ನವದೆಹಲಿ: ವಿರಾಟ್ ಕೊಹ್ಲಿ ಮತ್ತು 'ದಾದ' ಸೌರವ್ ಗಂಗೂಲಿ ನಡುವೆ ಶೀತಲ ಸಮರ ಇದೆ ಎಂದು ಹಲವು ದಿನಗಳಿಂದ ಅಲ್ಲಲ್ಲಿ ವರದಿಗಳಾಗುತ್ತಿದ್ದವು. ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ತೊರೆಯುವಲ್ಲಿ ಗಂಗೂಲಿ ಪಾತ್ರವಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಆ ಸಮಯದಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು.
ಇತ್ತೀಚೆಗೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಡಗೌಟ್ನಲ್ಲಿದ್ದ ಮಾಜಿ ಬಿಸಿಸಿಐ ಅಧ್ಯಕ್ಷರನ್ನು ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಜೊತೆಗೆ ಶನಿವಾರ ಇನ್ನೊಂದು ವಿಡಿಯೋ ಕೂಡಾ ವೈರಲ್ ಆಗಿತ್ತು. ಪಂದ್ಯದ ನಂತರ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳ ಸಮಯದಲ್ಲಿ ಡಿಸಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಸೇರಿ ಎಲ್ಲರೂ ಆರ್‌ಸಿಬಿ ಬ್ಯಾಟರ್‌ಗಳು ನಿಂತಿದ್ದಾಗ ಗಂಗೂಲಿ ಕೊಹ್ಲಿಯೊಂದಿಗೆ ಹ್ಯಾಂಡ್‌ಶೇಕ್ ತಪ್ಪಿಸಲು ಸರದಿ ಸ್ಕಿಪ್ ಮಾಡುತ್ತಿರುವುದು ಕಂಡುಬಂತು.
-
Virat Kohli and Sourav Ganguly Fight - One should never forget the contribution of Sourav Ganguly to Indian cricket. Sourav Ganguly ignited the winning spirit to the team when no one used to think that India will win. (1/4) #RCBvsCSK #CSKVSRCB pic.twitter.com/iW23wgZCZQ
— Vikram Rajput (@iVikramRajput) April 17, 2023 " class="align-text-top noRightClick twitterSection" data="
">Virat Kohli and Sourav Ganguly Fight - One should never forget the contribution of Sourav Ganguly to Indian cricket. Sourav Ganguly ignited the winning spirit to the team when no one used to think that India will win. (1/4) #RCBvsCSK #CSKVSRCB pic.twitter.com/iW23wgZCZQ
— Vikram Rajput (@iVikramRajput) April 17, 2023Virat Kohli and Sourav Ganguly Fight - One should never forget the contribution of Sourav Ganguly to Indian cricket. Sourav Ganguly ignited the winning spirit to the team when no one used to think that India will win. (1/4) #RCBvsCSK #CSKVSRCB pic.twitter.com/iW23wgZCZQ
— Vikram Rajput (@iVikramRajput) April 17, 2023
ಇನ್ನೊಂದು ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಬರಲು ಪ್ಯಾಡ್ ಕಟ್ಟಿ ರೆಡಿಯಾಗಿ ಕುಳಿತಿರುತ್ತಾರೆ. ಅಲ್ಲಿಯೇ ನಡೆಕೊಂಡು ಹೋಗುವಾಗ ಗಂಗೂಲಿ, ವಿರಾಟ್ ಅವರನ್ನು ಕಂಡರೂ ಕಾಣದ ರೀತಿಯಲ್ಲಿ ನೀರು ಕುಡಿದುಕೊಂಡು ಮುಂದೆ ಹೋಗುತ್ತಾರೆ. ಕೊಹ್ಲಿ ಈ ವೇಳೆಯೂ ಗಂಗೂಲಿಯನ್ನು ದಿಟ್ಟಿಸಿ ನೋಡಿರುವುದು ವಿಡಿಯೋದಲ್ಲಿದೆ. ಇದೀಗ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಮುಸುಕಿನ ಸಮರ ಬಹಿರಂಗಗೊಂಡಿದೆ.
-
Never won an IPL trophy. Never won an ICC event as a captain.
— Gudumba Satti 🇮🇳🕉️ (@GudumbaSatti) April 17, 2023 " class="align-text-top noRightClick twitterSection" data="
Still, attitude at peaks.👎🏻
Ganguly took over the captaincy when Indian team was in the worst position and led it successfully.
Kohli can never match Ganguly.#ViratKohli #ViratVsGanguly
pic.twitter.com/JOFqgROP26
">Never won an IPL trophy. Never won an ICC event as a captain.
— Gudumba Satti 🇮🇳🕉️ (@GudumbaSatti) April 17, 2023
Still, attitude at peaks.👎🏻
Ganguly took over the captaincy when Indian team was in the worst position and led it successfully.
Kohli can never match Ganguly.#ViratKohli #ViratVsGanguly
pic.twitter.com/JOFqgROP26Never won an IPL trophy. Never won an ICC event as a captain.
— Gudumba Satti 🇮🇳🕉️ (@GudumbaSatti) April 17, 2023
Still, attitude at peaks.👎🏻
Ganguly took over the captaincy when Indian team was in the worst position and led it successfully.
Kohli can never match Ganguly.#ViratKohli #ViratVsGanguly
pic.twitter.com/JOFqgROP26
ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಐದನೇ ಸೋಲು ಅನುಭವಿಸಿದೆ. ಒಂದು ಗೆಲುವನ್ನೂ ಡೆಲ್ಲಿ ಈವರೆಗೆ ಪಡೆಯದೇ ಅಂಕಪಟ್ಟಿಯಲ್ಲಿ ಕೊನೆಯ, 10ನೇ ಸ್ಥಾನದಲ್ಲಿದೆ. ಆರ್‌ಸಿಬಿ ನೀಡಿದ್ದ 174 ರನ್ ಗುರಿ ಬೆನ್ನತ್ತಿದ್ದ ಡೆಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿ 23 ರನ್ ಸೋಲು ಕಂಡಿತು. ಮನೀಶ್ ಪಾಂಡೆ ಅರ್ಧಶತಕ ಗಳಿಸಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹಾಗೆಯೇ ಬೌಲಿಂಗ್ನಲ್ಲಿ ಕುಲ್ದೀಪ್ ಸಹ ಪ್ರಮುಖ ಎರಡು ವಿಕೆಟ್ ಪಡೆದಿದ್ದರು. ಆದರೆ ಗೆಲುವು ಮಾತ್ರ ಕೈತಪ್ಪಿತ್ತು.
ಸೌರವ್ ಗಂಗೂಲಿ ಬಿಸಿಸಿಐನ ಅಧ್ಯಕ್ಷರಾಗಿದ್ದಾಗ ವಿರಾಟ್ ಕೊಹ್ಲಿ ಸತತ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ವಿಫಲರಾದರು ಎಂಬ ಕಾರಣಕ್ಕೆ ನಾಯಕತ್ವದಿಂದ ಇಳಿಸಲಾಗಿತ್ತು. ಮೊದಲು ಟಿ20 ಮತ್ತು ನಂತರ ಏಕದಿನದಿಂದಲೂ ನಾಯಕನ ಸ್ಥಾನ ಬಿಟ್ಟುಕೊಟ್ಟರು. ನಾಯಕತ್ವ ಬದಲಾವಣೆಯ ನಿರ್ಧಾರದಲ್ಲಿ ತನ್ನನ್ನು ಕೇಳಲಿಲ್ಲ ಎಂಬುದರ ಬಗ್ಗೆ ಕೊಹ್ಲಿ ಅಸಮಾಧಾನ ಹೊರಹಾಕಿದ್ದರು. 2021 ರಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಅವರು ಏಕದಿನ ನಾಯಕತ್ವದ ಬದಲಾವಣೆಯ ಬಗ್ಗೆ ತಮ್ಮ ಮತ್ತು ಆಯ್ಕೆ ಸಮಿತಿಯ ನಡುವೆ ಯಾವುದೇ ಸಂವಹನ ನಡೆದಿಲ್ಲ ಮತ್ತು ಟೆಸ್ಟ್ ಸರಣಿಯ ಆಯ್ಕೆ ಸಭೆಗೆ ಗಂಟೆಗಳ ಮೊದಲು ತಿಳಿಸಲಾಯಿತು ಎಂದು ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರಿಗನಾಗಿ ಆರ್ಸಿಬಿಗೆ ಆಡುವುದು ನನ್ನ ಕನಸು, ಸಿರಾಜ್ ಸಲಹೆ ನೆರವಾಯ್ತು: ವೈಶಾಕ್