ETV Bharat / sports

TATA IPL-2022: ಮಧ್ಯಾಹ್ನ ಪಂಜಾಬ್ vs ರಾಜಸ್ಥಾನ್, ಸಂಜೆ ಲಖನೌ ವಿರುದ್ಧ ಕೋಲ್ಕತ್ತಾ ಬಿಗ್​ ಫೈಟ್​ - ಐಪಿಎಲ್​ನಲ್ಲಿಂದು ಡಬಲ್​ ಧಮಾಕ

ಇಂದು ಮಧ್ಯಾಹ್ನ 3.30ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆದ್ರೆ, ಸಂಜೆ 7.30ಕ್ಕೆ ಲಖನೌ ಸೂಪರ್‌ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ಜರುಗಲಿದೆ.

Indian Premier League 2022, Punjab Kings vs Rajasthan Royals, Lucknow Super Giants vs Kolkata Knight Riders, ಇಂಡಿಯನ್ ಪ್ರೀಮಿಯರ್ ಲೀಗ್ 2022, ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್, ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, ಐಪಿಎಲ್​ನಲ್ಲಿಂದು ಡಬಲ್​ ಧಮಾಕ,
ಐಪಿಎಲ್​ನಲ್ಲಿಂದು ಡಬಲ್​ ಧಮಾಕ
author img

By

Published : May 7, 2022, 8:18 AM IST

ಮುಂಬೈ : 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಡಬಲ್ ಧಮಾಕ. ಇಂದು ಎರಡು ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್​ ಅಭಿಮಾನಿಗಳ ಖುಷಿ ದ್ವಿಗುಣಗೊಂಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 3:30ಕ್ಕೆ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಬಲಿಷ್ಠ ಸಂಜು ಸ್ಯಾಮ್ಸನ್​ ಅವರ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಎದುರಿಸಲಿದೆ. ಸಂಜೆ 7:30ಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಕೆ ಎಲ್​ ರಾಹುಲ್​ ನೇತೃತ್ವದ ಬಲಾಢ್ಯ ಲಖನೌ ಸೂಪರ್‌ಜೈಂಟ್ಸ್ ಮತ್ತು ಶ್ರೇಯಸ್​ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ​ತಂಡ ಮುಖಾಮುಖಿ ಆಗಲಿದೆ. ರಾಜಸ್ಥಾನ್​ ತಂಡ ಹೊರತುಪಡಿಸಿ ಮೂರು ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಗೆಲುವು ಕಂಡಿದ್ದು, ಇಂದಿನ ಸೆಣಸಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪಂದ್ಯ: ಪಾಯಿಂಟ್​ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್​ ರಾಯಲ್ಸ್​ ತಂಡ ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಗೆಲುವಿನ ಲಯಕ್ಕೆ ಮರಳಲು ಯತ್ನಿಸುತ್ತಿದೆ. ಬಟ್ಲರ್​ ಮತ್ತು ನಾಯಕ ಸಂಜು ಸ್ಯಾಮ್ಸನ್​ ಉತ್ತಮ ಲಯದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್ ಮತ್ತು ಯುಜ್ವೇಂದ್ರ ಚಹಲ್ ಕೊನೆಯ ಎಸೆತದವರೆಗೂ ಛಲದ ಹೋರಾಟ ಮಾಡುವ ನುರಿತ ಬೌಲರ್‌ಗಳಾಗಿದ್ದಾರೆ. ಇತ್ತ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಫಾರ್ಮ್‌ಗೆ ಮರಳಿರುವುದು ತಂಡದ ಸ್ಥೈರ್ಯ ಹೆಚ್ಚಿಸಿದ್ದರೆ, ಅನುಭವಿ ಶಿಖರ್ ಧವನ್ ಆರಂಭಿಕ ಹಂತದಲ್ಲಿ ರನ್‌ಗಳಿಸುತ್ತಿದ್ದಾರೆ. ಆಲ್​ರೌಂಡರ್ ಲಿವಿಂಗ್‌ಸ್ಟೋನ್ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಹೊಸಪ್ರತಿಭೆ ಜಿತೇಶ್ ಶರ್ಮಾ ಕೂಡ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ಒಡಿಯಾನ್ ಸ್ಮಿತ್ ಪಂದ್ಯವನ್ನು ಗೆದ್ದುಕೊಡುವ ಆಟಗಾರನೆಂದು ಸಾಬೀತು ಮಾಡಿದ್ದಾರೆ. ರಬಾಡ ಮತ್ತು ಆರ್ಷದೀಪ್ ಸಿಂಗ್ ಕೂಡ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಸಂಭಾವ್ಯ ಆಟಗಾರರ ಪಟ್ಟಿ: ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್, ರಾಹುಲ್ ಚಹರ್, ವೈಭವ್ ಅರೋರಾ.

ಆರ್​ಆರ್​ ತಂಡ: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ, ವಿ.ಕೀ), ಕರುಣ್ ನಾಯರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್.

ಲಖನೌ ಸೂಪರ್‌ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಟ: ಟೇಬಲ್​ ಪಾಯಿಂಟ್​ನ ಎರಡನೇ ಸ್ಥಾನದಲ್ಲಿರುವ ಕೆ.ಎಲ್​ ರಾಹುಲ್​ ನಾಯಕತ್ವದ ಲಖನೌ ಸೂಪರ್​ಜೈಂಟ್ಸ್​ ತಂಡ ಇಂದಿನ ಪಂದ್ಯ ಗೆದ್ದು ಮೊದಲನೇ ಸ್ಥಾನವನ್ನು ಅಲಂಕರಿಸಲು ಕಾತರದಿಂದ ಕಾಯುತ್ತಿದೆ. ಲಖನೌ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್​​ ಲೈನ್ ಅಪ್​​ ಸ್ಟ್ರಾಂಗ್​ ಆಗಿದೆ. ಈಗಾಗಲೇ ಈ ಬಾರಿಯ ಐಪಿಎಲ್​ನಲ್ಲಿ ಎರಡು ಬಾರಿ ಶತಕ ಬಾರಿಸಿರುವ ನಾಯಕ ಕೆ.ಎಲ್​ ರಾಹುಲ್​ ಈ ಪಂದ್ಯ ಗೆಲ್ಲುವ ತವಕದಲ್ಲಿದ್ದಾರೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಈ ಬಾರಿ ಆಡಿದ 10 ಪಂದ್ಯದಲ್ಲಿ ಕೇವಲ 4 ಪಂದ್ಯ ಗೆದ್ದಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಆರ್​ಆರ್​ ವಿರುದ್ಧ ಕೋಲ್ಕತ್ತಾ ತಂಡ ಏಳು ವಿಕೆಟ್​ಗಳಿಂದ ಭರ್ಜರಿ ಜಯ ಕಂಡಿತ್ತು. ತಂಡಕ್ಕೆ ಇನ್ನುಳಿದ ನಾಲ್ಕು ಪಂದ್ಯಗಳಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್‌ ಪ್ರವೇಶಿಸುವುದು ಕಷ್ಟವಾಗಿದೆ.

ಸಂಭಾವ್ಯ ಆಟಗಾರರ ಪಟ್ಟಿ: ಲಖನೌ ತಂಡ: ಕ್ವಿಂಟನ್ ಡಿಕಾಕ್ (ವಿ.ಕೀ), ಕೆ ಎಲ್ ರಾಹುಲ್ (ನಾಯಕ), ಮನೀಶ್ ಪಾಂಡೆ, ದೀಪಕ್ ಹೂಡ, ಮಾರ್ಕಸ್ ಸ್ಟೊಯ್ನಿಸ್‌, ಆಯುಷ್ ಬದೋನಿ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರ, ರವಿ ಬಿಷ್ಣೋಯ್, ಕೆ. ಗೌತಮ್.

ಕೋಲ್ಕತಾ ನೈಟ್ ರೈಡರ್ಸ್: ಆರೋನ್ ಫಿಂಚ್‌, ವೆಂಕಟೇಶ್ ಅಯ್ಯರ್‌, ಶ್ರೇಯಸ್ ಅಯ್ಯರ್‌(ನಾಯಕ), ಬಾಬಾ ಇಂದ್ರಜಿತ್‌, ಸುನಿಲ್ ನರೈನ್‌, ನಿತೀಶ್ ರಾಣಾ, ಆಂಡ್ರೆ ರಸೆಲ್‌, ರಿಂಕು ಸಿಂಗ್‌, ಉಮೇಶ್ ಯಾದವ್‌, ಟಿಮ್‌ ಸೌಥಿ, ಹರ್ಷಿತ್ ರಾಣಾ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.