ETV Bharat / sports

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ವಿರಾಟ್: WTC ಯಲ್ಲಿ ಆಡುತ್ತಾರಾ ಕಿಂಗ್​​ ಕೊಹ್ಲಿ? - TATA IPL

ಜೂನ್​ 7 ರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಇಂಗ್ಲೆಂಡ್​ನ ಓವೆಲ್​ ಮೈದಾನದಲ್ಲಿ ನಡೆಯಲಿದೆ. ವಿಜಯ್​ ಶಂಕರ್ ಅವರ ಕ್ಯಾಚ್​ ವೇಳೆ ಗಾಯಗೊಂಡ ವಿರಾಟ್​ ಡಬ್ಲೂಟಿಸಿಯಲ್ಲಿ ಆಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

virat kohli injured in ipl 2023 70th match rcb vs gt at m chinnaswamy
ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ವಿರಾಟ್: WTC ಯಲ್ಲಿ ಆಡುತ್ತಾರಾ ಕಿಂಗ್​​ ಕೊಹ್ಲಿ?
author img

By

Published : May 22, 2023, 6:15 PM IST

ಬೆಂಗಳೂರು: ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್​​ ಪ್ರೀಮಿಯರ್​ ಲೀಗ್ (ಐಪಿಎಲ್)ನ 70ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) 6 ವಿಕೆಟ್​ನಿಂದ ಗುಜರಾತ್​ ಟೈಟಾನ್ಸ್​ (ಜಿಟಿ) ವಿರುದ್ಧ ಸೋಲನುಭವಿಸಿತು. ಅಲ್ಲದೇ 16ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿಯಿತು. ಗುಜರಾತ್​ ಟೈಟಾನ್ಸ್​ ಗೆಲುವು ಮುಂಬೈ ಇಂಡಿಯನ್ಸ್ ಪ್ಲೇ ಆಫ್​ ಪ್ರವೇಶ ನೀಡಿತು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್​ ಹಿಡಿಯುವಾಗ ಗಾಯಗೊಂಡಿದ್ದು, ಅಂತಾರಾಷ್ಟ್ರೀಯ ಪಂದ್ಯದ ವೇಳೆಗೆ ಸಂಕಷ್ಟಕ್ಕೆ ಒಳಗಾಗಗಲಿದ್ದಾರೆ ಎಂಬ ಆತಂಕ ಸದ್ಯಕ್ಕೆ ಕಾಡುತ್ತಿದೆ. ಜೂನ್​ 7 ರಿಂದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಈ ಪಂದ್ಯದಲ್ಲಿ ಫಾರ್ಮ್​ನಲ್ಲಿರುವ ವಿರಾಟ್​ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವು ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಗಾಯಗೊಂಡಿದ್ದರು. ಗುಜರಾತ್ ಟೈಟಾನ್ಸ್ ಇನಿಂಗ್ಸ್ ವೇಳೆ 15ನೇ ಓವರ್​ನಲ್ಲಿ ವಿಜಯ್ ಶಂಕರ್ ಅವರ ಕ್ಯಾಚ್​ ವೇಳೆ ಗಾಯಗೊಂಡರು.

ಈ ವೇಳೆ ಫಿಸಿಯೋ ಬಂದು ಚಿಕಿತ್ಸೆ ನೀಡಿದರಾದರೂ ವಿರಾಟ್​ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ. 15ನೇ ಓವರ್​ನ ನಂತರ ಡಗ್​ಔಟ್​ನಲ್ಲಿ ಕುಳಿತು ವಿರಾಟ್​ ಪಂದ್ಯ ವೀಕ್ಷಿಸಿದರು. ನಂತರ ಫೀಲ್ಡಿಂಗ್‌ಗಾಗಿ ಮೈದಾನಕ್ಕೆ ಮರಳಲಿಲ್ಲ.

ವಿರಾಟ್ ಕೊಹ್ಲಿ ಗಾಯದ ಬಗ್ಗೆ ಆರ್​ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಬಹಿರಂಗಪಡಿಸಿದ್ದಾರೆ. ಕೊಹ್ಲಿಯ ಗಾಯ ಗಂಭೀರವಾಗಿಲ್ಲ, ಶೀಘ್ರದಲ್ಲೇ ಅವರು ಫಿಟ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಕೊಹ್ಲಿಯನ್ನು ಹೊಗಳಿದ ಸಂಜಯ್, 4 ದಿನಗಳಲ್ಲೇ ಕೊಹ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದು ಸಣ್ಣ ವಿಷಯವಲ್ಲ ಎಂದು ಹೇಳಿದ್ದಾರೆ.

ಪಂದ್ಯ: ನಿನ್ನೆ ಸೂಪರ್​ ಸಂಡೆ ಲೆಕ್ಕದಲ್ಲಿ ಎರಡು ಪಂದ್ಯಗಳು ನಡೆದವು. ಸಂಜೆ 3:30ಕ್ಕೆ ಮುಂಬೈ ಇಂಡಿಯನ್ಸ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವೆ ನಡೆಯಿತು. ಸನ್​ ರೈಸರ್ಸ್​ ಹೈದರಾಬಾದ್​ ನೀಡಿದ್ದ 200 ರನ್​ನ ಗುರಿಯನ್ನು ಮುಂಬೈ 2 ಓವರ್​ ಬಾಕಿ ಇರುವಂತೆ ಹೊಡೆದು ಗೆದ್ದುಕೊಂಡಿತು. ಇದರಿಂದ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿತು.

ಕ್ಯಾಮರಾನ್​ ಗ್ರೀನ್​ ಶತಕ ಮತ್ತು ನಾಯಕ ರೋಹಿತ್​ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಮುಂಬೈ ಕೇವಲ 2 ವಿಕೆಟ್​ ನಷ್ಟಕ್ಕೆ ಗುರಿ ತಲುಪಿತ್ತು. ಆದರೆ ಈ ಗೆಲುವು ಮುಂಬೈ ಪ್ಲೇ ಆಫ್​ ಪ್ರವೇಶವನ್ನು ನಿಗದಿ ಮಾಡಿರಲಿಲ್ಲ. ಎರಡನೇ ಪಂದ್ಯದ ಫಲಿತಾಂಶ ಮುಂಬೈಗೆ ಮುಖ್ಯವಾಗಿತ್ತು.

ನಿನ್ನೆಯ ಎರಡನೇ ಮುಖಾಮುಖಿಯಲ್ಲಿ ಆರ್​ಸಿನಿ ಗುಜರಾತ್ ಟೈಟಾನ್ಸ್​ ವಿರುದ್ಧ 6 ವಿಕೆಟ್​ನ ಸೋಲು ಕಂಡಿದ್ದು, ಮುಂಬೈಯನ್ನು ಪ್ಲೇ ಆಫ್​ಗೆ ಸೇರಿಸಿತ್ತು. ವಿರಾಟ್​ ಶತಕದ ನೆರವಿನಿಂದ 198 ರನ್​ನ ಗುರಿಯನ್ನು ಜಿಟಿಗೆ ಬೆಂಗಳೂರು ನೀಡಿತ್ತು. ಇದನ್ನೂ ಬೆನ್ನತ್ತಿದ ಗುಜರಾತ್​ಗೆ ಶುಭಮನ್​ ಗಿಲ್​ ಶತಕ ಮತ್ತು ವಿಜಯ್​ ಶಂಕರ್​ ಅರ್ಧಶತಕ ನೆರವಾಯಿತು. ಇದರಿಂದ ಕೇವಲ ನಾಲ್ಕು ವಿಕೆಟ್ ​ನಷ್ಟಕ್ಕೆ 5 ಬಾಲ್​ ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: 'ಈ ಸಲವೂ ಕಪ್​ ನಮ್ಗಿಲ್ಲ': ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್​ಸಿಬಿ, ಅಭಿಮಾನಿಗಳಿಗೆ ಬರೀ ನಿರಾಶೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.