ಲಂಡನ್: ಸೆಪ್ಟೆಂಬರ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯಾರ್ಧವನ್ನು ನಡೆಸಲು ಬಿಸಿಸಿಐ ಚಿಂತಿಸುತ್ತಿದೆ. ಆದರೆ, ಅದು ಇಂಗ್ಲೆಂಡ್ನಲ್ಲಿ ನಡೆದರೆ ಶ್ರೀಮಂತ ಲೀಗ್ನ ಬ್ರಾಂಡ್ ಮೌಲ್ಯ ಸಮಸ್ಯಗೀಡಾಗಲಿದೆ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಟಿ ಪನೇಸರ್ ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್ನಲ್ಲಿ ಮಳೆ ಹೆಚ್ಚಿರುವುದರಿಂದ ಐಪಿಎಲ್ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಪನೇಸರ್ ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದಾರೆ.
" ಸೆಪ್ಟೆಂಬರ್ನಲ್ಲಿ ಐಪಿಎಲ್ನ ಎರಡನೇ ಭಾಗ ಇಂಗ್ಲೆಂಡ್ನಲ್ಲಿ ನಡೆಯಬಾರದು. ಏಕೆಂದರೆ ಆ ಸಮಯದಲ್ಲಿ ಇಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಇದರಿಂದ ಪಂದ್ಯಕ್ಕೆ ಸಾಕಷ್ಟು ಅಡಚಣೆ ಉಂಟಾಗಿ ಆಟದ ಮೇಲಿನ ಆಸಕ್ತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಭಾರತದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಾರದಿದ್ದರೆ, ಇದು ಯುಎಇಯಲ್ಲಿ ಆಯೋಜನೆಯಾಗಬೇಕು. ಏಕೆಂದರೆ ಕ್ರಿಕೆಟ್ ಆಡುವುದಕ್ಕೆ ಹವಾಮಾನದ ಪರಿಸ್ಥಿತಿ ಕೂಡ ಪ್ರಮುಖ ಪಾತ್ರವಹಿಸುತ್ತದೆ ಎಂದು ಪನೇಸರ್ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಮಳೆಯಿಂದ ಪಂದ್ಯ ಸ್ಥಗಿತಗೊಳ್ಳುತ್ತದೆ. ಆಗ ಪಂದ್ಯವನ್ನು 15 ಅಥವಾ 10 ಓವರ್ಗಳಿಗೆ ಇಳಿಸಬೇಕಾಗುತ್ತದೆ. ಈ ರೀತಿಯ ಪಂದ್ಯಗಳನ್ನು ನೋಡಲು ನಾವು ಇಷ್ಟಪಡುವುದಿಲ್ಲ, ಅಲ್ಲದೇ ಐಪಿಎಲ್ ಬ್ರ್ಯಾಂಡ್ ಮೌಲ್ಯಕ್ಕೂ ಕೂಡ ದೊಡ್ಡ ಹೊಡೆತ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಕೊರೊನಾ ಹೋರಾಟಕ್ಕೆ ಬಿಸಿಸಿಐ ಸಾಥ್.. 2000 ಆಕ್ಸಿಜನ್ ಕಾನ್ಸಂಟ್ರೇಟರ್ ದೇಣಿಗೆ ನೀಡಲು ನಿರ್ಧಾರ