ETV Bharat / sports

ಪ್ರತಿಯೊಬ್ಬರೂ ತಂಡಕ್ಕೆ ಕೊಡುಗೆ ನೀಡಿ ಎಬಿಡಿ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದಾರೆ: ಮ್ಯಾಕ್ಸ್​ವೆಲ್ - ಶ್ರೀಕಾರ್ ಭರತ್​

ತಂಡದಲ್ಲಿ ಗೆಲುವಿಗಾಗಿ ಒಬ್ಬ ಆಟಗಾರರನನ್ನು ಅವಲಂಭಿಸದೆ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಹುಡುಗರ ಗುಂಪನ್ನು ಹೊಂದಿರುವುದು ತುಂಬಾ ಉತ್ತಮವಾಗಿದೆ. ಅಲ್ಲದೆ ಅವರೆಲ್ಲರೂ ತಂಡದ ಯಶಸ್ಸಿಗಾಗಿ ತಮ್ಮ ಕೈಲಾದ ಅಳಿಲು ಸೇವೆ ನೀಡುತ್ತಿದ್ದಾರೆ ಎಂದು ಮ್ಯಾಕ್ಸ್​ವೆಲ್ ಕೊಂಡಾಡಿದ್ದಾರೆ.​

Glenn Maxwell
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By

Published : Sep 30, 2021, 8:18 PM IST

ದುಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿರುವ ಬೇರೆ ಬೇರೆ ಆಟಗಾರರು ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ತಂಡ ಎಬಿಡಿ ವಿಲಿಯರ್ಸ್​ ಅವರಂತಹ ಆಟಗಾರರನ್ನು ಹೆಚ್ಚು ಅವಲಂಬಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಸ್ಫೋಟಕ ಬ್ಯಾಟರ್​ ಗ್ಲೆನ್ ಮ್ಯಾಕ್ಸ್​ವೆಲ್ ಹೇಳಿದ್ದಾರೆ.

ಆರ್​ಸಿಬಿ ಮೊದಲ ಹಂತದ ಐಪಿಎಲ್​​ನಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿತ್ತು. ಆದರೆ ಯುಎಇಯಲ್ಲಿ ಲೀಗ್ ಪುನಾರಂಭಗೊಂಡ ನಂತರ ಸತತ 2 ಪಂದ್ಯಗಳಲ್ಲಿ ಸೋಲುಕಂಡು ನಿರಾಸೆ ಅನುಭವಿಸಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

"ಗೆಲುವಿಗಾಗಿ ಒಬ್ಬ ಆಟಗಾರರನನ್ನು ಅವಲಂಭಿಸದೆ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಹುಡುಗರ ಗುಂಪನ್ನು ಹೊಂದಿರುವುದು ತುಂಬಾ ಉತ್ತಮವಾಗಿದೆ. ಅಲ್ಲದೆ ಅವರೆಲ್ಲರೂ ತಂಡದ ಯಶಸ್ಸಿಗಾಗಿ ತಮ್ಮ ಕೈಲಾದ ಅಳಿಲು ಸೇವೆಯನ್ನು ನೀಡುತ್ತಿದ್ದಾರೆ. ಇದೊಂದು ಆನಂದಿಸುವ ಗುಂಪು" ಎಂದು ತಮ್ಮ ತಂಡವನ್ನು ಮ್ಯಾಕ್ಸ್​ವೆಲ್ ಕೊಂಡಾಡಿದ್ದಾರೆ.​

ಎರಡನೇ ಹಂತದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಪದಾರ್ಪಣೆ ಮಾಡಿದ ವಿಕೆಟ್​ ಕೀಪರ್ ಬ್ಯಾಟರ್​ ಶ್ರೀಕಾರ್​ ಭರತ್​ ಮೊದಲ ಪಂದ್ಯದಲ್ಲಿ ವಿಫಲರಾದರೂ ಮುಂಬೈ ವಿರುದ್ಧ 32 ಮತ್ತು ರಾಜಸ್ಥಾನ್ ರಾಯಲ್ಸ್​ ವಿರುದ್ಧ 35 ಎಸೆತಗಳಲ್ಲಿ 44 ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭರತ್​ ಕುರಿತು ಮಾತನಾಡಿರುವ ಮ್ಯಾಕ್ಸಿ, "ಆತ(ಭರತ್​) ನಿಜವಾಗಿಯೂ ಟಾಪ್​ ಕ್ಲಾಸ್ ಬ್ಯಾಟರ್​ ಮತ್ತು ಅವರು ತಮ್ಮ ಇನ್ನಿಂಗ್ಸ್​ ಕಟ್ಟುವ ರೀತಿ ಅಮೋಘವಾಗಿರುತ್ತದೆ" ಎಂದು ನಿನ್ನೆಯ ಪಂದ್ಯದ ನಂತರ ಹೇಳಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 149 ರನ್​ಗಳಿಸಿತ್ತು. ಆರ್​ಸಿಬಿ ಮ್ಯಾಕ್ಸ್​ವೆಲ್ (50) ಮತ್ತು ಭರತ್​(44) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 17.1 ಓವರ್​ಗಳಲ್ಲಿ ತಲುಪಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಕೋಚ್​​ ರಾಹುಲ್​, ಮೆಂಟರ್​ ಧೋನಿ: ಈ ತಂತ್ರ ವರ್ಕೌಟ್​ ಆಗಲಿದೆ ಎಂದ ಎಂಎಸ್​ಕೆ ಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.