ಹೈದರಾಬಾದ್: ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದರಾಬಾದ್ ಇಂದು ಮೊದಲ ಗೆಲುವಿಗಾಗಿ ಹಂಬಲಿಸುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಸೆಣಸಾಟ ನಡೆಯಲಿದೆ. ಕಳೆದೆರಡು ಪಂದ್ಯದಲ್ಲಿನ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಲು ರೈಸರ್ಸ್ ಹವಣಿಸುತ್ತಿದೆ.
ಕಳೆದೆರಡು ಸೀಸನ್ನಲ್ಲಿಯೂ 8ನೇ ಸ್ಥಾನದಲ್ಲೇ ಉಳಿದುಕೊಂಡಿರುವ ಎಸ್ಆರ್ಹೆಚ್ ಈ ವರ್ಷ ಉತ್ತಮ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಎದುರು ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋತಿದ್ದಲ್ಲದೇ, ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಹೀನಾಯ ಸೋಲು ಕಂಡು ಕಡಿಮೆ ರನ್ ರೇಟ್ನಿಂದ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
-
Together, we fight 🧡🔥#OrangeFireIdhi #OrangeArmy #IPL2023 #SRHvPBKS pic.twitter.com/dx0x0F0cSz
— SunRisers Hyderabad (@SunRisers) April 9, 2023 " class="align-text-top noRightClick twitterSection" data="
">Together, we fight 🧡🔥#OrangeFireIdhi #OrangeArmy #IPL2023 #SRHvPBKS pic.twitter.com/dx0x0F0cSz
— SunRisers Hyderabad (@SunRisers) April 9, 2023Together, we fight 🧡🔥#OrangeFireIdhi #OrangeArmy #IPL2023 #SRHvPBKS pic.twitter.com/dx0x0F0cSz
— SunRisers Hyderabad (@SunRisers) April 9, 2023
ಬ್ಯಾಟಿಂಗ್ನಲ್ಲಿ ಚೇತರಿಸಿಕೊಳ್ಳದ ಎಸ್ಆರ್ಹೆಚ್: ಹೈದರಾಬಾದ್ ತಂಡ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿಲ್ಲ. ಎರಡನೇ ಪಂದ್ಯಕ್ಕೆ ನಾಯಕರಾಗಿ ಐಡೆನ್ ಮಾರ್ಕ್ರಾಮ್ ಸೇರಿಕೊಂಡ ನಂತರ ತಂಡದ ಬ್ಯಾಟಿಂಗ್ಗೆ ಬಲ ಬರಲಿದೆ ಎಂದು ಭರವಸೆ ಇತ್ತು. ಆದರೆ ಕಳೆದ ಪಂದ್ಯದಲ್ಲಿ ನಾಯಕ ಶೂನ್ಯಕ್ಕೆ ಔಟಾಗಿ ನಿರೀಕ್ಷೆ ಹುಸಿಗೊಳಿಸಿದರು.
ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್‌ರಿಂದ ಬೃಹತ್ ಜೊತೆಯಾಟದ ನಿರೀಕ್ಷೆ ಇದ್ದು ಎರಡೂ ಪಂದ್ಯದಲ್ಲಿಯ ನಿರೀಕ್ಷೆ ಈಡೇರಲಿಲ್ಲ. ಮೊದಲ ಪಂದ್ಯದಲ್ಲಿ ಅಭಿಷೇಕ್ ಡಕ್ ಔಟ್ ಆದರೆ, ಎರಡನೇ ಪಂದ್ಯದಲ್ಲಿ ಅಗರ್ವಾಲ್ 8 ರನ್ ವಿಕೆಟ್ ನೀಡಿದರು. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲೂ ಯಾವ ಬ್ಯಾಟರ್ಗಳು ಟಿ20 ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ತಂಡಕ್ಕೆ 130 ರನ್ ಗಡಿ ದಾಟಲು ಸಾಧ್ಯವಾಗುತ್ತಿಲ್ಲ.
ವಿದೇಶಿಗರಿಗೆ ಮಣೆ ಹಾಕುವ ಸಾಧ್ಯತೆ: ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ನಿರ್ವಹಣೆ ಮಾಡಲಿದ್ದು, ಮಾರ್ಕೊ ಜಾನ್ಸೆನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ರನ್ ಕಲೆ ಹಾಕಬಲ್ಲರು.
-
It's⚡vs 🦾 in a battle of the big guns!#SherSquad, hold on to your seats as the superheroes face each other in an epic showdown in Hyderabad! 🦸♂#JazbaHaiPunjabi #SaddaPunjab #SRHvPBKS #TATAIPL pic.twitter.com/QnydlcH9U2
— Punjab Kings (@PunjabKingsIPL) April 9, 2023 " class="align-text-top noRightClick twitterSection" data="
">It's⚡vs 🦾 in a battle of the big guns!#SherSquad, hold on to your seats as the superheroes face each other in an epic showdown in Hyderabad! 🦸♂#JazbaHaiPunjabi #SaddaPunjab #SRHvPBKS #TATAIPL pic.twitter.com/QnydlcH9U2
— Punjab Kings (@PunjabKingsIPL) April 9, 2023It's⚡vs 🦾 in a battle of the big guns!#SherSquad, hold on to your seats as the superheroes face each other in an epic showdown in Hyderabad! 🦸♂#JazbaHaiPunjabi #SaddaPunjab #SRHvPBKS #TATAIPL pic.twitter.com/QnydlcH9U2
— Punjab Kings (@PunjabKingsIPL) April 9, 2023
ಚೊಚ್ಚಲ ಪ್ರಶಸ್ತಿಯತ್ತ ಪಂಜಾಬ್.. : ಐಪಿಎಲ್ ಲೀಗ್ ಆರಂಭವಾದಾಗಿನಿಂದ ಆರ್ಸಿಬಿ ಮತ್ತು ಪಂಜಾಬ್ಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ವರ್ಷ ಶಿಖರ್ ಧವನ್ ನಾಯಕತ್ವದಲ್ಲಿ ಉತ್ತಮ ಆರಂಭ ಕಂಡಿದ್ದು, ಎರಡು ಪಂದ್ಯಗಳಲ್ಲಿ ಜಯಿಸಿರುವ ತಂಡ ಮೂರನೇ ಗೆಲುವನ್ನು ಎದುರು ನೋಡುತ್ತಿದೆ. ನಾಯಕ ಶಿಖರ್ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದು, ಭಾನುಕಾ ರಾಜಪಕ್ಸೆ ಕೂಡಾ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಇವರೊಂದಿಗೆ ಯುವ ಆಟಗಾರರಾದ ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ ಮತ್ತು ಶಾರುಖ್ ಖಾನ್ ಸಹ ಪರಿಣಾಮಕಾರಿಯಾಗಿದ್ದಾರೆ.
ಸಂಭಾವ್ಯ ತಂಡ: ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್ /ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಆದಿಲ್ ರಶೀದ್/ಮಾರ್ಕೊ ಜಾನ್ಸೆನ್
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಿಕಂದರ್ ರಜಾ, ಶಾರುಖ್ ಖಾನ್, ಸ್ಯಾಮ್ ಕರ್ರಾನ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ಅರ್ಶ್ದೀಪ್ ಸಿಂಗ್
ನೇರ ಪ್ರಸಾರ: ಜಿಯೋಸಿನಿಮಾ ಮತ್ತು ಸ್ಟಾರ್ ಸ್ಪೋರ್ಟ್.
ಇದನ್ನೂ ಓದಿ: IPLನಲ್ಲಿ 2 ಸಾವಿರ ರನ್ ಸರದಾರನಾದ ಗಿಲ್! ಇವರಿಗಿಂತ ಮೊದಲ ಸಾಧಕರು ಯಾರು ಗೊತ್ತೇ?