ಚೆನ್ನೈ (ತಮಿಳುನಾಡು): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವಿಜೇತರು ಯಾರು ಎಂದು ತಿಳಿಯಲು ಇನ್ನೂ ಕೇವಲ ನಾಲ್ಕು ಪಂದ್ಯಗಳು ಮಾತ್ರ ಬಾಕಿ ಇವೆ. ಲೀಗ್ ಹಂತದ ಪಂದ್ಯಗಳು ಮುಗಿದ ನಂತರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಖಾಮುಖಿಯಾಗಿವೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ. ಜಿಟಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಯಶ್ ದಯಾಳ್ ಸ್ಥಾನದಲ್ಲಿ ದರ್ಶನ್ ನಲ್ಕಂಡೆ ಅವರನ್ನು ಆಡಿಸುತ್ತಿದ್ದಾರೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯುತ್ತಿದ್ದು, ತಲೈವಾ ಧೋನಿ ನಾಯಕತ್ವದ ಸಿಎಸ್ಕೆಗೆ ತವರು ಮೈದಾನವಾಗಿದೆ. ಇದೇ ಲಾಭವನ್ನು ಹಳದಿ ಪಡೆ ಬಳಸಿಕೊಳ್ಳಲು ನೋಡುತ್ತಿದೆ. ಇನ್ನು, ಚೆನ್ನೈ ಮೇಲೆ ಇದುವರೆಗೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟಾನ್ಸ್ ಅದೇ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕಿದಿದೆ.
ಕಳೆದ ಬಾರಿ ಚಾಂಪಿಯನ್ ಆಗಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್, ಈ ಆವೃತ್ತಿಯಲ್ಲಿ ಹೋದ ವರ್ಷದ ಚಾಂಪಿಯನ್ ಆಟದ ಚಾರ್ಮನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಲೀಗ್ ಹಂತದಲ್ಲಿ ಕೇವಲ ನಾಲ್ಕು ಸೋಲನ್ನು ಮಾತ್ರ ಕಂಡಿರುವ ಗುಜರಾತ್, ಇಂದು ಗೆದ್ದು ನೇರ ತವರಿನಲ್ಲಿ ಫೈನಲ್ ಆಡುವ ಬಗ್ಗೆ ಯೋಚಿಸುತ್ತಿದೆ.
-
🚨 Toss Update 🚨@gujarat_titans win the toss and elect to field first against @ChennaiIPL.
— IndianPremierLeague (@IPL) May 23, 2023 " class="align-text-top noRightClick twitterSection" data="
Follow the match ▶️ https://t.co/LRYaj7cLY9 #TATAIPL | #Qualifier1 | #GTvCSK pic.twitter.com/Bhj5g0Gv30
">🚨 Toss Update 🚨@gujarat_titans win the toss and elect to field first against @ChennaiIPL.
— IndianPremierLeague (@IPL) May 23, 2023
Follow the match ▶️ https://t.co/LRYaj7cLY9 #TATAIPL | #Qualifier1 | #GTvCSK pic.twitter.com/Bhj5g0Gv30🚨 Toss Update 🚨@gujarat_titans win the toss and elect to field first against @ChennaiIPL.
— IndianPremierLeague (@IPL) May 23, 2023
Follow the match ▶️ https://t.co/LRYaj7cLY9 #TATAIPL | #Qualifier1 | #GTvCSK pic.twitter.com/Bhj5g0Gv30
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್ ಪ್ರವೇಶ ಪಡೆದಿದ್ದು, ನಾಲ್ಕು ಬಾರಿ ಕಪ್ ಗೆದ್ದುಕೊಂಡ ಇತಿಹಾಸ ಹೊಂದಿದೆ. ಕಳೆದ ವರ್ಷ ಹಳದಿ ಜರ್ಸಿ ಪಡೆ ಕಳಪೆ ಆಟದ ಪ್ರದರ್ಶನದಿಂದ ಅಂಕಪಟ್ಟಿಯ ತಳಮಟ್ಟದಲ್ಲಿತ್ತು. ಇಂದು ಸಿಎಸ್ಕೆ ಪಂದ್ಯ ಗೆದ್ದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ. ಧೋನಿ ಇದೇ ಸಾಧ್ಯತೆಗಳನ್ನು ಮೈದಾನದ ಪಿಚ್ನಲ್ಲಿ ಹುಡುಕಲಿದ್ದಾರೆ ಎಂಬುದು ಖಚಿತ.
ಧೋನಿಗೆ ಈ ಆವೃತ್ತಿ ಕೊನೆಯಾ?: 16ನೇ ಆವೃತ್ತಿಯ ಐಪಿಎಲ್ ಆರಂಭವಾದಾಗಿನಿಂದ ಧೋನಿಯ ನಿವೃತ್ತಿಯ ಮಾತು ಎಲ್ಲೆಡೆ ಕೇಳಿಬಂದಿತ್ತು. ಅಲ್ಲದೇ ಚೆನ್ನೈ ಆಡಿದ ಎಲ್ಲಾ ಕ್ರೀಡಾಂಗಣದಲ್ಲಿ ಚೆನ್ನೈ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಲ್ಲದೇ, ಎಲ್ಲೆಡೆ ಸಿಎಸ್ಕೆಗೆ ಬೆಂಬಲ ವ್ಯಕ್ತವಾಗಿತ್ತು. ಕೋಲ್ಕತ್ತಾ ಎದುರಿನ ಚೆನ್ನೈನಲ್ಲಿ ನಡೆದ ಕೊನೆಯ ತವರಿನ ಲೀಗ್ ಪಂದ್ಯದಲ್ಲಿ ಅಭಿಮಾನಿಗಳತ್ತ ಕೈ ಬೀಸಿ ಧೋನಿ ಇಡೀ ಮೈದಾನ ಸುತ್ತಿದ್ದರು. ಈ ವೇಳೆ ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಅವರು ತಮ್ಮ ಅಂಗಿಯ ಮೇಲೆ ಸಹಿ ಸಹ ತೆಗೆದುಕೊಂಡಿದ್ದರು.
41 ವರ್ಷದ ಧೋನಿ ಇನ್ನೂ ಚೆನ್ನೈ ತಂಡದ ಭಾಗವಾಗಿ ಮುಂದುವರೆಯುತ್ತಾರಾ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಅಂತಾರಾಷ್ಟ್ರೀಯ ತಂಡಕ್ಕೆ ಧೋನಿ ನಾಲ್ಕು ವರ್ಷಗಳ ಹಿಂದೆ ವಿದಾಯ ಹೇಳಿದರು. ಈಗ ಐಪಿಎಲ್ನಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಪಂದ್ಯ ಒಂದರ ಟಾಸ್ ಸಮಯದಲ್ಲಿ, ನಿಮ್ಮ ಐಪಿಎಲ್ ವೃತ್ತಿ ಜೀವನದ ಕೊನೆಯ ಪಂದ್ಯಗಳನ್ನು ಆಡುತ್ತಿದ್ದೀರಿ ಹೇಗೆನಿಸುತ್ತಿದೆ ಎಂದು ಕೇಳಿದಾಗ, ನೀವೆಲ್ಲರೂ ಸೇರಿ ನನಗೆ ನಿವೃತ್ತಿ ಎಂದು ಹೇಳುತ್ತಿದ್ದೀರಿ, ನಾನು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ ಎಂದಿದ್ದರು.
ತಂಡಗಳು ಇಂತಿವೆ: ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ(ನಾಯಕ/ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷ್ಣ
ಗುಜರಾತ್ ಟೈಟಾನ್ಸ್: ಶುಭಮಾನ್ ಗಿಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ನಾಯಕ), ದಾಸುನ್ ಶನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಇದನ್ನೂ ಓದಿ: ಧೋನಿ ಜೊತೆಗಿನ ಅನುಭವ ಹಂಚಿಕೊಂಡ ಗುಜರಾತ್ ನಾಯಕ ಹಾರ್ದಿಕ್