ಡಬ್ಲಿನ್: ಬಲಿಷ್ಠ ಬೌಲಿಂಗ್ ದಾಳಿಯನ್ನು ಹೊಂದಿರುವ ದಕ್ಷಿಣ ಅಫ್ರಿಕಾ ತಂಡ ಐರ್ಲೆಂಡ್ ವಿರುದ್ಧ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಈ ಗೆಲುವಿನೊಂದಿಗೆ ಕ್ರಿಕೆಟ್ ಶಿಶು ಐರ್ಲೆಂಡ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹರಿಣಗಳ ವಿರುದ್ಧ ಚೊಚ್ಚಲ ಗೆಲುವು ದಾಖಲು ಮಾಡಿದೆ. ಜತೆಗೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
-
Ireland win the 2nd ODI in Malahide 👏
— ICC (@ICC) July 13, 2021 " class="align-text-top noRightClick twitterSection" data="
Andy Balbirnie earns the player of the match award after his seventh ODI century, setting up the hosts first-ever victory over South Africa.
📸: @cricketireland#IREvSA | https://t.co/tfI7lliJ6g pic.twitter.com/FROUipHwU1
">Ireland win the 2nd ODI in Malahide 👏
— ICC (@ICC) July 13, 2021
Andy Balbirnie earns the player of the match award after his seventh ODI century, setting up the hosts first-ever victory over South Africa.
📸: @cricketireland#IREvSA | https://t.co/tfI7lliJ6g pic.twitter.com/FROUipHwU1Ireland win the 2nd ODI in Malahide 👏
— ICC (@ICC) July 13, 2021
Andy Balbirnie earns the player of the match award after his seventh ODI century, setting up the hosts first-ever victory over South Africa.
📸: @cricketireland#IREvSA | https://t.co/tfI7lliJ6g pic.twitter.com/FROUipHwU1
ಡಬ್ಲಿನ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ಐರ್ಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 290 ರನ್ಗಳಿಸಿತ್ತು. ನಾಯಕ ಆ್ಯಂಡಿ ಬಾಲ್ಬಿರ್ನಿ 177 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 102 ರನ್ಗಳಿಸಿದರೆ, ಆ್ಯಂಡಿ ಮೆಕ್‌ಬ್ರೈನ್ 30, ಹ್ಯಾರಿ ಟೆಕ್ಟರ್ 68 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕರ್ಸ್ಗಳ ಸಹಿತ 79 , ಡಾಕ್ರೆಲ್ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 45 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾಗಿದ್ದರು.
ದಕ್ಷಿಣ ಆಫ್ರಿಕಾ ಪರ ಪೆಹ್ಲುಕ್ವಾಯೋ 73ಕ್ಕೆ 2, ರಬಾಡ 58ಕ್ಕೆ1, ಕೇಶವ್ ಮಹಾರಾಜ್ 50ಕ್ಕೆ1, ಶಂಸಿ 42ಕ್ಕೆ 1 ವಿಕೆಟ್ ಪಡೆದಿದ್ದರು.
291 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಪ್ರವಾಸಿ ದ.ಆಫ್ರಿಕಾ ತಂಡ 48.3 ಓವರ್ಗಳಲ್ಲಿ 247ರನ್ಗಳಿಕೆ ಮಾಡಿ ಆಲೌಟ್ ಆಗುವ ಮೂಲಕ 43 ರನ್ಗಳ ಸೋಲು ಕಂಡಿತು. ಆರಂಭಿಕ ಬ್ಯಾಟ್ಸ್ಮನ್ ಜನ್ನೆಮನ್ ಮಲನ್ 96 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 84 ರನ್ಗಳಿಸಿದರೆ, ವಾನ್ ಡರ್ ಡಾಸೆನ್ 49 ರನ್ಗಳಿಸಿ ಐರ್ಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆದರೆ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಇವರಿಬ್ಬರ ವಿಕೆಟ್ ಪತನದ ನಂತರ ನಿರಂತರ ವಿಕೆಟ್ ಕಳೆದುಕೊಂಡಿತು. ನಾಯಕ ಬವುಮ 10, ಮಾರ್ಕ್ರಮ್ 5, ವೀರಯಾನ್ನೆ 13, ಕೈಲ್ ವೆರೆನ್ನೆ 13 , ಮಿಲ್ಲರ್ 24, ಪೆಹ್ಲುಕ್ವಾಯೋ 2, ಕೇಶವ್ ಮಹಾರಾಜ್ 17, ರಬಾಡ 16 ಎನ್ರಿಚ್ ನೋಕಿಯಾ 10 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿರಿ: ಮಹಿಳಾ ವೈದ್ಯೆ ಹಣೆಗೆ ಕುಂಕುಮ ಹಚ್ಚಿದ ಕಾಂಪೌಂಡರ್... ನೌಕರಿಯಿಂದ ವಜಾ ಮಾಡಿದ್ದಕ್ಕೆ ಸೇಡು!
ಐರ್ಲೆಂಡ್ ಪರ ಮಾರ್ಕ್ ಆದೀರ್,ಜೋಶುವಾ ಲಿಟಲ್, ಆಂಡಿ ಮೆಕ್‌ಬ್ರೈನ್ ತಲಾ 2 ವಿಕೆಟ್ ಪಡೆದುಕೊಂಡರೆ, ಜಾರ್ಜ್, ಸಿಮಿ ಸಿಂಗ್ ಹಾಗೂ ಯುಂಗ್ ತಲಾ 1 ವಿಕೆಟ್ ಪಡೆದುಕೊಂಡರು. ಮೊದಲ ಏಕದಿನ ಪಂದ್ಯ ಮಳೆಯ ಕಾರಣ ರದ್ಧುಗೊಂಡಿತ್ತು.