ಮುಂಬೈ (ಮಹಾರಾಷ್ಟ್ರ): ರಾಜಸ್ಥಾನ ರಾಯಲ್ಸ್ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ ಈ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಮುಂಬೈ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಅವರು ಐಪಿಎಲ್‌ನ ಚೊಚ್ಚಲ ಶತಕ ದಾಖಲಿಸಿದರು. 2023ರ ಆವೃತ್ತಿಯಲ್ಲಿ ಇದು 3ನೇ ಶತಕವಾಗಿದೆ. ಹ್ಯಾರಿ ಬ್ರೂಕ್ ಈ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದರೆ, ವೆಂಕಟೇಶ್ ಅಯ್ಯರ್ ಎರಡನೇ ಶತಕದಾಟವಾಡಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 13 ಬೌಂಡರಿ ಮತ್ತ 8 ಸಿಕ್ಸ್ನಿಂದ 100 ರನ್ ಗಳಿಸಿದರು. ಈ ಮೂಲಕ ರಾಜಸ್ಥಾನ ತಂಡದಲ್ಲಿ ಏಕಾಂಗಿ ಪ್ರದರ್ಶನ ನೀಡಿದರು. ಶತಕದ ನಂತರ ತಮ್ಮ ತಮ್ಮ ಬ್ಯಾಟಿಂಗ್ ವೇಗ ಹೆಚ್ಚಿಸಿದ ಜೈಸ್ವಾಲ್ ಮತ್ತೆ 3 ಬೌಂಡರಿ ಮತ್ತು 2 ಸಿಕ್ಸ್ ಸೇರಿಸಿ 124 ರನ್ ಕಲೆ ಹಾಕಿದರು. 19.4ನೇ ಬಾಲ್ನಲ್ಲಿ ಬೌಂಡರಿ ಗೆರೆಯಲ್ಲಿ ಕ್ಯಾಚಿತ್ತರು.
-
𝐇𝐔𝐍𝐃𝐑𝐄𝐃!
— IndianPremierLeague (@IPL) April 30, 2023 " class="align-text-top noRightClick twitterSection" data="
A magnificent century by @ybj_19 off just 53 balls!
A scintillating knock from the @rajasthanroyals opener 👏🏻👏🏻
#IPL1000 | #TATAIPL | #MIvRR pic.twitter.com/IWkKMLf79R
">𝐇𝐔𝐍𝐃𝐑𝐄𝐃!
— IndianPremierLeague (@IPL) April 30, 2023
A magnificent century by @ybj_19 off just 53 balls!
A scintillating knock from the @rajasthanroyals opener 👏🏻👏🏻
#IPL1000 | #TATAIPL | #MIvRR pic.twitter.com/IWkKMLf79R𝐇𝐔𝐍𝐃𝐑𝐄𝐃!
— IndianPremierLeague (@IPL) April 30, 2023
A magnificent century by @ybj_19 off just 53 balls!
A scintillating knock from the @rajasthanroyals opener 👏🏻👏🏻
#IPL1000 | #TATAIPL | #MIvRR pic.twitter.com/IWkKMLf79R
ಭಾರತದ 19 ವರ್ಷದೊಳಗಿನವರ ವಿಶ್ವಕಪ್ 2020ರಲ್ಲಿ 400 ರನ್ ಗಳಿಸಿದ್ದ ಜೈಸ್ವಾಲ್ 17 ನೇ ವಯಸ್ಸಿನಲ್ಲಿ ಲಿಸ್ಟ್ ಎ ದ್ವಿಶತಕ ಗಳಿಸಿದ ಕಿರಿಯ ಭಾರತೀಯ ಎಂಬ ದಾಖಲೆ ಬರೆದಿದ್ದರು. ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ರಾಯಲ್ಸ್ ಐಪಿಎಲ್ 2020 ರಲ್ಲಿ 2.40 ಕೋಟಿ ರೂ.ಗೆ ಖರೀದಿಸಿತ್ತು.
ಐಪಿಎಲ್ನಲ್ಲಿ ಶತಕ ಗಳಿಸಿದ 4ನೇ ಕಿರಿಯ ಆಟಗಾರ: ಶತಕ ಗಳಿಸಿದ ಜೈಸ್ವಾಲ್ ಅವರಿಗೆ 21 ವರ್ಷ 123 ದಿನಗಳಾಗಿದೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶತಕ ಗಳಿಸಿದ ಅತಿ ಕಿರಿಯ ಆಟಗಾರರಲ್ಲಿ ನಾಲ್ಕನೆಯವರು. 19 ವರ್ಷ 253 ದಿನದಲ್ಲಿ ಮನೀಶ್ ಪಾಂಡೆ, 20 ವರ್ಷ 218 ದಿನಗಳಲ್ಲಿ ರಿಷಬ್ ಪಂತ್ ಮತ್ತು 20 ವರ್ಷ 289 ದಿನಗಳಲ್ಲಿ ದೇವದತ್ ಪಡಿಕ್ಕಲ್ ಈ ಸಾಧನೆ ಮಾಡಿದ್ದಾರೆ.
124 ರನ್ ಗಳಸಿದ ಯಶಸ್ವಿ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡದೇ ಅತಿ ಹೆಚ್ಚು ರನ್ಗಳಿಸಿದವರಾಗಿದ್ದಾರೆ. ಇದರ ಜೊತೆಗೆ ರಾಜಸ್ಥಾನ ರಾಯಲ್ಸ್ನ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳಲ್ಲಿ ಬಟ್ಲರ್ ಅವರನ್ನು ಸರಿಗಟ್ಟಿದ್ದಾರೆ. ಬಟ್ಲರ್ 2021 ರಲ್ಲಿ ಡೆಲ್ಲಿ ವಿರುದ್ಧ 124 ರನ್ ಗಳಿಸಿದ್ದರು.
ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಲಕ್ನೋ ವಿರುದ್ಧ ಜೈಪುರದಲ್ಲಿ 44 (35), ಆರ್ಸಿಬಿ ವಿರುದ್ಧ 47 (37), ಚೆನ್ನೈ ಎದುರು 77 (43) ಮತ್ತು ಇಂದಿನ ಪಂದ್ಯದಲ್ಲಿ 124 (62) ರನ್ ಗಳಿಸಿದ್ದಾರೆ.
ಈ ಆವೃತ್ತಿಯಲ್ಲಿ ಜೈಸ್ವಾಲ್...: 16ನೇ ಆವೃತ್ತಿಯ ಐಪಿಎಲ್ನಲ್ಲಿ 9 ಪಂದ್ಯಗಳನ್ನು ಆಡಿರುವ ಜೈಸ್ವಾಲ್ 428 ರನ್ ಗಳಿಸಿದ್ದಾರೆ. ಈ ಮೂಲಕ ಕಿತ್ತಳೆ ಕ್ಯಾಪ್ ಗೌರವ ಪಡೆದುಕೊಂಡಿದ್ದಾರೆ. ಇವರ ಆಟದಲ್ಲಿ 1 ಶತಕ 3 ಅರ್ಧಶತಕ ಸೇರಿದ್ದು, 47.56 ರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ. ಆರೆಂಜ್ ಕ್ಯಾಪ್ ರೇಸ್ನಲ್ಲಿ 422 ರನ್ ಗಳಿಸಿದ ಡು ಪ್ಲೆಸಿಸ್ ಎರಡನೇ ಸ್ಥಾನದಲ್ಲಿದ್ದರೆ, ಕಾನ್ವೆ (414) ಮತ್ತು ಗಾಯಕ್ವಾಡ್ (354) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್: ರಂಕಿರೆಡ್ಡಿ-ಚಿರಾಗ್ ಜೋಡಿಗೆ ಐತಿಹಾಸಿಕ ಚಿನ್ನ