ETV Bharat / sports

ಐಪಿಎಲ್ 2023ರ ಆವೃತ್ತಿಯ ಸಿಕ್ಸ್​ ವೀರರು: ​ಬೌಂಡರಿಗಿಂತ ಹೆಚ್ಚು ಸಿಕ್ಸ್​ ದಾಖಲಿಸಿದ ಬ್ಯಾಟರ್​ಗಳಿವರು - IPL 2023

2023ರ ಐಪಿಎಲ್​ ಆವೃತ್ತಿ ಅರ್ಧದಷ್ಟು ಮುಕ್ತಾಯವಾಗಿದ್ದು, ಈ ವರೆಗೆ ಬೌಂಡರಿಗಿಂತ ಸಿಕ್ಸರ್​ಗಳನ್ನು ಹೆಚ್ಚು ಬಾರಿಸಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ..

Etv Bharat
Etv Bharat
author img

By

Published : Apr 28, 2023, 7:23 PM IST

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ, ಅರ್ಧದಷ್ಟು ಪಂದ್ಯಗಳು ಮುಕ್ತಾಯವಾಗಿದೆ. ಮೈದಾನದಲ್ಲಿ ಆಟಗಾರರು ಹಲವಾರು ದಾಖಲೆಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಇನ್ನುಳಿದ ಪಂದ್ಯಗಳಿಲ್ಲಿ ಫಾರ್ಮ್​ನಲ್ಲಿರುವ ಬ್ಯಾಟರ್​ಗಳಿಂದ ಭರ್ಜರಿ ರನ್​ ಜೊತೆಗೆ ಹೊಸ ದಾಖಲೆಗಳು ಸೃಷ್ಠಿಯಾಗುವ ನಿರೀಕ್ಷೆಯೂ ಇದೆ. ಐಪಿಎಲ್​ ಎಂದಾಕ್ಷಣ ನೆನಪಾಗುವುದು ಸ್ಪೋಟಕ ಬ್ಯಾಟಿಂಗ್. ಮೈದಾನದಲ್ಲಿ ಬ್ಯಾಟರ್​ಗಳು ಚೆಂಡನ್ನು ಗ್ರೌಂಡ್​ನ ಮೂಲೆ ಮೂಲೆಗೂ ಅಟ್ಟುತ್ತಿರುತ್ತಾರೆ. ಒಂದೇ ಓವರ್​ನಲ್ಲಿ ಹಲವಾರು ಅವಿಸ್ಮರಣೀಯ ಕ್ಷಣಗಳು ಉಂಟಾಗುತ್ತದೆ.

ಐಪಿಎಲ್​ನ ಈ ಸೀಸನ್​​ನಲ್ಲಿ ಬೌಂಡರಿಗಿಂತಲೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್​ಗಳು ಯಾರು ಎಂಬುದರ ಅಂಕಿ - ಅಂಶ ಇಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ ಆಡಿದ ಎಂಟು ಪಂದ್ಯಗಳಲ್ಲಿ 23 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್​ ರಿಂಕು ಸಿಂಗ್ ಇದ್ದಾರೆ, ಅವರು ಇದುವರೆಗೆ ಆಡಿದ ಎಂಟು ಪಂದ್ಯಗಳಲ್ಲಿ 18 ಸಿಕ್ಸರ್ ಮತ್ತು 15 ಬೌಂಡರಿಗಳನ್ನು ಬಾರಿಸಿದ್ದಾರೆ. ಒಂದು ಪಾಂದ್ಯದಲ್ಲಿ ಅವರ ಕೊನೆಯ ಓವರ್​ನ ಐದು ಸಿಕ್ಸ್​​ ಪಂದ್ಯದ ಗೆಲುವಿಗೆ ಕಾರಣವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟಿಂಗ್ ಮಾಡುವ ಆಲ್‌ರೌಂಡರ್ ಶಿವಂ ದುಬೆ ಅವರು 8 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 19 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದಾರೆ.

ರಾಜಸ್ಥಾನ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ 8 ಪಂದ್ಯಗಳಲ್ಲಿ ಇದುವರೆಗೆ 8 ಇನ್ನಿಂಗ್ಸ್‌ಗಳಲ್ಲಿ 15 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದ್ದಾರೆ. ಅಲ್ಲದೇ ಕೊನೆಯ ಓವರ್‌ಗಳಲ್ಲಿ ಫಿನಿಶರ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾತ್ರ ನಿರ್ವಹಿಸಿದ್ದ ನಿಕೋಲಸ್ ಪೂರನ್ ಕೂಡ ಇದುವರೆಗೆ ಆಡಿದ ಪಂದ್ಯಗಳಲ್ಲಿ ಬೌಂಡರಿಗಿಂತಲೂ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ. ಅವರು 15 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಸಹ ಹೊಡೆದಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಳೆದ ಸೀಸನ್​ಗಳಲ್ಲಿ ಘರ್ಜಿಸುತ್ತಿದ್ದ ಆಂಡ್ರೆ ರಸೆಲ್ ಈ ವರ್ಷ ಸ್ವಲ್ಪ ಮಂಕಾಗಿದ್ದಾರೆ. ಆದರೂ ಅವರ ಬ್ಯಾಟ್​ನಿಂದ ಈ ವರೆಗೆ 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದ್ದಾರೆ. ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್‌ ತಂಡದಲ್ಲಿ ದುಬೆ ನಂತರ ರವೀಂದ್ರ ಜಡೇಜಾ ಇದುವರೆಗೆ 5 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದ್ದರೆ, ಮಹೇಂದ್ರ ಸಿಂಗ್ ಧೋನಿ ಇದುವರೆಗೆ ಆಡಿರುವ ಪಂದ್ಯಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ವಿರಾಟ್​: ಈ ಸಾಧನೆ ಮಾಡಿದ ಮೊದಲಿಗೆ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.