ETV Bharat / sports

HCAನಿಂದ ತಮ್ಮನ್ನು ವಜಾಗೊಳಿಸಿದ್ದು ಕಾನೂನು ಬಾಹಿರ: ಅಜರುದ್ದೀನ್ ಸಿಡಿಮಿಡಿ - ಅಜರುದ್ದೀನ್ ಅಮಾನತು

ತಮ್ಮನ್ನು ಹೆಚ್​ಸಿಎನಿಂದ ವಜಾಗೊಳಿಸಿರುವುದರ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅಜರುದ್ದೀನ್, ತಮ್ಮ ವಿರುದ್ಧ ಆರೋಪ ಮಾಡಿರುವವರೆಲ್ಲರೂ ಕಳಂಕಿತರು ಎಂದು ಆರೋಪಿಸಿದ್ದಾರೆ.

ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
author img

By

Published : Jun 17, 2021, 4:03 PM IST

ಹೈದರಾಬಾದ್​: ಭಾರತ ತಂಡದ ಮಾಜಿ ನಾಯಕ ಅಜರುದ್ದೀನ್ ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಷನ್​ ತಮ್ಮನ್ನು ಅಮಾನತುಗೊಳಿಸಿರುವುದನ್ನು ಕಾನೂನು ಬಾಹಿರ ಎಂದು ಹೇಳಿದ್ದು, ಕ್ರಿಕೆಟ್ ಅಸೋಸಿಯೇಷನ್​ನಿಂದ ತಮ್ಮನ್ನು ವಜಾ ಮಾಡಲಾಗಿದೆ ಎಂಬ ವರದಿಯಾಗಿರುವುದರಿಂದ ನೈತಿಕತೆ ಆಧಾರದ ಮೇಲೆ ಅಪೆಕ್ಸ್ ಕೌನ್ಸಿಲ್​ನ ಸದಸ್ಯರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಆರೋಪ ಮಾಡಿರುವವರೆಲ್ಲರೂ ಕಳಂಕಿತರು ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಈ ತಿಂಗಳ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅಜರುದ್ದೀನ್​ಗೆ​ ಶೋಕಾಸ್ ನೋಟಿಸ್​ ನೀಡಿತ್ತು. ಇನ್ನು ಹೆಚ್​​ಸಿಎ ಕೂಡ ಅವರ ಸದಸ್ಯತ್ವ ರದ್ದುಗೊಳಿಸಿತ್ತು. ಅಜರ್ ಕಾರ್ಯ ವಿಧಾನ ಸಂಘದ ವಿವಿಧ ನಿಯಮಗಳನ್ನು ಉಲ್ಲಂಘಿಸಿವೆ ಮತ್ತು ಮಂಡಳಿಯ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರಿವೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆದರೆ, ಈ ಆರೋಪಗಳನ್ನಲ್ಲಾ 58 ವರ್ಷದ ಮಾಜಿ ಕ್ರಿಕೆಟಿಗ ತಿರಸ್ಕರಿಸಿದ್ದಾರೆ. ಅಲ್ಲದೇ ನನ್ನ ಅನುಮತಿ ಇಲ್ಲದೇ ಸಂಘದಲ್ಲಿ ಇಂತಹ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. "ನೈತಿಕ ಆಧಾರದ ಮೇಲೆ, ಅವರು ಈ ಎಲ್ಲ ವಿಷಯಗಳಿಗೆ ರಾಜೀನಾಮೆ ನೀಡಬೇಕು. ಅವರು ನನ್ನ ಅನುಮತಿಯಿಲ್ಲದೇ ಮತ್ತು ನಾನಿಲ್ಲದೆ ಸಭೆ ನಡೆಸಲು ಸಾಧ್ಯವಿಲ್ಲ. ಇದು ಕಾನೂನು ಬಾಹಿರ. ಅಲ್ಲದೇ ನಾನು ಸಾಮಾನ್ಯ ಸಂಸ್ಥೆಯಿಂದ(ಚುನಾವಣೆ) ಆಯ್ಕೆಯಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.

ಅಜರ್​ ದುಬೈನ ಖಾಸಗಿ ಕ್ರಿಕೆಟ್​ ಕ್ಲಬ್​ನ(ನಾರ್ದರ್ನ್​ ವಾರಿಯರ್ಸ್​) ಮೆಂಟರ್ ಆಗಿದ್ದಾರೆ. ಈ ಕ್ಲಬ್ ಟಿ10 ಲೀಗ್​ನಲ್ಲಿ ಭಾಗವಹಿಸಿತ್ತು. ಆದರೆ, ಇದು ಬಿಸಿಸಿಐನಿಂದ ಮಾನ್ಯತೆ ಪಡೆದಿಲ್ಲ ಎಂದು ಮಾಜಿ ಕ್ರಿಕೆಟಿಗನ ವಿರುದ್ಧ ಹೆಚ್​ಸಿಎ ಆರೋಪಿಸಿದೆ.

ಇದನ್ನು ಓದಿ:ಹೈದರಾಬಾದ್ ಕ್ರಿಕೆಟ್​ ಅಸೋಸಿಯೇಶನ್‌ ಅಧ್ಯಕ್ಷ ಸ್ಥಾನದಿಂದ ಅಜರುದ್ದೀನ್​ ವಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.