ತರೌಬಾ (ವೆಸ್ಟ್ ಇಂಡೀಸ್): ಭಾರತದ ಯುವ ಬ್ಯಾಟ್ಸ್‌ಮನ್‌ಗಳಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ತಮ್ಮ ಜೀವಿತಾವಧಿಯ ಒಂದು ಕ್ಷಣವನ್ನು 'ಪ್ರಿನ್ಸ್ ಆಫ್ ಟ್ರಿನಿಡಾಡ್' ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಅವರೊಂದಿಗೆ ಕಳೆದಿದ್ದಾರೆ. ಗಿಲ್ ಮತ್ತು ಕಿಶನ್ ಲಾರಾ ಅವರೊಂದಿಗೆ ಕೆಲ ನೆನಪುಗಳನ್ನು ಹಂಚಿಕೊಂಡಿದ್ದಾರೆ. ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ ಬ್ರಿಯಾನ್ ಲಾರಾ ಅವರ ಹೆಸರಿನ ಕ್ರೀಡಾಂಗಣದಲ್ಲಿ ನಡೆಯಿತು. ಇಲ್ಲಿ ಇಬ್ಬರು ಯುವ ಬ್ಯಾಟರ್ಗಳು ಅರ್ಧಶತಕದ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು.
ಮುಕೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಪ್ರಭಾವಿ ಬೌಲಿಂಗ್ಗೆ ಭಾರತದ ಬ್ಯಾಟರ್ಗಳು ನೀಡಿದ್ದ 351 ರನ್ ಗುರಿಯನ್ನು ಬೆನ್ನತ್ತಿದ್ದ ವಿಂಡೀಸ್ ಪಡೆ 151ಕ್ಕೆ ಸರ್ವಪತನ ಕಂಡಿತು. ಇದರಿಂದ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ 200 ರನ್ನ ಬೃಹತ್ ಅಂತರದ ದಾಖಲೆಯ ಗೆಲುವನ್ನು ಬರೆಯಿತು. ಇದರಿಂದ ಟೀಮ್ ಇಂಡಿಯಾ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತು.
-
Fanboying over Brian Lara ft. @ShubmanGill & @ishankishan51 😃👌
— BCCI (@BCCI) August 2, 2023 " class="align-text-top noRightClick twitterSection" data="
WATCH the full conversation here 🎥🔽https://t.co/xWbvEz9kjU #WIvIND pic.twitter.com/PwRG4bEOb0
">Fanboying over Brian Lara ft. @ShubmanGill & @ishankishan51 😃👌
— BCCI (@BCCI) August 2, 2023
WATCH the full conversation here 🎥🔽https://t.co/xWbvEz9kjU #WIvIND pic.twitter.com/PwRG4bEOb0Fanboying over Brian Lara ft. @ShubmanGill & @ishankishan51 😃👌
— BCCI (@BCCI) August 2, 2023
WATCH the full conversation here 🎥🔽https://t.co/xWbvEz9kjU #WIvIND pic.twitter.com/PwRG4bEOb0
ಲಾರಾ ಕಿಶನ್ಗೆ ನಿಮ್ಮ ಮನಸ್ಸಿನಲ್ಲಿ ಇನ್ನೂ ದ್ವಿಶತಕ ಮಾಡುವ ಇಂಗಿತ ಇದೆಯೇ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಕಿಶನ್ "ನನ್ನ ಮನಸ್ಸಿನಲ್ಲಿ ದ್ವಿಶತಕ ಮಾಡುವ ಆಸೆ ಇದೆ, ಆದರೆ ಮುಂದಿನ ಪಂದ್ಯಗಳಲ್ಲಿ ನಾನು ಅದನ್ನು ನೋಡಿಕೊಳ್ಳುತ್ತೇನೆ." ಎಂದಿದ್ದಾರೆ.
ಬೌಲರ್‌ಗಳ ಮೇಲೆ ಲಾರಾ ಅವರ ಪ್ರಾಬಲ್ಯವು ಮಗುವಾಗಿದ್ದಾಗ ಅವರಿಗೆ ಸಾಕಷ್ಟು ಸ್ಫೂರ್ತಿ ನೀಡಿತು ಎಂದು ಗಿಲ್ ಹೇಳಿದರು. "ಅವರ ಬಗ್ಗೆ ನನ್ನ ಅಚ್ಚುಮೆಚ್ಚಿನ ನೆನಪುಗಳು ಬಾಲ್ಯದಲ್ಲಿ ಅವರ ಆಟವನ್ನು ನೋಡಿದ್ದಾಗಿದೆ. ನಾನು ಅವರು ಕೆಂಪು ಬಾಲ್ನಲ್ಲಿ ಎದುರಾಳಿ ಬೌಲರ್ಗಳನನ್ಉ ದಂಡಿಸುವುದನ್ನು ನೋಡಿದಾಗಲೆಲ್ಲಾ ಹೆಚ್ಚು ಸ್ಫೂರ್ತಿ ಪಡೆದಿದ್ದೇನೆ. ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಯಲು ನೀವು (ಲಾರಾ) ಕೂಡಾ ಕಾರಣ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಹೇಗೆ ಪ್ರಾಬಲ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ" ಎಂದು ಗಿಲ್ ಕೇಳಿದ್ದಾರೆ.
-
All ears when the 𝗣𝗿𝗶𝗻𝗰𝗲 𝗼𝗳 𝗧𝗿𝗶𝗻𝗶𝗱𝗮𝗱 speaks 🗣️
— BCCI (@BCCI) August 2, 2023 " class="align-text-top noRightClick twitterSection" data="
𝘿𝙊 𝙉𝙊𝙏 𝙈𝙄𝙎𝙎 - @BrianLara in conversation with @ShubmanGill & @ishankishan51 at the Brian Lara Stadium, Trinidad👌👌 - By @ameyatilak
Full Conversation - https://t.co/xWbvEz9kjU #WIvIND pic.twitter.com/AOLgonqyGE
">All ears when the 𝗣𝗿𝗶𝗻𝗰𝗲 𝗼𝗳 𝗧𝗿𝗶𝗻𝗶𝗱𝗮𝗱 speaks 🗣️
— BCCI (@BCCI) August 2, 2023
𝘿𝙊 𝙉𝙊𝙏 𝙈𝙄𝙎𝙎 - @BrianLara in conversation with @ShubmanGill & @ishankishan51 at the Brian Lara Stadium, Trinidad👌👌 - By @ameyatilak
Full Conversation - https://t.co/xWbvEz9kjU #WIvIND pic.twitter.com/AOLgonqyGEAll ears when the 𝗣𝗿𝗶𝗻𝗰𝗲 𝗼𝗳 𝗧𝗿𝗶𝗻𝗶𝗱𝗮𝗱 speaks 🗣️
— BCCI (@BCCI) August 2, 2023
𝘿𝙊 𝙉𝙊𝙏 𝙈𝙄𝙎𝙎 - @BrianLara in conversation with @ShubmanGill & @ishankishan51 at the Brian Lara Stadium, Trinidad👌👌 - By @ameyatilak
Full Conversation - https://t.co/xWbvEz9kjU #WIvIND pic.twitter.com/AOLgonqyGE
ಲಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಮಾಡಿದ್ದರ ಬಗ್ಗೆ ಕಿಶನ್ ನೆನಪಿಸಿಕೊಂಡಿದ್ದಾರೆ. "ನನಗೆ ಅತ್ಯಂತ ಮುಖ್ಯವಾಗಿ ನೆನಪಾಗುವ ಕಥೆ ಎಂದರೆ ನೀವು ಯಾವಾಗಲೂ ಊಟದ ತನಕ ಬ್ಯಾಟಿಂಗ್ ಮಾಡುತ್ತಿದ್ದೀರಿ ಮತ್ತು ನೀವು ಪಿಚ್‌ನಲ್ಲಿದ್ದರೆ, ನೀವು ಅಭ್ಯಾಸ ಮಾಡುತ್ತಿದ್ದೀರಿ ಮತ್ತು ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಹಿಂತಿರುಗುತ್ತೀರಿ. ಅದು ನಿಮ್ಮಿಂದ ಈ ದೀರ್ಘ ಸಮಯದ ಬ್ಯಾಟಿಂಗ್ ಬಗ್ಗೆ ಕಲಿಯಬೇಕಾಗಿದೆ. ನೀವು ನನಗೆ Instagram ನಲ್ಲಿ ಸಂದೇಶ ಕಳುಹಿಸಿದ್ದೀರಿ. ಕ್ರಿಕೆಟ್ನ ದಂತಕಥೆಯಾದ ನೀವು (ಲಾರಾ) ನನಗೆ ಹೇಗೆ ಸಂದೇಶ ಕಳುಹಿಸಲು ಸಾಧ್ಯ ಎಂದುಕೊಂಡು ನಾನು ಅಚ್ಚರಿಗೊಳಗಾಗಿದ್ದೇನೆ. ನಾನು ಇಲ್ಲಿ ಪ್ರದರ್ಶನ ನೀಡುವುದು ನಿಜವಾಗಿಯೂ ವಿಶೇಷವಾಗಿತ್ತು. ನಾನು ನಿಮ್ಮ ಇನ್ನಿಂಗ್ಸ್ಗಳ ಹೈಲೈಟ್‌ಗಳನ್ನು ನೋಡಿದ್ದೇನೆ" ಎಂದು ಕಿಶನ್ ಹೇಳಿದ್ದಾರೆ.
-
📍 Trinidad 🇹🇹
— BCCI (@BCCI) August 2, 2023 " class="align-text-top noRightClick twitterSection" data="
'The Prince' Brian Charles Lara in conversation with Shubman Gill & Ishan Kishan 🙌
Coming 🔜 on https://t.co/Z3MPyeKtDz
Stay Tuned! ⌛️#TeamIndia | #WIvIND pic.twitter.com/eCsSRI1WeI
">📍 Trinidad 🇹🇹
— BCCI (@BCCI) August 2, 2023
'The Prince' Brian Charles Lara in conversation with Shubman Gill & Ishan Kishan 🙌
Coming 🔜 on https://t.co/Z3MPyeKtDz
Stay Tuned! ⌛️#TeamIndia | #WIvIND pic.twitter.com/eCsSRI1WeI📍 Trinidad 🇹🇹
— BCCI (@BCCI) August 2, 2023
'The Prince' Brian Charles Lara in conversation with Shubman Gill & Ishan Kishan 🙌
Coming 🔜 on https://t.co/Z3MPyeKtDz
Stay Tuned! ⌛️#TeamIndia | #WIvIND pic.twitter.com/eCsSRI1WeI
ಭಾರತ ನನಗೆ ಎರಡನೇ ತವರು ನೆಲ ಇದ್ದಂತೆ ಎಂದು ಲಾರಾ ಹೇಳಿದ್ದಾರೆ. "ಭಾರತ ನನಗೆ ಎರಡನೇ ಮನೆಯಂತಿದೆ. ನಾನು ತಂಡದಿಂದ ಯುವ, ಭರವಸೆಯ ಪ್ರತಿಭೆಗಳನ್ನು ನೋಡುತ್ತಿದ್ದೇನೆ, ಭಾರತದಲ್ಲಿ ಕ್ರಿಕೆಟ್ ಉತ್ತಮವಾಗಿ ಬೆಳೆಯುತ್ತಿದೆ. ಎರಡು, ಮೂರರಿಂದ ಹನ್ನೊಂದರವರೆಗೆ ಉತ್ತಮ ಆಟಗಾರರನ್ನು ನಾವು ಕಾಣಬಹುದು" ಎಂದು ಲಾರಾ ಹೇಳಿದ್ದಾರೆ.