ETV Bharat / sports

ನಮ್ಮಿಂದ ಕೊಹ್ಲಿಯನ್ನು ಹಿಂದಿಕ್ಕುವುದು ಅಸಾಧ್ಯ: ವಾರ್ನರ್ ಹೀಗೆ ಹೇಳಿದ್ಯಾಕೆ?

author img

By

Published : May 23, 2021, 4:28 PM IST

ಸಚಿನ್​ 100 ಮತ್ತು ರಿಕಿ ಪಾಂಟಿಂಗ್ 71 ಶತಕ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ವಾರ್ನರ್​ ಅಭಿಪ್ರಾಯದಂತೆ ಪ್ರಸ್ತುತ ಸಕ್ರಿಯ ಕ್ರಿಕೆಟಿಗರೆಲ್ಲರೂ ಹೆಚ್ಚು ಕಡಿಮೆ ಕೊಹ್ಲಿ ಸಮಕಾಲಿನರೇ ಆಗಿರುವುದರಿಂದ ಯಾರಿಂದಲೂ ಕೊಹ್ಲಿ ಸನಿಹಕ್ಕೂ ಬರಲಾಗುವುದಿಲ್ಲ. ಆದರೆ ಕೊಹ್ಲಿ ಜೊತೆ ಸದಾ ಹೋಲಿಕೆ ಮಾಡಲ್ಪಡುವ ಪಾಕಿಸ್ತಾನದ ಬಾಬರ್ ಅಜಮ್ 19 ಶತಕ ಸಿಡಿಸಿದ್ದಾರೆ.

ಡೇವಿಡ್ ವಾರ್ನರ್​- ವಿರಾಟ್ ಕೊಹ್ಲಿ
ಡೇವಿಡ್ ವಾರ್ನರ್​- ವಿರಾಟ್ ಕೊಹ್ಲಿ

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಶತಕ ಸಿಡಿಸಿ 2 ವರ್ಷಗಳೇ ಉರುಳಿವೆ. ಆದರೂ ಪ್ರಸ್ತುತ ಸಕ್ರಿಯ ಕ್ರಿಕೆಟಿಗರಿಗಿಂತ 20ಕ್ಕೂ ಹೆಚ್ಚು ಶತಕಗಳ ಮುಂದಿದ್ದಾರೆ. ಈ ವಿಷಯವನ್ನು ಹಂಚಿಕೊಂಡಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್​, ಖಂಡಿತಾ ನಮ್ಮಿಂದ ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ​ ಪ್ರಸ್ತುತ ಸಕ್ರಿಯ ಕ್ರಿಕೆಟಿಗರ ಶತಕಗಳ ಪಟ್ಟಿಯನ್ನು ಹಂಚಿಕೊಂಡಿರುವ ವಾರ್ನರ್,​ "ನಾವು ವಿರಾಟ್​ ಕೊಹ್ಲಿಯನ್ನು ತಲುಪುವುದು ಅಸಾಧ್ಯ ಎಂದು ಹೇಳುವುದು ನ್ಯಾಯೋಚಿತವಾಗಿದೆ" ಎಂದು ಬರೆದುಕೊಡಿದ್ದಾರೆ.

ವಾರ್ನರ್​ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಿರಾಟ್​ ಕೊಹ್ಲಿ ಮೂರು ಸ್ವರೂಪದ ಕ್ರಿಕೆಟ್​ನಲ್ಲಿ ಒಟ್ಟು 70 ಶತಕ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವ ವಾರ್ನರ್​ 43, ವಿಂಡೀಸ್ ದೈತ್ಯ ಕ್ರಿಸ್ ಗೇಲ್ 42, ರೋಹಿತ್ ಶರ್ಮಾ 40, ರಾಸ್ ಟೇಲರ್​ 40, ಸ್ಟೀವ್ ಸ್ಮಿತ್ 38, ಕೇನ್ ವಿಲಿಯಮ್ಸನ್​ 37, ಜೋ ರೂಟ್​ 36, ಶಿಖರ್ ಧವನ್​ 24 ಮತ್ತು ಡುಪ್ಲೆಸಿಸ್​ 23 ಶತಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಸಚಿನ್​ 100 ಮತ್ತು ರಿಕಿ ಪಾಂಟಿಂಗ್ 71 ಶತಕ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ವಾರ್ನರ್​ ಅಭಿಪ್ರಾಯದಂತೆ ಪ್ರಸ್ತುತ ಸಕ್ರಿಯ ಕ್ರಿಕೆಟಿಗರೆಲ್ಲರೂ ಹೆಚ್ಚು ಕಡಿಮೆ ಕೊಹ್ಲಿ ಸಮಕಾಲಿನರೇ ಆಗಿರುವುದರಿಂದ ಯಾರಿಂದಲೂ ಕೊಹ್ಲಿ ಸನಿಹಕ್ಕೂ ಬರಲಾಗುವುದಿಲ್ಲ. ಆದರೆ ಕೊಹ್ಲಿ ಜೊತೆ ಸದಾ ಹೋಲಿಕೆ ಮಾಡಲ್ಪಡುವ ಪಾಕಿಸ್ತಾನದ ಬಾಬರ್ ಅಜಮ್ 19 ಶತಕ ಸಿಡಿಸಿದ್ದಾರೆ.

ಇದನ್ನು ಓದಿ:2028ರ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಸೇರಿಸುವ ಪ್ರಸ್ತಾಪಕ್ಕೆ ಐಸಿಸಿ ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.