ಲಕ್ನೋ (ಉತ್ತರ ಪ್ರದೇಶ): ಕೆಎಲ್ ರಾಹುಲ್ ತಮ್ಮ ನಾಯಕತ್ವದ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ಪಂಜಾಬ್ ನಾಯಕ ಸ್ಯಾಮ್ ಕರನ್ ಏಳು ಜನ ಬೌಲರ್ಗಳಿಂದ ಸೂಪರ್ ಜೈಂಟ್ಸ್ನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರು. ಶಿಖರ್ ರಹಿತ ಪಂಜಾಬ್ ತಂಡ ಗೆಲುವಿಗೆ 160 ರನ್ಗಳನ್ನು ಗಳಿಸಬೇಕಾಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಲಕ್ನೋ ಸೂಪರ್ ಜೈಂಟ್ಸ್ ನಿದಾನಗತಿಯ ಆರಂಭ ಪಡೆಯಿತು. ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ 50 ರನ್ ಜೊತೆಯಾಟ ಮಾಡಿದರು. 29 ರನ್ ಗಳಿಸಿದ್ದ ಕೈಲ್ ಮೇಯರ್ಸ್ ಹರ್‌ಪ್ರೀತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದೀಪಕ್ ಹೂಡಾ (2), ಕೃನಾಲ್ ಪಾಂಡ್ಯ (18), ನಿಕೋಲಸ್ ಪೂರನ್ (0), ಮಾರ್ಕಸ್ ಸ್ಟೊಯಿನಿಸ್ (15), ಕೃಷ್ಣಪ್ಪಾ ಗೌತಮ್ (1), ಯುಧ್ವೀರ್ ಸಿಂಗ್ ಚರಕ್ (0) ಬೇಗ ಔಟ್ ಆದರು.
4000 ರನ್ ಪೂರೈಸಿದ ರಾಹುಲ್: ಐಪಿಎಲ್ನಲ್ಲಿ ಕೆಎಲ್ ರಾಹುಲ್ 4000 ರನ್ ಗಡಿ ಮುಟ್ಟಿದರು. ಇಂದಿನ ಇನ್ನಿಂಗ್ಸ್ನಲ್ಲಿ 56 ಬಾಲ್ನ್ನು ಎದುರಿಸಿದ ರಾಹುಲ್ 8 ಬೌಂಡರಿ ಮತ್ತು ಒಂದು ಸಿಕ್ಸ್ನಿಂದ 74 ರನ್ ಗಳಿಸಿದರು. ಕಡಿಮೆ ಇನ್ನಿಂಗ್ಸ್ನಲ್ಲಿ 4000 ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ರಾಹುಲ್ 105 ಇನ್ನಿಂಗ್ಸನಲ್ಲಿ ಈ ದಾಖಲೆ ಮಾಡಿದ್ದಾರೆ ಇದಕ್ಕೂ ಮೊದಲು ಕ್ರಿಸ್ ಗೇಲ್ (112), ಡೇವಿಡ್ ವಾರ್ನರ್ (114), ವಿರಾಟ್ ಕೊಹ್ಲಿ (128) ಮತ್ತು ಎಬಿ ಡಿ ವಿಲಿಯರ್ಸ್ (131) ಈ ಸಾಧನೆ ಮಾಡಿದ್ದರು.
-
🚨 Toss Update 🚨@PunjabKingsIPL elect to field first against @LucknowIPL.
— IndianPremierLeague (@IPL) April 15, 2023 " class="align-text-top noRightClick twitterSection" data="
Follow the match ▶️ https://t.co/OHcd6VfDps#TATAIPL | #LSGvPBKS pic.twitter.com/LVduZ8zRP1
">🚨 Toss Update 🚨@PunjabKingsIPL elect to field first against @LucknowIPL.
— IndianPremierLeague (@IPL) April 15, 2023
Follow the match ▶️ https://t.co/OHcd6VfDps#TATAIPL | #LSGvPBKS pic.twitter.com/LVduZ8zRP1🚨 Toss Update 🚨@PunjabKingsIPL elect to field first against @LucknowIPL.
— IndianPremierLeague (@IPL) April 15, 2023
Follow the match ▶️ https://t.co/OHcd6VfDps#TATAIPL | #LSGvPBKS pic.twitter.com/LVduZ8zRP1
ಪಂಜಾಬ್ ಪರ ಸ್ಯಾಮ್ ಕರನ್ 3, ಕಗಿಸೊ ರಬಾಡ 2 ಮತ್ತು ಅರ್ಶ್‌ದೀಪ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್ ಪಡೆದರು.
ಟಾಸ್: ಲಕ್ನೋ ಸೂಪರ್ ಜೈಂಟ್ಸ್ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಣಯ ತೆಗೆದುಕೊಂಡಿದೆ. ಶಿಖರ್ ಧವನ್ಗೆ ಗಾಯವಾದ ಹಿನ್ನೆಲೆ ಪಂಜಾಬ್ ಕಿಂಗ್ಸ್ನ ನಾಯಕತ್ವವನ್ನು ಇಂದಿನ ಪಂದ್ಯದಲ್ಲಿ ಸ್ಯಾಮ್ ಕರನ್ ವಹಿಸಿಕೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ನ ತವರು ಮೈದಾನವಾದ ಏಕನಾ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 21ನೇ ಪಂದ್ಯ ನಡೆಯುತ್ತಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಸೂಪರ್ ಜೈಂಟ್ಸ್ ಈ ಪಂದ್ಯ ಗೆದ್ದು, ಅಂಕಪಟ್ಟಿಯ ಅಗ್ರಸ್ಥಾನಕ್ಕೇರಲು ಚಿಂತಿಸುತ್ತಿದೆ. ಕಳೆದ ಪಂದ್ಯದಲ್ಲಿ ಗುಜರಾತ್ನ ವಿರುದ್ಧ ಹೀನಾಯ ಸೋಲು ಕಂಡಿದ್ದ, ಪಂಜಾಬ್ ಗೆಲುವಿನ ಟ್ರ್ಯಾಕ್ ಮರಳಲು ಪ್ರಯತ್ನಿಸುತ್ತಿದೆ.
ತಂಡಗಳು ಇಂತಿವೆ..:ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಜಾ, ಸ್ಯಾಮ್ ಕುರ್ರಾನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಆಯುಷ್ ಬದೋನಿ, ಅವೇಶ್ ಖಾನ್, ಯುಧ್ವೀರ್ ಸಿಂಗ್ ಚರಕ್, ಮಾರ್ಕ್ ವುಡ್, ರವಿ ಬಿಷ್ಣೋಯ್
ಇದನ್ನೂ ಓದಿ: PBKSvsLSG: ತವರಿನ ಹ್ಯಾಟ್ರಿಕ್ ಗೆಲುವಿಗೆ ರಾಹುಲ್ ತಂತ್ರ, ಮಧ್ಯಮ ಕ್ರಮಾಂಕ ಗಟ್ಟಿಗೊಳಿಸುವತ್ತ ಶಿಖರ್ ಗಮನ