ETV Bharat / sports

ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿಗೆ ಈ ಸಂಗತಿಗಳು ಕಾರಣವಾಯ್ತು ಎಂದ ವಿರಾಟ್​ ಕೊಹ್ಲಿ

author img

By

Published : May 1, 2021, 10:16 AM IST

Updated : May 1, 2021, 11:13 AM IST

ಚೇಸಿಂಗ್​ನ ಆರಂಭದಲ್ಲೇ ಆಕ್ರಮಣಕಾರಿ ಆಟದ ಅಗತ್ಯವಿತ್ತು. ಆದರೆ ಸುಲಭವಾಗಿ ರನ್​ ಗಳಿಸಲು ಸಾಧ್ಯವಿರಲಿಲ್ಲ. 110ರ ಸ್ಟ್ರೈಕ್ ​ರೇಟ್​ನಲ್ಲಿ ಜೊತೆಯಾಟ ನಡೆಸುವ ಅನಿವಾರ್ಯತೆ ನಮಗಿತ್ತು. ಆದರೆ ನಮ್ಮ ಬ್ಯಾಟ್ಸ್​ಮನ್​ಗಳು ವಿಫರಾದರು ಎಂದು ಕೊಹ್ಲಿ ಹೇಳಿದ್ದಾರೆ.

we-gave-away-25-odd-runs-in-the-end-kohli-after-loss-against-punjab-kings
ವಿರಾಟ್​ ಕೊಹ್ಲಿ

ಅಹಮದಾಬಾದ್​: ಪಂಜಾಬ್ ಕಿಂಗ್ಸ್​​​ ವಿರುದ್ಧ ನಮ್ಮ ಬೌಲರ್​ಗಳು ಕೆಟ್ಟ ಎಸೆತಗಳ ಮೂಲಕ ಬೌಂಡರಿಗಳನ್ನು ಬಿಟ್ಟುಕೊಟ್ಟರು. ಕೊನೆಯ ಓವರ್​ಗಳಲ್ಲಿ ಅನಗತ್ಯವಾಗಿ 25 ರನ್​ ಹೆಚ್ಚಿಗೆ ನೀಡಿದ್ದು ತಂಡಕ್ಕೆ ಹಿನ್ನಡೆ ಉಂಟಾಗಲು ಕಾರಣ ಎಂದು ಆರ್​ಸಿಬಿ ನಾಯಕ ವಿರಾಟ್​​ ಕೊಹ್ಲಿ ಹೇಳಿದರು.

ನಿನ್ನೆ ಪಂಜಾಬ್​ ವಿರುದ್ಧ 34 ರನ್​ಗಳಿಂದ ಬೆಂಗಳೂರು ಸೋತ ಬಳಿಕ ಮಾತನಾಡಿದ ಅವರು, ಒಂದು ಹಂತದಲ್ಲಿ 116ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಪಂಜಾಬ್​ ತಂಡವನ್ನು 160ರೊಳಗೆ ಕಟ್ಟಿಹಾಕಬಹುದಿತ್ತು. ಆದರೆ ನಮ್ಮ ಯೋಜನೆಗಳು ಫಲಪ್ರದವಾಗಲಿಲ್ಲ. ಅಂತಿಮ ಓವರ್​​ಗಳಲ್ಲಿ ಹರ್ಷಲ್​ ಹಾಗೂ ಜೆಮಿಸನ್ ದುಬಾರಿಯದದ್ದು ತಂಡಕ್ಕೆ ಹೊರೆಯಾಯಿತು ಎಂದರು.

ಬ್ಯಾಟಿಂಗ್​ ಬಗ್ಗೆ ಮಾತನಾಡಿದ ಕೊಹ್ಲಿ, ಚೇಸಿಂಗ್​ನ ಆರಂಭದಲ್ಲೇ ಆಕ್ರಮಣಕಾರಿ ಆಟದ ಅಗತ್ಯವಿತ್ತು. ಆದರೆ ಸುಲಭವಾಗಿ ರನ್​ ಗಳಿಸಲು ಸಾಧ್ಯವಿರಲಿಲ್ಲ. 110ರ ಸ್ಟ್ರೈಕ್​ ರೇಟ್​ನಲ್ಲಿ ಜೊತೆಯಾಟ ನಡೆಸುವ ಅನಿವಾರ್ಯತೆ ನಮಗಿತ್ತು. ಆದರೆ ನಮ್ಮ ಬ್ಯಾಟ್ಸ್​ಮನ್​ಗಳು ವಿಫಲರಾದರು. ಕೆಲವೊಂದು ಸಂಗತಿಗಳಲ್ಲಿ ಸುಧಾರಣೆ ಕಾಣಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಜಾಗೃತರಾಗಿರಿ.. ಈ ಲಕ್ಷಣಗಳು ಕಂಡುಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ

ರಜತ್​ ಪಟೇದಾರ್​ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರೊಬ್ಬ ಉತ್ತಮ ಆಟಗಾರ. ಆದರೆ ಈದಿನ ಅವರದ್ದಾಗಿರಲಿಲ್ಲ. ನಾವು ಅತ್ಯುತ್ತಮ ಬ್ಯಾಟಿಂಗ್​ ಸರದಿ ಹೊಂದಿದ್ದೇವೆ ಎಂದು ಹೇಳಿದರು.

Last Updated : May 1, 2021, 11:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.