ಮುಂಬೈ: ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆರಿಸಿಕೊಂಡಿದೆ. ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಮಾರ್ಕೊ ಜಾನ್ಸನ್ರಂತಹ ಬೌಲಿಂಗ್ ಪಡೆಯೇ ಹೈದರಾಬಾದ್ನ ಬಲವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸೋಲು ಕಂಡರೂ ಭರ್ಜರಿ ಪೈಪೋಟಿ ನೀಡಿತ್ತು.
-
A look at the Playing XI for #SRHvCSK
— IndianPremierLeague (@IPL) May 1, 2022 " class="align-text-top noRightClick twitterSection" data="
Live - https://t.co/lXkEMWKc0U #TATAIPL https://t.co/Jla6JtuPDp pic.twitter.com/z0y4rhUAmi
">A look at the Playing XI for #SRHvCSK
— IndianPremierLeague (@IPL) May 1, 2022
Live - https://t.co/lXkEMWKc0U #TATAIPL https://t.co/Jla6JtuPDp pic.twitter.com/z0y4rhUAmiA look at the Playing XI for #SRHvCSK
— IndianPremierLeague (@IPL) May 1, 2022
Live - https://t.co/lXkEMWKc0U #TATAIPL https://t.co/Jla6JtuPDp pic.twitter.com/z0y4rhUAmi
ಆಡಿರುವ 8 ಪಂದ್ಯಗಳಲ್ಲಿ ಸತತವಾಗಿ 5 ರಲ್ಲಿ ಗೆಲುವು ಕಂಡಿದ್ದ ಹೈದರಾಬಾದ್ನ ಗೆಲುವಿನ ಓಟಕ್ಕೆ ಗುಜರಾತ್ ಟೈಟಾನ್ಸ್ ಬ್ರೇಕ್ ಹಾಕಿತ್ತು. ಈ ಐಪಿಎಲ್ ಸೀಸನ್ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಕ್ಯಾಪ್ಟನ್ಸಿಗೆ ಮರಳಿದ ಧೋನಿ: ಇನ್ನು 4 ಬಾರಿಯ ಚಾಂಪಿಯನ್ ತಂಡವಾಗಿರುವ ಸಿಎಸ್ಕೆ ಈ ಅವತರಣಿಕೆಯಲ್ಲಿ ಕಳಪೆ ಸಾಧನೆ ಮಾಡಿದೆ. ಲೀಗ್ ಆರಂಭಕ್ಕೂ ಮುನ್ನ ಯಶಸ್ವಿ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, ಆಲ್ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ ಬಿಟ್ಟು ಕೊಟ್ಟಿದ್ದರು. ಆದರೆ, ಇದು ಫಲ ನೀಡಲಿಲ್ಲ.
ಸತತ ಸೋಲಿನ ಬಳಿಕ ರವೀಂದ್ರ ಜಡೇಜಾ ನಾಯಕತ್ವವನ್ನು ತ್ಯಜಿಸಿದ್ದಾರೆ. ಸಿಎಸ್ಕೆ ತಂಡದ ಜವಾಬ್ದಾರಿ ಮತ್ತೆ ಧೋನಿ ಹೆಗಲಿಗೇ ಬಿದ್ದಿದೆ. ಉಳಿದ ಪಂದ್ಯಗಳಲ್ಲಿ ಧೋನಿ ತಂಡವನ್ನು ಮುನ್ನಡೆಸಿ ಪ್ಲೇ ಆಫ್ಗೆ ಕೊಂಡೊಯ್ಯಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಇತ್ತಂಡಗಳ ಮಾಹಿತಿ: ಸಿಎಸ್ಕೆ: ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವಾಯ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಪ್ರಿಟೋರಿಯಸ್, ಸಿಮ್ರಾಜಿತ್ ಸಿಂಗ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ.
ಹೈದರಾಬಾದ್: ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡನ್ ಮಾಕ್ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸನ್, ಉಮ್ರಾನ್ ಮಲಿಕ್, ಟಿ. ನಟರಾಜನ್.
ಓದಿ: IPL: ವಿರಾಟ್ ಫಿಫ್ಟಿಗೆ ಅನುಷ್ಕಾ ರಿಯಾಕ್ಷನ್, ಶಮಿ ಶಹಬ್ಬಾಸ್‌ಗಿರಿ ಹೇಗಿತ್ತು ನೋಡಿ...