ಹೈದರಾಬಾದ್ (ತೆಲಂಗಾಣ): ಮತ್ತೆ ಬ್ಯಾಟಿಂಗ್ ವೈಫ್ಯಕ್ಕೆ ಒಳಗಾದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ನಲ್ಲಿ 9 ವಿಕೆಟ್ ನಷ್ಟದಲ್ಲಿ 144 ರನ್ ಕಲೆಹಾಕಿತು. ಮನೀಷ್ ಪಾಂಡೆ ಮತ್ತು ಅಕ್ಷರ್ ಪಟೇಲ್ ಅವರ 34 ರನ್ ಸಹಾಯದಿಂದ ಡಿಸಿ ಸನ್ ರೈಸರ್ಸ್ ಹೈದರಾಬಾದ್ಗೆ 145 ರನ್ಗಳ ಸರಳ ಮೊತ್ತವನ್ನು ಗುರಿಯಾಗಿ ನೀಡಿತು. ವಾಷಿಂಗ್ಟನ್ ಸುಂದರ್ ಹೈದರಾಬಾದ್ ಪರ ಮೂರು ವಿಕೆಟ್ ಕಿತ್ತು ಡೆಲ್ಲಿಗೆ ಕಂಟಕವಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೇವಿಡ್ ವಾರ್ನರ್ ಲೆಕ್ಕಾಚಾರ ಅಡಿಮೇಲಾಯಿತು. ಆರಂಭಿಕ ಪೃಥ್ವಿ ಶಾಗೆ ಕೊಕ್ ನೀಡಿ ಫಿಲಿಪ್ ಸಾಲ್ಟ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಫಿಲಿಪ್ ಸಾಲ್ಟ್ ಇಂದು ಇನ್ನಿಂಗ್ಸ್ ಆರಂಭವಾದ ಕೂಡಲೇ ಶೂನ್ಯಕ್ಕೆ ವಿಕೆಟ್ ಕೊಟ್ಟರು.
ಅವರ ನಂತರ ಕ್ರೀಸ್ಗೆ ಬಂದ ಮಿಚೆಲ್ ಮಾರ್ಷ್ ಡೇವಿಡ್ ವಾರ್ನರ್ ಜೊತೆ ಕೆಲ ಹೊತ್ತು ಜೊತೆಯಾಟ ಮಾಡಿದರು. 15 ಬಾಲ್ನಲ್ಲಿ 25 ರನ್ ಗಳಿಸಿ ನಟರಾಜನ್ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತ ಬಂದಿದ್ದ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಸಹ ಇಂದು 21 ಕ್ಕೆ ವಿಕೆಟ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೆ ಸರ್ಫರಾಜ್ ಖಾನ್ (10) ವಿಕೆಟ್ ಕೊಟ್ಟರು. ನಂತರ ಬಂದ ಅಮನ್ ಹಕೀಮ್ ಖಾನ್ (4) ಕೂಡ ದೊಡ್ಡ ರನ್ ಗಳಿಸಲಿಲ್ಲ.
-
Innings Break!
— IndianPremierLeague (@IPL) April 24, 2023 " class="align-text-top noRightClick twitterSection" data="
3⃣ wickets for @Sundarwashi5
2⃣ wickets for @BhuviOfficial @SunRisers restrict @DelhiCapitals 144/9.
The #SRH chase to begin 🔜!
Scorecard ▶️ https://t.co/ia1GLIX1Py #TATAIPL | #SRHvDC pic.twitter.com/bH7dsyRDza
">Innings Break!
— IndianPremierLeague (@IPL) April 24, 2023
3⃣ wickets for @Sundarwashi5
2⃣ wickets for @BhuviOfficial @SunRisers restrict @DelhiCapitals 144/9.
The #SRH chase to begin 🔜!
Scorecard ▶️ https://t.co/ia1GLIX1Py #TATAIPL | #SRHvDC pic.twitter.com/bH7dsyRDzaInnings Break!
— IndianPremierLeague (@IPL) April 24, 2023
3⃣ wickets for @Sundarwashi5
2⃣ wickets for @BhuviOfficial @SunRisers restrict @DelhiCapitals 144/9.
The #SRH chase to begin 🔜!
Scorecard ▶️ https://t.co/ia1GLIX1Py #TATAIPL | #SRHvDC pic.twitter.com/bH7dsyRDza
ಅಕ್ಷರ್, ಪಾಂಡೆ ಆಸರೆ: ಸತತ ವಿಕೆಟ್ ಪತನ ವಾಗುತ್ತಿದ್ದಾಗ ಅಕ್ಷರ್ ಪಟೇಲ್ ಮತ್ತು ಮನೀಷ್ ಪಾಂಡೆ ಆಸರೆಯಾದರು. ನೂರು ರನ್ ಒಳಗೆ ಆಲ್ ಔಟ್ ಆಗುತ್ತಿದ್ದ ತಂಡಕ್ಕೆ ಚೇತರಿಕೆ ನೀಡಿದರು. ಮನೀಷ್ ಪಾಂಡೆ 27 ಬಾಲ್ ಎದುರಿಸಿ 2 ಬೌಂಡರಿಯಿಂದ 34 ರನ್ ಗಳಿಸಿ ರನ್ ಔಟ್ಗೆ ಬಲಿಯಾದರು. ಅವರ ಬೆನ್ನಲ್ಲೆ ಉತ್ತಮವಾಗ ಆಡುತ್ತಿದ್ದ ಅಕ್ಷರ್ ಪಟೇಲ್ ಕೂಡಾ 34 ರನ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೆ ರಿಪಾಲ್ ಪಟೇಲ್ (5) ಮತ್ತು ಅನ್ರಿಚ್ ನಾರ್ಟ್ಜೆ (2) ರನ್ ಔಟ್ಗೆ ಪೆವಿಲಿಯನ್ ದಾರಿ ಹಿಡಿದರು. ಕುಲ್ದೀಪ್ ಮತ್ತು ಇಶಾತ್ ಶರ್ಮಾ ಅಜೇಯರಾಗಿ ಉಳಿದು ಆಲ್ಔಟ್ನಿಂದ ತಪ್ಪಿಸಿದರು.
ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 3, ಭುವನೇಶ್ವರ್ ಕುಮಾರ್ 2, ನಟರಾಜನ್ 1 ವಿಕೆಟ್ ಪಡೆದರು. ಮೂವರು ಬ್ಯಾಟರ್ಗಳು ರನ್ ಔಟ್ಗೆ ಬಲಿಯಾದರು.
ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ
ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಐಡೆನ್ ಮಾರ್ಕ್ರಾಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಇದನ್ನೂ ಓದಿ: SRH vs DC: ಗೆಲುವಿನ ಲಯ ಮುಂದುವರೆಸುತ್ತಾ ಡೆಲ್ಲಿ?: ಉಭಯ ತಂಡಗಳಿಗೆ ಜಯ ಅನಿವಾರ್ಯ