ETV Bharat / sports

RCBಗೆ ಬಿಗ್​ ಶಾಕ್.. ತಂಡ ತೊರೆದು ತವರಿಗೆ ತೆರಳಿದ ಆಸೀಸ್​ ಸ್ಟಾರ್​ ಆಟಗಾರರು​

ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಇತರ ಮೂವರು ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಕ್ರಿಶ್ಚಿಯನ್ ಮತ್ತು ಡೇನಿಯಲ್ ಸ್ಯಾಮ್ಸ್ ಮತ್ತು ತರಬೇತುದಾರ ಸೈಮನ್ ಕ್ಯಾಟಿಚ್ ಫ್ರ್ಯಾಂಚೈಸ್‌ನಲ್ಲಿ ಉಳಿಯಲಿದ್ದಾರೆ..

RCB ಗೇ ಬೀಗ್​ ಶಾಕ್​​
RCB ಗೇ ಬೀಗ್​ ಶಾಕ್​​
author img

By

Published : Apr 26, 2021, 12:42 PM IST

ಅಹಮದಾಬಾದ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್​ಗಳಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್‌ಸನ್ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳುವ ನಿರ್ಧಾರ ಕೈಗೊಂಡು ಆಸ್ಟ್ರೇಲಿಯಾಗೆ ವಾಪಸಾಗಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್ ತಿಳಿಸಿದೆ.

"ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳಿಗಾಗಿ ಆಸ್ಟ್ರೇಲಿಯಾಕ್ಕೆ ಮರಳುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಐಪಿಎಲ್ ಸೀಸನ್​ಗೆ ಅವರು ಲಭ್ಯವಿರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಿಂದ ಸಂಪೂರ್ಣ ಬೆಂಬಲ ನೀಡುತ್ತದೆ" ಎಂದು ಫ್ರ್ಯಾಂಚೈಸ್ ಹೇಳಿಕೆಯಲ್ಲಿ ತಿಳಿಸಿದೆ.

  • Official Announcment:

    Adam Zampa & Kane Richardson are returning to Australia for personal reasons and will be unavailable for the remainder of #IPL2021. Royal Challengers Bangalore management respects their decision and offers them complete support.#PlayBold #WeAreChallengers pic.twitter.com/NfzIOW5Pwl

    — Royal Challengers Bangalore (@RCBTweets) April 26, 2021 " class="align-text-top noRightClick twitterSection" data=" ">

ಲೆಗ್ ಸ್ಪಿನ್ನರ್ ಜಂಪಾ ಅವರನ್ನು 1.5 ಕೋಟಿ ರೂ.ಗೆ ಆರ್​ಸಿಬಿ ಖರೀದಿಸಿದರೆ, ವೇಗಿ ರಿಚರ್ಡ್ಸನ್ ಅವರನ್ನ ಆರ್‌ಸಿಬಿ 4 ಕೋಟಿ ರೂ. ಕೊಟ್ಟು ಖರಿದಿಸಿತ್ತು. ಈ ಬಾರಿಯ ಐಪಿಎಲ್​​ನಲ್ಲಿ ಜಂಪಾ ಈವರೆಗೂ ಒಂದು ಪಂದ್ಯವನ್ನಾಡಿಲ್ಲ.

ರಿಚರ್ಡ್‌ಸನ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಒಂದು ಪಂದ್ಯ ಆಡಿದ್ದು, ಮೂರು ಓವರ್‌ಗಳಲ್ಲಿ 29 ರನ್​ ನೀಡಿ 1 ವಿಕೆಟ್‌ ಪಡೆದಿದ್ದರು. ಜಂಪಾ ಮದುವೆಯ ಕಾರಣ ನೀಡಿ ತವರಿಗೆ ಮರಳಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್ ತಿಳಿಸಿದೆ.

ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಇತರ ಮೂವರು ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಕ್ರಿಶ್ಚಿಯನ್ ಮತ್ತು ಡೇನಿಯಲ್ ಸ್ಯಾಮ್ಸ್ ಮತ್ತು ತರಬೇತುದಾರ ಸೈಮನ್ ಕ್ಯಾಟಿಚ್ ಫ್ರ್ಯಾಂಚೈಸ್‌ನಲ್ಲಿ ಉಳಿಯಲಿದ್ದಾರೆ.

ಇದನ್ನೂ ಓದಿ : ಹೆಚ್ಚುತ್ತಿರುವ ಕೋವಿಡ್ -19 : ಐಪಿಎಲ್​​ ಬಿಟ್ಟು ತವರಿಗೆ ಮರಳಲು ಆಸೀಸ್​ ಆಟಗಾರರ ಚಿಂತನೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.