ಅಹಮದಾಬಾದ್ (ಗುಜರಾತ್): ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್, ಏಕದಿನ, ಟಿ20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಬಾರಿಸಿದ ಇತಿಹಾಸದಲ್ಲಿ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಸೋಮವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ಶುಭಮನ್ 58 ಎಸೆತಗಳಲ್ಲಿ 101 ರನ್ ಗಳಿಸಿ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ದಾಖಲೆಯನ್ನು ನಿರ್ಮಿಸಿದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ದ್ವಿಶತಕ ಗಳಿಸಿ ಈ ವರ್ಷವನ್ನು ಶುಭಮನ್ ಗಿಲ್ ಆರಂಭಿಸಿದರು. ಇದು ಭಾರತದ ಪರ ಏಳನೇ ಏಕದಿನ ದ್ವಿಶತಕವಾದರೆ ಐದನೇ ಬ್ಯಾಟರ್ ಶುಭಮನ್ ಗಿಲ್ ಆಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ 149 ಎಸೆತಗಳಲ್ಲಿ 208 ರನ್ ಗಳಿಸಿದರು. ತಮ್ಮ ನೆಚ್ಚಿನ ಮೈದಾನದಲ್ಲಿ ಆಡುತ್ತಿರುವ ಶುಭಮನ್ ನ್ಯೂಜಿಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದರು. ಟಿ 20 ಶತಕದ ಇನ್ನಿಂಗ್ಸ್ನಲ್ಲಿ ಗಿಲ್ 99 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನೊಂದಿಗೆ 126* ರನ್ ಗಳಿಸಿದರು.
-
𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023 " class="align-text-top noRightClick twitterSection" data="
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN
">𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN
ಈ ವರ್ಷದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗಿಲ್ ಶತಕ ದಾಖಲಿಸಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗಿಲ್ ಅವರು 128 ರನ್ ಗಳಿಸಿದ್ದರು. ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಅವರು 48.00 ಸರಾಸರಿ ಮತ್ತು 146.19 ಸ್ಟ್ರೈಕ್ ರೇಟ್‌ನೊಂದಿಗೆ 576 ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ.
ಗಿಲ್ಗೆ ಅಹಮದಾಬಾದ್ ಪಿಚ್ ಅಚ್ಚುಮೆಚ್ಚು: ಈ ಆವೃತ್ತಿಯ ಐಪಿಎಲ್ಗೂ ಮುನ್ನ ಇಲ್ಲಿ ಟೆಸ್ಟ್ ಮ್ಯಾಚ್ ಶತಕದ ಬಳಿಕ ಐಪಿಎಲ್ ಟಿ20 ಶತಕವನ್ನೂ ದಾಖಲಿಸಿದರು. ಏಳು ಪಂದ್ಯದಲ್ಲಿ ಒಂದರಲ್ಲಿ ಮಾತ್ರ ಗಿಲ್ ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದಾರೆ. ಚೆನ್ನೈ ಎದುರಿನ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಗಿಲ್ 63 ರನ್ ಗಳಿಸಿದ್ದರು. ನಂತರ ಕೋಲ್ಕತ್ತಾ ವಿರುದ್ಧ 39, ಆರ್ಆರ್ ಮೇಲೆ 45, ಮುಂಬೈ ವಿರುದ್ಧ 56, ಲಕ್ನೋ ವಿರುದ್ಧ ಅಜೇಯ 94, ಮತ್ತು ನಿನ್ನೆಯ ಪಂದ್ಯದಲ್ಲಿ 101 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರು ಗಳಿಸಿದ ನಾಲ್ಕು ಅರ್ಧಶತಕದಲ್ಲಿ ಮೂರು ಇದೇ ಮೈದಾನದಿಂದ ಬಂದಿದೆ.
ಶುಭಮನ್ ಗಿಲ್ ಅವರ ಶತಕ ಮತ್ತು ಮೊಹಮದ್ ಶಮಿ ಅವರ ಚೆಂಡಿನ ಪ್ರಭಾವಶಾಲಿ ಪ್ರದರ್ಶನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 34 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ಅವರು ಒಂಬತ್ತು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 18 ಅಂಕಗಳನ್ನು ಹೊಂದಿದ್ದಾರೆ. ಎಸ್‌ಆರ್‌ಎಚ್ ಎಂಟು ಅಂಕಗಳೊಂದಿಗೆ ಟೇಬಲ್‌ನಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳನ್ನು ಗೆದ್ದು ಎಂಟರಲ್ಲಿ ಸೋತಿದೆ.
ಇದನ್ನೂ ಓದಿ: ಶುಭ್ಮನ್ ಗಿಲ್ ಶತಕದಾಟ, ಹೈದರಾಬಾದ್ ವಿರುದ್ಧ ಗೆದ್ದ ಟೈಟಾನ್ಸ್ : ಪ್ಲೇ ಆಫ್ಗೆ ಪ್ರವೇಶ