ETV Bharat / sports

IND vs IRE 3rd T20: ಅವಕಾಶದ ನಿರೀಕ್ಷೆಯಲ್ಲಿ ಜಿತೇಶ್​, ಮುಖೇಶ್, ಅವೇಶ್​​... ಜಸ್ಪ್ರೀತ್​ ಪಡೆಗೆ ಕ್ಲೀನ್​ ಸ್ವೀಪ್​ ಗುರಿ ​​

author img

By ETV Bharat Karnataka Team

Published : Aug 23, 2023, 1:01 PM IST

Ireland vs India 3rd T20: ಐರ್ಲೆಂಡ್​ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ 2-0 ಯಿಂದ ಗೆದ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಐರ್ಲೆಂಡ್​ ಅನ್ನು ಬುಮ್ರಾ ಪಡೆ ಮಣಿಸಿದರೆ ಕ್ಲೀನ್​ ಸ್ವೀಪ್​ ಸಾಧನೆ ಮಾಡಿದಂತಾಗುತ್ತದೆ.

IND vs IRE 3rd T20
IND vs IRE 3rd T20

ಡಬ್ಲಿನ್​(ಐರ್ಲೆಂಡ್​): ಭಾರತದ ಯುವ ಪಡೆಯ ಸಂಘಟಿತ ಆಟ, ಜಸ್ಪ್ರೀತ್​ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರ ಭರ್ಜರಿ ಕಮ್​ಬ್ಯಾಕ್​ನ ಫಲದಿಂದ ಭಾರತ ತಂಡ ಐರ್ಲೆಂಡ್​ ವಿರುದ್ಧದ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಸರಣಿಯ ಕೊನೆಯ ಟಿ20 ಪಂದ್ಯ ಇಂದು ನಡೆಯಲಿದ್ದು, ಇದನ್ನು ಭಾರತ ಜಯಿಸಿದಲ್ಲಿ ಬುಮ್ರಾ ನಾಯಕತ್ವದಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಸಾಧನೆ ಆಗಲಿದೆ.

ಭಾರತ ತಂಡ ಸಿರೀಸ್​ ಜಯ ಸಾಧಿಸಿರುವುದರಿಂದ ತಂಡದಲ್ಲಿ ಕೆಲ ಬದಲಾವಣೆಗೆ ಆಗುವ ನಿರೀಕ್ಷೆ ಇದೆ. ವಿಕೆಟ್​ ಕೀಪರ್​ ಜಿತೇಶ್​ ಶರ್ಮಾ ಪದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ ಶಹಬಾಜ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಆಲ್​ರೌಂಡ್​ ಪ್ರದರ್ಶನಕ್ಕೆ ಸಿದ್ಧರಿದ್ದಾರೆ. ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ ಮುಖೇಶ್​ ಕುಮಾರ್​ಗೆ ಅರ್ಷದೀಪ್​ ಬದಲಿ ಕೊನೆಯ ಟಿ20ಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಸಂಜುಗೆ ಅವಕಾಶ ಸಿಗುತ್ತದೆಯೇ?: ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಬ್ಯಾಟಿಂಗ್​ಗೆ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಎರಡನೇ ಪಂದ್ಯ ಸ್ಯಾಮ್ಸನ್​ ಸಿಕ್ಕ 40 ರನ್​ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಏಷ್ಯಾಕಪ್​ಗೆ ಸ್ಯಾಡ್​ ಬೈ ಆಗಿ ಸಂಜು ಆಯ್ಕೆ ಆಗಿರುವ ಕಾರಣ ಈ ಪಂದ್ಯದಲ್ಲಿ ಅವರನ್ನು ಮುಂದುವರೆಸುವ ಸಾಧ್ಯತೆ ಹೆಚ್ಚಿದೆ. ಜಿತೇಶ್​ ಶರ್ಮಾ ಅವರನ್ನು ಶಿವಂ ದುಬೆ ಬದಲಾಗಿ ಮೈದಾನಕ್ಕೆ ತರುವ ಲೆಕ್ಕಾಚಾರ ಇದೆ. ಆದರೆ, ಕೀಪಿಂಗ್​ ಗ್ಲೌಸ್​​​ ತೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಶಹಬಾಜ್ ಅಹ್ಮದ್ ಕೂಡಾ ಪದಾರ್ಪಣೆಗೆ ಕಾಯುತ್ತಿದ್ದಾರೆ. ಅವೇಶ್​ ಖಾನ್​ ಕೂಡಾ ಈ ಪಂದ್ಯದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ರನ್​ ಗಳಿಸುತ್ತಿಲ್ಲ ತಿಲಕ್​ ವರ್ಮಾ: ವೆಸ್ಟ್ ಇಂಡೀಸ್​ ಪ್ರವಾಸದಲ್ಲಿ ಟಿ-20 ತಂಡಕ್ಕೆ ಪದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ನೀಡಿ ಏಷ್ಯಾಕಪ್​ನ ಏಕದಿನ ತಂಡಕ್ಕೆ ಸ್ಥಾನ ಗಿಟ್ಟಿಸಿಕೊಂಡಿರುವ ತಿಲಕ್​ ವರ್ಮಾ ಐರ್ಲೆಂಡ್​ ವಿರುದ್ಧ ಮಂಕಾಗಿದ್ದಾರೆ. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್​ ಕೊಟ್ಟರೆ, ಎರಡನೇ ಪಂದ್ಯದಲ್ಲಿ 1 ರನ್​ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಭರ್ಜರಿ ಬ್ಯಾಟಿಂಗ್​ ಮಾಡಿ ಏಷ್ಯಾಕಪ್​ನಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳ ಬೇಕಿದೆ.

ಪುಟಿದೇಳಬೇಕಿದೆ ಐರ್ಲೆಂಡ್​: ಐರ್ಲೆಂಡ್​ ತಂಡ ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳಲು ಇಂದು ಸಕಲ ಪ್ರಯತ್ನಗಳನ್ನು ಮಾಡಬೇಕಿದೆ. ಅನುಭವಿ ಬ್ಯಾಟರ್​ಗಳಾದ ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್, ಆಂಡ್ರ್ಯೂ ಬಾಲ್ಬಿರ್ನಿ ತಂಡದಲ್ಲಿದ್ದು, ಇವರಿಂದ ಈ ವರೆಗೆ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಬೌಲಿಂಗ್​ ಮತ್ತು ಬ್ಯಾಟಿಂಗ್​​ನಲ್ಲಿ ಐರ್ಲೆಂಡ್​ ಸಂಘಟಿತ ಪ್ರದರ್ಶನ ನೀಡಿದಲ್ಲಿ ಕ್ಲೀನ್​ ಸ್ವೀಪ್​ನಿಂದ ತಪ್ಪಿಕೊಳ್ಳಬಹುದು.

ಮಳೆಯ ಮುನ್ಸೂಚನೆ: ಐರ್ಲೆಂಡ್​ನ ಡಬ್ಲಿನ್​ನಲ್ಲಿ ಮಳೆಯ ಮುನ್ಸೂಚೆನೆ ಇದೆ. ಕಳೆದ ಪಂದ್ಯ ನಡೆದ ಪಿಚ್​ನಲ್ಲೇ ಪಂದ್ಯ ಆಗಿರುವುದರಿಂದ ರನ್​ನ ಹೊಳೆ ಹರಿಯಲಿದೆ. ಮಳೆ ಕಾಡುವ ಭಯ ಇರುವುದರಿಂದ ಟಾಸ್​ ಗೆದ್ದ ನಾಯಕ ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮಳೆ ಬಂದಲ್ಲಿ ರನ್​ ರೇಟ್​ ಆಧಾರದಲ್ಲಿ ಸ್ಕೋರ್​ ಮಾಡಬಹುದಾಗಿದೆ.

ಸಂಭಾವ್ಯ ತಂಡಗಳು.. ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಜಿತೇಶ್ ಶರ್ಮಾ/ ಶಿವಂ ದುಬೆ, ಶಹಬಾಜ್ ಅಹ್ಮದ್ / ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್/ಮುಖೇಶ್ ಕುಮಾರ್

ಐರ್ಲೆಂಡ್​: ರಾಸ್ ಅಡೈರ್, ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಥಿಯೋ ವ್ಯಾನ್ ವೋರ್ಕಾಮ್, ಬೆಂಜಮಿನ್ ವೈಟ್

ಭಾರತ ಮತ್ತು ಐರ್ಲೆಂಡ್​ ನಡುವಿನ 3ನೇ ಟಿ20 ಪಂದ್ಯ ಡಬ್ಲಿನ್​ನ ದ ವಿಲೆಜ್​ ಸ್ಟೇಡಿಯಂ​ನಲ್ಲಿ ಇಂದು ಸಂಜೆ 7:30ಕ್ಕೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್​ 18 ನಲ್ಲಿ ನೇರ ಪ್ರಸಾರ ಲಭ್ಯ.

ಇದನ್ನೂ ಓದಿ: ಮಹಾರಾಜ ಟ್ರೋಫಿ: ಗೆಲುವಿನ ಲಯಕ್ಕೆ ಮರಳಿದ ಲಯನ್ಸ್, ಮೈಸೂರು ವಿರುದ್ಧ ಶಿವಮೊಗ್ಗಕ್ಕೆ ಭರ್ಜರಿ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.