ಹೈದರಾಬಾದ್ (ತೆಲಂಗಾಣ): ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ. ಎರಡೂ ತಂಡಗಳೂ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಸುಧಾರಿಸಿಕೊಳ್ಳುವ ಉತ್ಸಾಹದಲ್ಲಿವೆ. ಮುಂಬೈ 4 ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ 8ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಇದೇ ರೀತಿಯ ಫಲಿತಾಂಶ ಹೊಂದಿದ್ದು, 9ನೇ ಸ್ಥಾನದಲ್ಲಿದೆ.
-
An all important #ESADay match, coaching players, SKY's knock & the upcoming challenges - catch Polly get candid on the 𝐂𝐨𝐚𝐜𝐡 𝐂𝐀𝐌 📹#OneFamily #MumbaiMeriJaan #MumbaiIndians #TATAIPL #IPL2023 #SRHvMI @KieronPollard55 MI TV pic.twitter.com/t0FXbuBcnD
— Mumbai Indians (@mipaltan) April 18, 2023 " class="align-text-top noRightClick twitterSection" data="
">An all important #ESADay match, coaching players, SKY's knock & the upcoming challenges - catch Polly get candid on the 𝐂𝐨𝐚𝐜𝐡 𝐂𝐀𝐌 📹#OneFamily #MumbaiMeriJaan #MumbaiIndians #TATAIPL #IPL2023 #SRHvMI @KieronPollard55 MI TV pic.twitter.com/t0FXbuBcnD
— Mumbai Indians (@mipaltan) April 18, 2023An all important #ESADay match, coaching players, SKY's knock & the upcoming challenges - catch Polly get candid on the 𝐂𝐨𝐚𝐜𝐡 𝐂𝐀𝐌 📹#OneFamily #MumbaiMeriJaan #MumbaiIndians #TATAIPL #IPL2023 #SRHvMI @KieronPollard55 MI TV pic.twitter.com/t0FXbuBcnD
— Mumbai Indians (@mipaltan) April 18, 2023
ಸತತ ವೈಫಲ್ಯದಿಂದ ಟೀಕೆಗೆ ಕಾರಣವಾಗಿದ್ದ ಸೂರ್ಯ ಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿಯ ಜೊತೆಗೆ 43 ರನ್ ಗಳಿಸಿದ್ದರು. ಈ ಮೂಲಕ ಲಯಕ್ಕೆ ಮರಳಿರುವುದು ಮುಂಬೈಗೆ ಬಲ ತುಂಬಿದೆ. ಆರಂಭಿಕ ಆಟಗಾರ ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲಿ ಕಿಶನ್ ಅವರ ಬೆಸ್ಟ್ ಸ್ಕೋರ್ ಇದಾಗಿದೆ. ಮೊದಲ ಪಂದ್ಯದಿಂದಲೇ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವುದು ತಂಡಕ್ಕೆ ತಲೆನೋವು ಕಡಿಮೆ ಮಾಡಿದೆ.
ಮತ್ತೆ ಅಬ್ಬರಿಸುವರಾ ಹ್ಯಾರಿ ಬ್ರೂಕ್?: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈ ಆವೃತ್ತಿಯ ಮೊದಲ ಶತಕ ದಾಖಲಿಸಿದ ಹ್ಯಾರಿ ಬ್ರೂಕ್ ಮುಂಬೈ ಎದುರು ಅದೇ ಆಟ ಮುಂದುವರೆಸುತ್ತಾರಾ ಎಂಬುದನ್ನು ಕಾದು ನೋಡಬೇಕು. ನಾಯಕ ಐಡೆನ್ ಮಾರ್ಕಮ್ ಸಹ ತಂಡಕ್ಕೆ ರನ್ ಕೊಡುಗೆ ನೀಡುತ್ತಿದ್ದಾರೆ. ಯುವ ಭಾರತೀಯ ಪ್ರತಿಭೆ ಅಭಿಷೇಕ್ ಶರ್ಮಾ ಮಧ್ಯಮ ಕ್ರಮಾಂಕ ಗಟ್ಟಿಗೊಳಿಸಿದ್ದಾರೆ.
-
Cinema choopistha mama, meeku Uppal lo cinema chupistaa maamaa!! 🤩🎬 pic.twitter.com/jqpJY4p7de
— SunRisers Hyderabad (@SunRisers) April 18, 2023 " class="align-text-top noRightClick twitterSection" data="
">Cinema choopistha mama, meeku Uppal lo cinema chupistaa maamaa!! 🤩🎬 pic.twitter.com/jqpJY4p7de
— SunRisers Hyderabad (@SunRisers) April 18, 2023Cinema choopistha mama, meeku Uppal lo cinema chupistaa maamaa!! 🤩🎬 pic.twitter.com/jqpJY4p7de
— SunRisers Hyderabad (@SunRisers) April 18, 2023
ಅರ್ಜುನ್ ತೆಂಡೂಲ್ಕರ್‌ಗೆ ಚಾನ್ಸ್ ಸಿಗುತ್ತಾ?: ರೋಹಿತ್ ಶರ್ಮಾರ ಸ್ಥಾನದಲ್ಲಿ ಕಳೆದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ತಂಡ ಸೇರಿದ್ದು, ಎರಡು ಓವರ್ ಮಾಡಿದ್ದರು. ಇಂದು ರೋಹಿತ್ ಶರ್ಮಾ ತಂಡಕ್ಕೆ ಮರಳುವ ಕಾರಣ ಅವರಿಗೆ ಬೌಲಿಂಗ್ ಕ್ಷೇತ್ರದಲ್ಲಿ ಸ್ಥಾನ ಸಿಗಲಿದೆಯೇ ಎಂಬುದು ಪ್ರಶ್ನೆ. ಗಾಯದಿಂದ ಹೊರಗುಳಿದಿರುವ ಜೋಫ್ರಾ ಆರ್ಚರ್ ಗುಣಮುಖರಾಗಿ ಆಡುವ 11ರಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಮುಖಾಮುಖಿ: ಕಳೆದ 5 ಪಂದ್ಯಗಳಲ್ಲಿ ಮುಂಬೈ 3 ರಲ್ಲಿ ಗೆದ್ದರೆ, ಹೈದರಾಬಾದ್ 2 ರಲ್ಲಿ ಜಯ ದಾಖಲಿಸಿದೆ. ಎರಡು ತಂಡಗಳ ನಡುವಿನ ಕೊನೆಯ ಪಂದ್ಯವನ್ನು ಹೈದರಾಬಾದ್ 3 ರನ್‌ಗಳ ಅಂತರದಿಂದ ಗೆದ್ದಿದೆ. ಇದರಲ್ಲಿ ರಾಹುಲ್ ತ್ರಿಪಾಠಿ 44 ಎಸೆತಗಳಲ್ಲಿ 76 ರನ್ ಗಳಿಸಿ ಎಸ್ಆರ್ಹೆಚ್ ಗೆಲುವಿಗೆ ಕಾರಣರಾಗಿದ್ದರು.
ಸಂಭಾವ್ಯ ತಂಡಗಳು ಇಂತಿದೆ..: ಸನ್ ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಡುವಾನ್ ಜಾನ್ಸೆನ್/ಜೋಫ್ರಾ ಆರ್ಚರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ರನ್ ಹೊಳೆ: ಹೈವೋಲ್ಟೇಜ್ ಕ್ಲೈಮ್ಯಾಕ್ಸ್ನಲ್ಲಿ ಆರ್ಸಿಬಿಗೆ ಸೋಲುಣಿಸಿದ ಚೆನ್ನೈ