಳಿಕ ಕ್ರೀಸ್​ಗಿಳಿದ ವಿರಾಟ್​ ಕೊಹ್ಲಿ ಸೊನ್ನೆಗೆ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದರು. ಎಡಭಾಗದಿಂದ ಹೊರಹೋಗುತ್ತಿದ್ದ ಬಾಲನ್ನು ಕೆಣಕಿದ ಕೊಹ್ಲಿ ವಿಕೆಟ್​ ಕೀಪರ್​ಗೆ ವಿಕೆಟ್​ ಒಪ್ಪಿಸಿದರು.

ಓದಿ: IND vs WI 3rd ODI: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ; ವೈಟ್‌ವಾಷ್​ನಿಂದ ಪಾರಾಗುತ್ತಾ ವಿಂಡೀಸ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.